ವಿಜಯಪುರ: ತನ್ನ ಕುಟುಂಬಸ್ಥರನ್ನೆಲ್ಲಾ ಕಳೆದುಕೊಂಡು ಅನಾಥೆಯಾಗಿದ್ದ ಹಿಂದೂ ಯುವತಿಯೊಬ್ಬಳನ್ನು ಸ್ವಂತ ಮಗಳಂತೆ ಸಾಕಿದ್ದ ಮುಸ್ಲಿಂ ವ್ಯಕ್ತಿಯೊಬ್ಬರು ಹಿಂದೂ ಸಂಪ್ರದಾಯದಂತೆ ಆಕೆಯ ಮದುವೆ ನೆರವೇರಿಸಿದ್ದಾರೆ. ಕೋಮು ಸೌಹಾರ್ದತೆ ಮೇರೆದ ಈ ಘಟನೆಗೆ ಸಾಕ್ಷಿಯಾಗಿದ್ದು ವಿಜಯಪುರ ಜಿಲ್ಲೆ


COMMERCIAL BREAK
SCROLL TO CONTINUE READING

ಹೌದು, ತಂದೆ-ತಾಯಿ, ಅಜ್ಜಿಯನ್ನು ಕಳೆದುಕೊಂಡು ಅನಾಥಳಾಗಿದ್ದ ಬಾಲಕಿಯನ್ನು ಮೆಹಬೂಬ್ ಮುಸಳಿ ಎಂಬುವರು ತನ್ನ ಸ್ವಂತ ಮಗಳಂತೆ ಸಾಕಿ-ಸಲುಹಿ ಕೊನೆಗೆ ಹಿಂದೂ ಸಂಪ್ರದಾಯದಂತೆಯೇ ಆಕೆಯ ಮದುವೆ ಮಾಡಿಕೊಟ್ಟಿದ್ದಾರೆ. ಕೆಲ ವರ್ಷಗಳ ಹಿಂದೆ ತನ್ನ ಕುಟುಂಬಸ್ಥರನ್ನೆಲ್ಲಾ ಕಳೆದುಕೊಂಡು ಪೂಜಾ ಒಡಗೇರಿ ಎಂಬ ಯುವತಿ ಅನಾಥಳಾಗಿದ್ದಳು. ಈ ವೇಳೆ ಪತ್ನಿ ಹಾಗೂ ನಾಲ್ವರು ಮಕ್ಕಳ ಜೊತೆಗೆ ಪೂಜಾಳಿಗೂ ಮೆಹಬೂಬ್ ಮಸಳಿ ಆಶ್ರಯ ನೀಡಿ ಸಾಕಿದ್ದಾರೆ.


ತಂದೆ-ತಾಯಿ ಕಳೆದುಕೊಂಡ ಬಾಲಕಿಗೆ ಯಾವುದೇ ರೀತಿ ಅನಾಥ ಭಾವ ಬರದಂತೆ ಮೆಹಬೂಬ್ ತನ್ನ ಸ್ವಂತ ಮಗಳಂತೆಯೇ ಪೋಷಿಸಿದ್ದಾರೆ. ಮದುವೆ ವಯಸ್ಸಿಗೆ ಬಂದ ಸಾಕು ಮಗಳಿಗೆ ಹಿಂದೂ ಸಂಪ್ರದಾಯದಂತೆಯೇ ಮದುವೆ ಮಾಡಿಕೊಟ್ಟು ಸೌಹಾರ್ದತೆ ಮೆರೆದಿದ್ದಾರೆ. ಬಸವನಬಾಗೇವಾಡಿಯ ಸಾರವಾಡ ಗ್ರಾಮದ ಶಂಕರಪ್ಪ ಕುಂದರವಾಲೆಯೊಂದಿಗೆ ಪೂಜಾ ಅವರ ವಿವಾಹ ಮಾಡಲಾಗಿದೆ. ವರನ ಕುಟುಂಬಸ್ಥರು ಯಾವುದೇ ವರದಕ್ಷಿಣೆ ತೆಗೆದುಕೊಳ್ಳದೆ ಪೂಜಾಳನ್ನು ತಮ್ಮ ಮನೆ ತುಂಬಿಸಿಕೊಂಡಿದ್ದಾರೆ.   


JDS ಬಲಿಷ್ಠ ಪಕ್ಷವೆಂದ ಅನಂತ್ ಕುಮಾರ್ ಪುತ್ರಿ: ವ್ಯಾಪಕ ಚರ್ಚೆಗೆ ಕಾರಣವಾಯ್ತು ಟ್ವೀಟ್..!


'ಎಲ್ಲರನ್ನೂ ಕಳೆದುಕೊಂಡಿದ್ದ ಪೂಜಾಳಿಗೆ ಯಾವುದೇ ಕಾರಣಕ್ಕೂ ಅನಾಥ ಭಾವನೆ ಬರದಂತೆ ನೋಡಿಕೊಳ್ಳಬೇಕಾಗಿತ್ತು. ಪೂಜಾ ನಮ್ಮ ಮನೆಯಲ್ಲಿಯೇ ಬೆಳೆದು ದೊಡ್ಡವಳಾಗಿದ್ದಾಳೆ. ಆಕೆಯ ಪೋಷಕನಾಗಿರುವ ನನಗೆ ಆಕೆಯ ಜೀನವದ ಬಗ್ಗೆ ಸಂಪೂರ್ಣ ಕಾಳಜಿ ಇತ್ತು. ಆಕೆಯ ಸಮುದಾಯದ ಯುವಕನೊಂದಿಗೆ ವಿವಾಹ ಮಾಡಿಸುವುದೂ ನನ್ನ ಜವಾಬ್ದಾರಿಯಾಗಿತ್ತು. ನಮ್ಮ ಧರ್ಮ ಪಾಲನೆ ಮಾಡುವಂತೆ, ನಮ್ಮ ಧರ್ಮದವರನ್ನೇ ಮದುವೆಯಾಗುವಂತೆ ನಾನೆಂದೂ ಆಕೆಗೆ ಬಲವಂತ ಮಾಡಲಿಲ್ಲ. ಈ ರೀತಿ ಮಾಡುವುದು ನಮ್ಮ ಧರ್ಮಕ್ಕೆ ವಿರುದ್ಧ' ಅಂತಾ  ಮೆಹಬೂಬ್ ತಿಳಿಸಿದ್ದಾರೆ.


'ಪೂಜಾ ನನ್ನ ಮಗಳು, ಆಕೆಗೆ ಸೂಕ್ತ ವರನನ್ನು ನೋಡಿ ವಿವಾಹ ಮಾಡಿಸಿದ್ದೇನೆ. ಯಾವುದೇ ವರದಕ್ಷಿಣೆ ಕೇಳದೆ ವರನ ಪೋಷಕರು ನನ್ನ ಮಗಳನ್ನು ತಮ್ಮ ಸೋಸೆಯನ್ನಾಗಿ ಮಾಡಿಕೊಂಡಿದ್ದಾರೆ. ಈ ವಿವಾಹದ ಮೂಲಕ ಕೋಮು ಸೌಹಾರ್ದತೆಯ ಸಂದೇಶವನ್ನೂ ಸಮಾಜಕ್ಕೆ ರವಾನಿಸುತ್ತಿದ್ದೇನೆ' ಅಂತಾ ಮೆಹಬೂಬ್ ಹೇಳಿದ್ದಾರೆ.


ಇದನ್ನೂ ಓದಿ: ಸಿಎಂ ಬೊಮ್ಮಾಯಿ ಸಚಿವ ಸಂಪುಟಕ್ಕೆ ನಾನು ಸೇರುವುದಿಲ್ಲ: ಜಗದೀಶ್ ಶೆಟ್ಟರ್


ಸಮಾಜ ಸೇವೆಯಿಂದಲೂ ಗುರುತಿಸಿಕೊಂಡಿರುವ ಮೆಹಬೂಬ್ ಮಸಳಿ, ನಗರದಲ್ಲಿ ಗಣೇಶ ಹಬ್ಬ ಸೇರಿದಂತೆ ಕೋಮು ಸಾಮರಸ್ಯ ಉತ್ತೇಜಿಸುವ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ‘ನನ್ನ ಬಗ್ಗೆ ಕಾಳಜಿ ವಹಿಸಿದ ಹೃದಯ ಶ್ರೀಮಂತಿಕೆ ಹೊಂದಿರುವ ಮಹಾನ್ ವ್ಯಕ್ತಿಯನ್ನು ಪೋಷಕರಾಗಿ ಪಡೆದಿರುವುದು ನನ್ನ ಪುಣ್ಯ’ ಅಂತಾ ಪೂಜಾ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ