ಐದು ಬಾರಿ ದಸರಾದಲ್ಲಿ ಪಾಲ್ಗೊಂಡಿದ್ದ ಹಿರಿಯ ಆನೆ `ಗೋಪಾಲಸ್ವಾಮಿ` ಇನ್ನು ನೆನಪು ಮಾತ್ರ
Mysore Jamboo Savari elephant Killed: ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಗೋಪಾಲಸ್ವಾಮಿ ಆನೆ ನಾಗರಹೊಳೆ ಅರಣ್ಯದಲ್ಲಿ ಕಾಡಾನೆಯೊಂದಿಗಿನ ಕಾದಾಟದಲ್ಲಿ ಜೀವವುಳಿಸಿಕೊಳ್ಳಲು ಶತಪ್ರಯತ್ನ ಮಾಡಿತಾದರೂ ಪ್ರಾಣ ಉಳಿಸಿಕೊಳ್ಳುಲು ಸಾಧ್ಯವಾಗದೆ ಉಸಿರು ಚೆಲ್ಲಿದೆ.
Mysore Jamboo Savari elephant Killed: ದಸರಾ ಎಂದೊಡನೆ ಮೊದಲು ನೆನಪಾಗುವುದು ಮೈಸೂರು ಅರಮನೆ, ಜಂಬೂಸವಾರಿ. ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಗಜಪಡೆ. ಜಂಬೂ ಸವಾರಿಯಲ್ಲಿ ಐದು ಬಾರಿ ಪಾಲ್ಗೊಂಡಿದ್ದ "ಗೋಪಾಲಸ್ವಾಮಿ" ಎಂಬ ಆನೆ ಕಾಡಾನೆಯ ದಾಳಿಗೆ ತತ್ತರಿಸಿ ಕೊನೆಯುಸಿರೆಳೆದಿರುವ ದುರ್ಘಟನೆ ನಡೆದಿದೆ.
ಹುಣಸೂರು ತಾಲೂಕಿನ ಮುತ್ತಿಗೋಡು ಆನೆ ಶಿಬಿರದಲ್ಲಿದ್ದ ಸ್ವಭಾವತಃ ಶಾಂತವಾಗಿದ್ದ ಜಂಬೂಸವಾರಿಯ ಗೋಪಾಲಸ್ವಾಮಿ ಆನೆಯು ಕಾಡಿನಲ್ಲಿ ಇತ್ತೀಚೆಗಷ್ಟೇ ಸೆರೆ ಹಿಡಿಯಲಾಗಿದ್ದ ಅಯ್ಯಪ್ಪ ಎನ್ನುವ ಕಾಡಾನೆ ಜೊತೆಗಿನ ಕಾದಾಟದಲ್ಲಿ ತೀವ್ರವಾಗಿ ಗಾಯಗೊಂಡು ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ.
ಜಂಬೂಸವಾರಿಯ ಗಜಪಡೆ ಬಿಡಾರದಲ್ಲಿ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ "ಗೋಪಾಲಸ್ವಾಮಿ" ರಾತ್ರಿ ಪಾಳಿಯಲ್ಲಿ ಕಾಡಾನೆ ದಾಳಿಗೆ ಬಲಿಯಾಗಿರುವ ದುರಂತ ಘಟನೆ ತಿಥಿ ಮತ್ತಿ ಅರಣ್ಯದಲ್ಲಿ ನಡೆದಿದೆ. ವಾಸ್ತವವಾಗಿ, ಇತರ ಆನೆಗಳೊಂದಿಗೆ ಗೋಪಾಲಸ್ವಾಮಿ ಆನೆಯನ್ನೂ ಕೂಡ ಮೇಯಲು ಬಿಡಲಾಗಿತ್ತು. ಈ ಸಮಯದಲ್ಲಿ ಕಾಡಾನೆಯೊಂದಿಗೆ ಮುಖಾಮುಖಿಯಾಗಿದೆ. ಈ ಸಂದರ್ಭದಲ್ಲಿ ಕಾಳಗದ ವಿಚಿತ್ರ ಸದ್ದು ಕೇಳಿ ಮಾವುತರು ಓಡಿ ಬಂದಿದ್ದು ಗೋಪಾಲಸ್ವಾಮಿ ಕಾಳಗದಲ್ಲಿ ತೀವ್ರವಾಗಿ ಗಾಯಗೊಂಡಿದ್ದನ್ನು ಕಂಡು ಗಾಬರಿಗೊಂಡಿದ್ದಾರೆ.
ಇದನ್ನೂ ಓದಿ- ರಾಜ್ಯದ 4 ಕೋಟಿ ಜನರಿಗೆ ಆರೋಗ್ಯ ಕಾರ್ಡ್ : ಸಿಎಂ ಬೊಮ್ಮಾಯಿ
ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಗೋಪಾಲಸ್ವಾಮಿ ಆನೆ ನಾಗರಹೊಳೆ ಅರಣ್ಯದಲ್ಲಿ ಕಾಡಾನೆಯೊಂದಿಗಿನ ಕಾದಾಟದಲ್ಲಿ ಜೀವವುಳಿಸಿಕೊಳ್ಳಲು ಶತಪ್ರಯತ್ನ ಮಾಡಿತಾದರೂ ಪ್ರಾಣ ಉಳಿಸಿಕೊಳ್ಳುಲು ಸಾಧ್ಯವಾಗದೆ ಉಸಿರು ಚೆಲ್ಲಿದೆ ಎಂದು ದುಃಖತಪ್ತರಾಗಿ ಮಾವುತ-ಕಾವಾಡಿಗಳು ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ- ಕಾಡಾನೆ ಹಾವಳಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಸಿಎಂ ಬೊಮ್ಮಾಯಿ
ಮತ್ತಿಗೋಡು ಆನೆ ಶಿಬಿರದಲ್ಲಿದ್ದ ಗೋಪಾಲಸ್ವಾಮಿ ಆನೆಗೆ 39 ವರ್ಷ ವಯಸ್ಸಾಗಿತ್ತು. ಈ ಆನೆ ಈ ಬಾರಿಯ ದಸರಾ ಸೇರಿದಂತೆ ಒಟ್ಟು ಐದು ಬಾರಿ ಮೈಸೂರು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಂಡಿದ್ದ ಹೆಗ್ಗಳಿಕೆಗೆ ಪಾತ್ರವಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.