Mysuru Chamundi Hills Ashada Shukravara: ಸಾಂಸ್ಕ್ರತಿಕ ನಗರಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರದ ಸಂಭ್ರಮ ಮನೆ ಮಾಡಿತ್ತು. ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದ ದೇವಿ ಸನ್ಮಿಧಿಗೆ ಮೊದಲವಾರವೇ ಸಹಸ್ರಾರು ಭಕ್ತಗಣ ಆಗಮಿಸಿ ದೇವಿ ದರ್ಶನಪಡೆದು ಪುನೀತರಾದರು. 


COMMERCIAL BREAK
SCROLL TO CONTINUE READING

ಆಷಾಢ ಶುಕ್ರವಾರ ಬಂದ್ರೆ  ಸಾಕು ಅರಮನೆ ನಗರಿ ಮೈಸೂರು, ಹಾಗೂ ಚಾಮುಂಡಿ ಭಕ್ತರಿಗೆ  ಸಂಭ್ರಮವೋ ಸಂಭ್ರಮ. ಈ ಆಷಾಢ ಮಾಸದಲ್ಲಿ ಭಕ್ತರು ಭಕ್ತಿ ಪರಕಾಷ್ಠೆಯಲ್ಲಿ ಮಿಂದೇಳುತ್ತಾರೆ. ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಮೊದಲ ಆಷಾಢ ಶುಕ್ರವಾರ ಹಿನ್ನೆಲೆ ಇಂದು ಸಹಸ್ರಾರು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ಆಗಮಿಸಿ ದೇವಿ ದರ್ಶನ ಪಡೆದರು. 


ಮುಂಜಾನೆ 3 ಗಂಟೆ 30 ನಿಮಿಷಕ್ಕೆ ಅಭಿಷೇಕದೊಂದಿಗೆ ಪೂಜೆ ಆರಂಭವಾಯ್ತು, ದೇವಿಗೆ ಮೊದಲನೇ ವಾರ ನಾಗಲಕ್ಷೀ ಅಲಂಕಾರ ಮಾಡಲಾಗಿದ್ದು, ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ಮಾಡಿ ಮಹಾಮಂಗಳಾರತಿ ನೆರವೇರಿಸಿ  ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.


ಇದನ್ನೂ ಓದಿ- Viral Video: ಡೇ ಕೇರ್‌ನಲ್ಲಿ ಮಗು ಮೇಲೆ ಮತ್ತೊಂದು ಮಗುನಿಂದ ಹಲ್ಲೆ! ಪೋಷಕರೇ ಈ ವಿಡಿಯೋ ನೋಡಿ


ಆಷಾಡ ಶುಕ್ರವಾರದ ಪೂಜೆಗೆ ಚಾಮುಂಡಿಬೆಟ್ಟಕ್ಕೆ  ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಕಿರಿದಾದ ಬೆಟ್ಟದ ರಸ್ತೆಯಲ್ಲಿ  ಟ್ರಾಫಿಕ್ ಜಾಮ್ ಆಗಬಾರದೆಂದು ಖಾಸಗಿ  ವಾಹನಗಳ ಪ್ರವೇಶ ನಿರ್ಬಂಧಿಸಲಾಗಿತ್ತು. ಬೆಟ್ಟಕ್ಕೆ ಹೋಗಲು ಭಕ್ತರಿಗೆ ಜಿಲ್ಲಾಡಳಿತ 50 ಕೆಎಸ್ಆರ್ ಟಿಸಿ ಬಸ್ಸಿನ ಉಚಿತ ಪ್ರಯಾಣದ ವ್ಯವಸ್ಥೆ ಮಾಡಲಾಗಿತ್ತು. ದೇವಸ್ಥಾನದಲ್ಲಿ ದೇವರ ದರ್ಶನಕ್ಕೆ 300 ಮತ್ತು 50 ರೂಪಾಯಿ ಟಿಕೆಟ್ ನಿಗದಿಮಾಡಲಾಗಿತ್ತು. ಜಿಲ್ಲಾಡಳಿತ ಅಚ್ಚುಗಟ್ಟಾಗಿ ದೇವಿ ದರ್ಶನದ ವ್ಯವಸ್ಥೆ ಮಾಡಲಾಗಿದ್ದ ಹಿನ್ನಲೆ, ಬೆಟ್ಟಕ್ಕೆ ಬರೋ ಭಕ್ತರು ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆದರು.


ಇದನ್ನೂ ಓದಿ- 12ನೇ ದಿನಕ್ಕೆ ಕಾಲಿಟ್ಟ ‘ಶಕ್ತಿ’: 139 ಕೋಟಿ ಮೌಲ್ಯ ದಾಟಿದ ಮಹಿಳಾ "ಶಕ್ತಿ" ಸಂಚಾರ!


ಇನ್ನು, ಫುಡ್‌ ಪಾಯಿಸನ್ ಆಗುವ ಸಾಧ್ಯತೆ ಹಿನ್ನೆಲೆ ಪ್ರಸಾದ ಕೌಂಟರ್ ಗಳಲ್ಲಿ ಫುಡ್ ಸೇಫ್ಟಿ ಆಫೀಸರ್ ಗಳ ತಂಡದಿಂದ  ಆಹಾರ ತಪಾಸಣೆ ಮಾಡಿ ಪ್ರಸಾದ ವಿನಿಯೋಗಕ್ಕೆ ಅವಕಾಶ ನೀಡಿತ್ತು. ಇನ್ನು ಚಾಮುಂಡಿ ಬಳಗದಿಂದ  30 ಸಾವಿರ ಭಕ್ತರಿಗೆ ಪ್ರಸಾದ ವಿನಿಯೋಗ ವ್ಯವಸ್ಥೆ ಮಾಡಲಾಗಿತ್ತು. ‌ಈ ಬಾರಿಯ ವಿಶೇಷವಾಗಿ ಮ್ಯಾಂಗೋ ಭರ್ಫಿ ಸಿಹಿ ನೀಡಿ ದಾಸೋಹ ನೀಡಲಾಯಿತು. ಒಟ್ಟಿನಲ್ಲಿ ಆಷಾಢ ಮಾಸದ ಮೊದಲನೇ ವಾರವೇ ದೇವಸ್ಥಾನಕ್ಕೆ ಲಕ್ಷಾಂತರ ಮಂದಿ ಭಕ್ತಗಣ ದೇವಿ ದರ್ಶನ ಪಡೆದು ಪುನೀತರಾದರು‌. ಆಷಾಢ ಶುಕ್ರವಾರದಂದು ಶಕ್ತಿ ದೇವತೆಯನ್ನು ಪೂಜಿಸಿದವರಿಗೆ ವಿಘ್ನಗಳು ನಿವಾರಣೆಯಾಗಿ, ಇಷ್ಟಾರ್ಥ ಸಿದ್ಧಿಸುತ್ತದೆ ಅನ್ನೋ ನಂಬಿಕೆಯಿದೆ. ಹೀಗಾಗಿ ತಾಯಿ ಚಾಮುಂಡೇಶ್ವರಿ ಎಲ್ಲರಿಗೂ ಒಳಿತು ಮಾಡಲಿ ಅನ್ನೋದೆ ನಮ್ಮ ಆಶಯ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.