ಬೆಂಗಳೂರು: ದುಬಾರಿ ಬೆಲೆಯ ಮೈಸೂರು ಸಿಲ್ಕ್ ಸೀರೆ ರಿಯಾಯಿತಿ ದರದಲ್ಲಿ 4,500 ರೂ.ಗಳಿಗೆ ಸಿಗಲಿದೆ. ಆದರೆ ಒಂದು ಕುಟುಂಬಕ್ಕೆ ಒಂದು ಸೀರೆ ಮಾತ್ರ ಎಂಬ ಮಾನದಂಡವನ್ನು ರಚಿಸಲಾಗುತ್ತಿದೆ.


COMMERCIAL BREAK
SCROLL TO CONTINUE READING

ನೀಡಿದ ಭರವಸೆಯಂತೆ ಈಗ ವರಮಹಾಲಕ್ಷ್ಮೀ ಹಬ್ಬಕ್ಕೆ 15 ರಿಂದ 16 ಸಾವಿರ ಬೆಲೆಯ ಮೈಸೂರ್ ಸಿಲ್ಕ್ ಸೀರೆಯನ್ನು 4,500 ಸಾವಿರ ರೂ.ಗೆ  ನೀಡಲಾಗುತ್ತದೆ ಎಂದು ಸಾ.ರಾ. ಮಹೇಶ್ ಮಂಗಳವಾರ ಹೇಳಿದ್ದಾರೆ.


ಸರ್ಕಾರ ರಿಯಾಯಿತಿ ದರದಲ್ಲಿ ಕುಟುಂಬಕ್ಕೊಂದು ಸೀರೆ ನೀಡಲು ಚಿಂತನೆ ನಡೆಸಿದೆ. 15-16 ಸಾವಿರ ಮೌಲ್ಯದ ಸೀರೆಯನ್ನು 4500 ರೂ.ಗೆ ನೀಡಲಾಗುತ್ತಿದೆ. ಆದರೆ 5-6 ಕೋಟಿ ನಷ್ಟ ಅನುಭವಿಸಬೇಕಾಗಿರುವುದರಿಂದ ಕುಟುಂಬಕ್ಕೆ ಒಂದೇ ಸೀರೆ ನೀಡಲು ನಿರ್ಧರಿಸಲಾಗಿದೆ. ಹಬ್ಬ ಎರಡು ದಿನ ಇರುವಾಗ ರಿಯಾಯಿತಿ ದರದಲ್ಲಿ ಸೀರೆ ಮಾರಾಟವನ್ನು ಆರಂಭಿಸಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.


ತಿಂಗಳ ಹಿಂದೆ ರೇಷ್ಮೆ ಸಚಿವ ಸಾ.ರಾ.ಮಹೇಶ್ ಅವರು ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ರಿಯಾಯಿತಿ ದರದಲ್ಲಿ ಮೈಸೂರ್ ಸಿಲ್ಕ್ ಸೀರೆ ನೀಡುವ ಭರವಸೆ ನೀಡಿದ್ದರು. ಎಲ್ಲ ಮಹಿಳೆಯರು ಕಡಿಮೆ ದರದಲ್ಲಿ ಸೀರೆ ಕೊಂಡುಕೊಳ್ಳಬಹುದು. ಬೇಡಿಕೆಗೆ ಅನುಗುಣವಾಗಿ ಸೀರೆ ಸರಬರಾಜು ಮಾಡುತ್ತೇವೆ. ಸದ್ಯಕ್ಕೆ ವರಮಹಾಲಕ್ಷ್ಮಿ ಹಬ್ಬಕ್ಕೆ ಈ ಕೊಡುಗೆ ನೀಡಲು ಯೋಚಿಸಿದ್ದು, ಮುಂದಿನ ದಿನಗಳಲ್ಲಿ ಈ ರೀತಿಯ ಕೊಡುಗೆಗಳನ್ನು ಮುಂದುವರಿಸುವ ಬಗ್ಗೆ ಸಮಾಲೋಚನೆ ನಡೆಸುವುದಾಗಿ ಹೇಳಿದ್ದರು.