ಕಾಡಾನೆ ಹಾವಳಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಸಿಎಂ ಬೊಮ್ಮಾಯಿ

CM Basavaraj Bommai : ಹಲವಾರು ವರ್ಷ ಬರಗಾಲವಿದ್ದ ಸಂದರ್ಭದಲ್ಲಿ ಬಂದಿರುವ ಆನೆಗಳು ವಾಪಸ್‌ ಹೋಗಿಲ್ಲ. ಕೆಲವು ಸಂದರ್ಭಗಳಲ್ಲಿ  ಮನುಷ್ಯರೂ ಕೂಡ ಕಾಡಿಗೆ ಹೋಗುವುದು, ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಸಮಸ್ಯೆ ಉಂಟಾಗಿದೆ. ಕಾಡಾನೆ ಹಾವಳಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

Written by - Prashobh Devanahalli | Edited by - Chetana Devarmani | Last Updated : Nov 23, 2022, 07:20 PM IST
  • ಕಾಡಾನೆ ಹಾವಳಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ
  • ಈ ಬಗ್ಗೆ ಸಭೆ ಕರೆದು ಅರಣ್ಯ ಪಡೆಗಳನ್ನು ರಚಿಸಲಾಗಿದೆ
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
ಕಾಡಾನೆ ಹಾವಳಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ: ಸಿಎಂ ಬೊಮ್ಮಾಯಿ title=
ಮುಖ್ಯಮಂತ್ರಿ ಬೊಮ್ಮಾಯಿ

ಹಾಸನ : ಕಾಡಾನೆ ಹಾವಳಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹಳೇಬೀಡಿನ ಮಾಯಗೊಂಡನಹಳ್ಳಿ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಹಲವಾರು ವರ್ಷ ಬರಗಾಲವಿದ್ದ ಸಂದರ್ಭದಲ್ಲಿ ಬಂದಿರುವ ಆನೆಗಳು ವಾಪಸ್‌ ಹೋಗಿಲ್ಲ. ಕೆಲವು ಸಂದರ್ಭಗಳಲ್ಲಿ  ಮನುಷ್ಯರೂ ಕೂಡ ಕಾಡಿಗೆ ಹೋಗುವುದು, ಹವಾಮಾನ ಬದಲಾವಣೆ ಮುಂತಾದ ಕಾರಣಗಳಿಂದ ಸಮಸ್ಯೆ ಉಂಟಾಗಿದೆ. ಗುಂಪುಗಳಲ್ಲಿ ಆನೆಗಳು ಇದ್ದರೆ ಅವುಗಳನ್ನು ಚದುರಿಸುವುದು ಕಷ್ಟ. ಈ ಬಗ್ಗೆ ಸಭೆ ಕರೆದು ಅರಣ್ಯ ಪಡೆಗಳನ್ನು ರಚಿಸಲಾಗಿದೆ ಎಂದು ಹೇಳಿದರು. 

ಯಾವುದೋ ಒಂದು ಘಟನೆ ಸಂಭವಿಸಿದಾಗ ಕಾರ್ಯಾಚರಣೆ ಮಾಡಿದರೆ ಸೂಕ್ತವಲ್ಲ. ಅದಕ್ಕಾಗಿ ನಿರಂತರವಾಗಿ ಕೆಲಸ ಮಾಡಲು ಕಾರ್ಯಪಡೆ ರಚಿಸಲಾಗಿದೆ. ತರಬೇತಿ, ವಾಹನ, ಸಲಕರಣೆ, , ನಿಯಂತ್ರಣಾ ಕೊಠಡಿ ಸ್ಥಾಪಿಸಿ ಪ್ರತಿ ನಿತ್ಯ ಗಸ್ತು ತಿರುಗುವುದು, ಕಾರ್ಯಾಚರಣೆ ಮಾಡುವುದು ಹಾಗೂ  ಆನೆಗಳು ಹೆಚ್ಚಿದ್ದ ಕಡೆ ಎಲ್ಲಾ ಪಡೆಗಳು  ಹಾಗೂ ನೂರಾರು ಜನ ಸೇರಿ ಆನೆಗಳನ್ನು ಹಿಮ್ಮೆಟ್ಟಿಸಲು ವಾರ, ಹತ್ತುದಿನಗಳ ಕಾಲ ನಿರಂತರ ಪ್ರಯತ್ನ ಮಾಡಲು ಸೂಚಿಸಲಾಗಿದೆ. ಇದಕ್ಕೆ ಅಗತ್ಯ ಅನುದಾನ ನೀಡಿದ್ದು, ಈ ವರ್ಷದ ಬಜೆಟ್ ನಲ್ಲಿ  100 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.   ಬಂಡೀಪುರದಲ್ಲಿ ಹೊಸ ಮಾದರಿಯ ಬೇಲಿಯನ್ನು ಹಾಕಲಾಗುತ್ತಿದೆ. ಆನೆ ಕಾರಿಡಾರ್ ಅನ್ನು ಸಂಪೂರ್ಣವಾಗಿ ಕಾಯುವ ಕೆಲಸ ಮಾಡಲಾಗುವುದು ಎಂದರು. 

ಇದನ್ನೂ ಓದಿ : Voter ID Scam: ಕೇಸ್ ವಾಪಸ್ ಪಡೆಯುವಂತೆ ಹಾಕಿದ್ರಾ ಧಮ್ಕಿ..?!

ಆನೆ ತುಳಿತಕ್ಕೆ ಒಳಗಾಗಿ ಸಾವನ್ನು ಅಪ್ಪಿದವರಿಗೆ 15 ಲಕ್ಷ ರೂ.ಗಳ ಪರಿಹಾರ ನೀಡಲಾಗುವುದು.  ಮರಣ ಹೊಂದಿದವರಿಗೆ ಸರ್ಕಾರಿ ಕೆಲಸ ನೀಡುವ ಬಗ್ಗೆ ಗಂಭಿರವಾಗಿ ಪರಿಗಣಿಸಲಾಗುವುದು ಎಂದರು. ಯಾರಿಗೆ ಅಂಟುರೋಗ  ಇದೆ ಎಂದು ಜನ ತೀರ್ಮಾನ ಮಾಡುತ್ತಾರೆ. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ  ಹೇಳಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿ ಯಾರಿಗೆ ಅಂಟುರೋಗ  ಇದೆ ಎಂದು ಜನ ತೀರ್ಮಾನ ಮಾಡುತ್ತಾರೆ. ಅವರ ಕಾಲದಲ್ಲಿ ಆಗಿರುವ ಹಗರಣಗಳ ದಾಖಲೆಗಳನ್ನೇ ಬಿಡುಗಡೆ ಮಾಡುತ್ತಿದ್ದೇವೆ. ಅದು ಸತ್ಯ ಅಲ್ವೇ. ಸತ್ಯವನ್ನು ಎದುರಿಸುವ ಕೆಲಸ ಅವರು ಮಾಡಲಿ. ಅದನ್ನು ಬಿಟ್ಟು ಅವರ ಕಾಲದಲ್ಲಿ ಆಗಿಲ್ಲ ಎಂಬ ರೀತಿ ಮಾತನಾಡುವುದು ಸರಿಯಲ್ಲ ಎಂದು ತಿಳಿಸಿದರು.

ಮಂಗಳೂರಿನ ಕುಕ್ಕರ್ ಬಾಂಬ್ ಸ್ಪೋಟದ ಬಗ್ಗೆ   ಪ್ರತಿಕ್ರಿಯೆ ನೀಡಿ   18  ಸ್ಲೀಪರ್ ಸೆಲ್ ಗಳನ್ನು ಪತ್ತೆ ಹಚ್ಚಿ  ತಿಹಾರ್ ಜೈಳಿಗೆ  ಕಳುಹಿಸಲಾಗಿದೆ. ಪಕ್ಕದ ರಾಜ್ಯ ಮತ್ತು ಅಂತರರಾಷ್ಟ್ರೀಯ ಗಡಿಗಳಲ್ಲಿ ತರಬೇತಿ ಪಡೆದು ಬರುವುದು ನಿರಂತರ ಪ್ರಕ್ರಿಯೆ ಆಗಿದೆ. ವಿಶೇಷವಾಗಿ ನರೇಂದ್ರ ಮೋದಿಯವರು ಬಂದ ನಂತರ,  ಎಲ್ಲಿಯೂ ಇದಕ್ಕೆ ಅವಕಾಶ ನೀಡಿಲ್ಲ. ಹಿಂದೆ ಬೆಂಗಳೂರು, ಹೈದರಾಬಾದ್ ಮುಂಬೈ ನಲ್ಲಿ ಆಗಿತ್ತು. ಈಗ ಅವುಗಳೀಗೆ ಕಡಿವಾಣ ಹಾಕಿದ್ದದರೂ  ಕರಾವಳೀ ಪ್ರದೇಶದಲ್ಲಿ ಸ್ಲೀಪರ್ ಸೆಲ್  ಗಳ ಮೇಲೆ ನಿಗಾ ಇರಿಸಲಾಗಿದೆ. ಕೇಂದ್ರೀಕೃತ ಶ್ರಮ ಹಾಕಬೇಕಿದೆ. ಹಿಂದೆ ನಾನು ಗೃಹ ಮಂತ್ರಿ ಇದ್ದ ಸಂದರ್ಭದಲ್ಲಿ ಎಲ್ಲಾ ದಕ್ಷಿಣ ಭಾರತ ರಾಜ್ಯಗಳ ಡಿಜಿಪಿಗಳಿಗೆ ಕರೆ ನೀಡಿದ್ದೆ. ಬಹಳಷ್ಟು ಜನ ಕೃತ್ಯವೆಸಗಿ ಗಡಿದಾಟುತ್ತಾರೆ.  ದಕ್ಷಿಣ ಭಾರತದ  ಎಲ್ಲಾ ರಾಜ್ಯಗಳು ಒಗ್ಗಟ್ಟಿನಿಂದ ಸಮನ್ವಯದೊಂದಿಗೆ ಮಾಹಿತಿ ಹಂಚಿಕೊಳ್ಳುವುದು, ಅಲ್ಲಿರುವ ಸೆಲ್ ಗಳಿಗೆ ಕಡಿವಾಣ ಹಾಕಲು ಸಾಧ್ಯ. ಅದನ್ನೆ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆಯಲಾಗುವುದು ಎಂದರು. 

ಇದನ್ನೂ ಓದಿ : ದೇಶದಲ್ಲೇ ಮೊಟ್ಟ ಮೊದಲ ವಿನೂತನ ರಸ್ತೆ ನಿರ್ಮಾಣಕ್ಕೆ ಸಾಕ್ಷಿಯಾದ ಬೆಂಗಳೂರು

ಗುಪ್ತಚರ  ಇಲಾಖೆ ವೈಫಲ್ಯ ಎಂದಿರುವ ಸಿದ್ಧರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯೆ ನೀಡಿ ವೈಫಲ್ಯದ ಪ್ರಶ್ನೆ ಇಲ್ಲಿ ಇಲ್ಲ. ಎಲ್ಲಾ ಕಾಲದಲ್ಲಿಯೂ ಈ ಘಟನೆಗಳು ನಡೆದಿವೆ. ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರೇರಿತರಾಗುತ್ತಾರೆ. ಬಹಳಷ್ಟು  ಜನ ಬಾಂಗ್ಲಾ ದೇಶದಿಂದ ಇಲ್ಲಿಗೆ ಬಂದಿದ್ದು, ಅವರನ್ನು ಗುರುತಿಸಿ, ಬಾಂಗ್ಲಾ ದೇಶಕ್ಕೆ  ಬಿಟ್ಟು ಬಂದಿದ್ದೇವೆ. ಬಾಂಗ್ಲಾ  ದೇಶದ ಗಡಿ ಪ್ರದೇಶ ದುರ್ಬಲವಾಗಿದೆ.  ಸಿದ್ದರಾಮಯ್ಯ ಅವರಿಗೆ ಇದು ಗೊತ್ತಿದೆ ರಾಜಕಾರಣಕ್ಕಾಗಿ  ಹೀಗೆ ಹೇಳುತ್ತಾರೆ ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News