`ಬಿಜೆಪಿಯನ್ನು ಕಿತ್ತೊಗೆಯಲು ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮಾತ್ರ ನನ್ನ ಕೆಲಸ`
ಬಿಜೆಪಿಯನ್ನು ಕಿತ್ತೊಗೆಯಲು ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮಾತ್ರ ನನ್ನ ಕೆಲಸ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂದು ಹೇಳಿದ್ದಾರೆ.
ನವದೆಹಲಿ: ಬಿಜೆಪಿಯನ್ನು ಕಿತ್ತೊಗೆಯಲು ಕಾರ್ಯಕರ್ತರಿಗೆ ಶಕ್ತಿ ತುಂಬುವುದು ಮಾತ್ರ ನನ್ನ ಕೆಲಸ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಎಂದು ಹೇಳಿದ್ದಾರೆ.
ಈ ಕುರಿತಾಗಿ ದೆಹಲಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು 'ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ. ಕರ್ನಾಟಕದಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ ಅವರು ನಾಯಕತ್ವ ವಹಿಸಿದ್ದರು.ಆಗಸ್ಟ್ 15 ರಂದು ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮ ಹಮ್ಮಿಕೊಳ್ಳಲಿದ್ದು, ಪ್ರತಿ ಜಿಲ್ಲೆಯಲ್ಲಿ ಆ.1 ರಿಂದ ಆ.10 ರವರೆಗೆ ಕನಿಷ್ಠ 75 ಕಿ. ಮೀ ಪಾದಯಾತ್ರೆ ಮಾಡಲು ವರಿಷ್ಠರು ಸೂಚಿಸಿದ್ದಾರೆ. ಈ ಕಾರ್ಯಕ್ರಮ ಕುರಿತು ವರದಿ ಕೇಳಿದ್ದಾರೆ" ಎಂದು ಹೇಳಿದರು.
ಶಾಸಕರು, ಪದಾಧಿಕಾರಿಗಳು ಹಾಗೂ ಜಿಲ್ಲಾಧ್ಯಕ್ಷರುಗಳಿಗೆ ಜವಾಬ್ದಾರಿ ವಹಿಸಿದ ಮಾಹಿತಿಯನ್ನು ನಮ್ಮ ನಾಯಕರಿಗೆ ನೀಡಿದ್ದೇನೆ.'
ಇದನ್ನೂ ಓದಿ: Kick Boxing Death: ಕಿಕ್ ಬಾಕ್ಸಿಂಗ್ ಸ್ಪರ್ಧೆ ವೇಳೆ ಮೈಸೂರಿನ ಕಿಕ್ ಬಾಕ್ಸರ್ ಸಾವು..!
ಭಾರತ್ ಜೋಡೋ ಕಾರ್ಯಕ್ರಮ ಕುರಿತು ಕೇಳಿದ ಪ್ರಶ್ನೆಗೆ, 'ಸಾಕಷ್ಟು ದಿನಗಳಿಂದ ಯಾವ ಭಾಗದಿಂದ ರಾಜ್ಯಕ್ಕೆ ಯಾತ್ರೆ ಪ್ರವೇಶಿಸಬೇಕು ಎಂಬ ಚರ್ಚೆ ಇತ್ತು. ಮುಳಬಾಗಿಲು, ಹೊಸೂರು, ಚಾಮರಾಜನಗರ, ಮಂಗಳೂರು ಕಡೆಗಳಿಂದ ಈ ಯಾತ್ರೆ ರಾಜ್ಯ ಪ್ರವೇಶಿಸುವ ಅವಕಾಶ ಇತ್ತು. ಅಂತಿಮವಾಗಿ ಕೇರಳದ ವಯನಾಡು ಮಾರ್ಗವಾಗಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಮೂಲಕ ರಾಜ್ಯ ಪ್ರವೇಶಿಸುವುದು ಎಂದು ತೀರ್ಮಾನವಾಗಿದೆ.
ಕರ್ನಾಟಕ ರಾಜ್ಯದಲ್ಲಿ ಕನಿಷ್ಠ 21 ದಿನ ಪಾದಯಾತ್ರೆ ನಡೆಯಲಿದೆ. ಇದಕ್ಕಿಂತಲೂ ಹೆಚ್ಚು ದಿನ ನಡೆಯಬಹುದು. ಕೆಲವು ದಿನ 24-25 ಕಿ. ಮೀ ನಿಗದಿ ಮಾಡಿದ್ದು, ನಾವು ನಮ್ಮ ಅನುಭವದ ಮೇಲೆ ಸಲಹೆಗಳನ್ನು ನೀಡಿದ್ದೇವೆ.
ರಾಹುಲ್ ಗಾಂಧಿ ಅವರು ನಿತ್ಯ 40 ಕಿ.ಮೀ ನಡೆಯಲು ತಯಾರಿದ್ದು, ಇತರರಿಂದ ಸಾಧ್ಯವಾಗುವುದಿಲ್ಲ. ಹೀಗಾಗಿ ನಾವು ನಿತ್ಯ 20 ಕಿ.ಮೀ. ಆಸುಪಾಸಿನಲ್ಲಿ ಸೀಮಿತ ಮಾಡಿಕೊಳ್ಳಲು ಸಲಹೆ ನೀಡಿದ್ದೇನೆ.ಬಿಎಂಟಿಸಿ ಬಳಿಕ ಈಗ ಕೆಎಸ್ಆರ್ ಟಿಸಿಗೂ ಬರಲಿವೆ ಎಲೆಕ್ಟ್ರಿಕ್ ಬಸ್..
ಕಾರ್ಯಕರ್ತರೊಬ್ಬರೂ ನಿಮ್ಮ ಕಾರ್ಯಕ್ರಮ ಮಾಡಬೇಕು ಎಂಬ ಪತ್ರ ಬರೆದಿದ್ದಾರಲ್ಲಾ ಎಂಬ ಪ್ರಶ್ನೆಗೆ, ' ಅದು ಕೇವಲ ಅವರ ವೈಯಕ್ತಿಕ ಅಭಿಪ್ರಾಯ. ನಾನು ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದ್ದು, ನನ್ನ ವಿಚಾರಕ್ಕೆ ಯಾರೂ ಬರುವುದು ಬೇಡ. ನೀವು ಬರುವುದಾದರೆ ಪಕ್ಷದ ವಿಚಾರಕ್ಕೆ ಬನ್ನಿ. ನನ್ನ ಬಗ್ಗೆ ಯಾರೂ ಅಭಿಮಾನ ತೋರುವುದು ಬೇಡ. ನೀವು ಕಾಂಗ್ರೆಸ್ ಗೆ ಅಭಿಮಾನ ತೋರಿದರೆ ನನಗೆ ಅಭಿಮಾನ ತೋರಿದಂತೆ. ಅಷ್ಟೇ ಸಾಕು ' ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.