ನಮ್ಮ ಮೆಟ್ರೋ ಇನ್ನಷ್ಟು ಸ್ಮಾರ್ಟ್: ಲೋಕೋ ಪೈಲಟ್ ಇಲ್ಲದೆ ಓಡುತ್ತೆ ಮೆಟ್ರೋ..!
ಬೆಂಗಳೂರಿನ ಟ್ರಾನ್ಸ್ ಪೋರ್ಟ್ ಸಿಸ್ಟಂನಲ್ಲೇ ನಮ್ಮ ಮೆಟ್ರೋ ಅತ್ಯಂತ ಸ್ಮಾರ್ಟ್. ಟ್ರಾಫಿಕ್ ಫ್ರೀ, ಎಸಿ, ಜೊತೆಗೆ ಟೈಮ್ ಸೇವಿಂಗ್ ಪ್ರಯಾಣ ಅಂತ ಜನ ಇಷ್ಟಪಡ್ತಿದ್ರು. ಇದೀಗ ಮೆಟ್ರೋ ಇನ್ನಷ್ಟು ಸ್ಮರ್ಟ್ ಆಗ್ತಿದೆ. ಬೆಂಗಳೂರಲ್ಲಿ ಡ್ರೈವರ್ ಇಲ್ಲದ ಮೆಟ್ರೋ ಹಳಿಗೇರಿಸಲು ಪ್ಲಾನ್ ಸಿದ್ಧವಾಗಿದೆ..
ಬೆಂಗಳೂರು: ಬೆಂಗಳೂರಿನ ಟ್ರಾನ್ಸ್ ಪೋರ್ಟ್ ಸಿಸ್ಟಂನಲ್ಲೇ ನಮ್ಮ ಮೆಟ್ರೋ ಅತ್ಯಂತ ಸ್ಮಾರ್ಟ್. ಟ್ರಾಫಿಕ್ ಫ್ರೀ, ಎಸಿ, ಜೊತೆಗೆ ಟೈಮ್ ಸೇವಿಂಗ್ ಪ್ರಯಾಣ ಅಂತ ಜನ ಇಷ್ಟಪಡ್ತಿದ್ರು. ಇದೀಗ ಮೆಟ್ರೋ ಇನ್ನಷ್ಟು ಸ್ಮರ್ಟ್ ಆಗ್ತಿದೆ. ಬೆಂಗಳೂರಲ್ಲಿ ಡ್ರೈವರ್ ಇಲ್ಲದ ಮೆಟ್ರೋ ಹಳಿಗೇರಿಸಲು ಪ್ಲಾನ್ ಸಿದ್ಧವಾಗಿದೆ..
ಸದ್ಯ ಬೆಂಗಳೂರಲ್ಲಿ ಪ್ರತೀ ಮೆಟ್ರೋ ಟ್ರೈನನ್ನ ಓಡಿಸೋದು ಲೋಕೋ ಪೈಲೆಟ್ಗಳು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆದ್ರೆ ಇನ್ಮುಂದೆ ಈ ಲೋಕೋಪೈಲೆಟ್ಗಳು ಟ್ರೈನ್ ಓಡಿಸೋಕೆ ಇರೋದಿಲ್ಲ. ಅರೆ ಮತ್ಯಾರ್ ಓಡಿಸ್ತಾರೆ ಅಂದ್ಕೊಳ್ತಿದ್ದೀರಾ. ಮುಂಬರೋ ಮೆಟ್ರೋ ಮಾರ್ಗದಲ್ಲಿ ಮೆಟ್ರೋ ಟ್ರೈನ್ ಓಡಿಸೋಕಂತ ಯಾರೂ ಇರೋದೇ ಇಲ್ಲ. ಕಾರಣ ಏನಂದ್ರೆ ಬೆಂಗಳೂರಲ್ಲಿ ಡ್ರೈವರ್ ಲೆಸ್ ಮೆಟ್ರೋ ಟ್ರೈನ್ಗಳನ್ನ ಟ್ರ್ಯಾಕ್ ಗೆ ಇಳಿಸೋಕೆ ಬಿಎಂಆರ್ಸಿಎಲ್ ಪ್ಲಾನ್ ಮಾಡಿದೆ.
ಇದನ್ನೂ ಓದಿ : Railway Employee : ರೈಲ್ವೆ ನೌಕರರಿಗೆ ಸಿಹಿ ಸುದ್ದಿ : 14% ರಷ್ಟು DA ಹೆಚ್ಚಿಸಿದ ಕೇಂದ್ರ ಸರ್ಕಾರ!
ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆ ಮೂಲಕ ಮೆಟ್ರೋ ರೈಲು ಓಡಾಟ;
ನಿಜ ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ನಿರ್ಮಾಣವಾಗ್ತಿರೋ ಗೊಟ್ಟಿಗೆರೆ ನಾಗವಾರ ಮತ್ತು ಆರ್ ವಿ ರಸ್ತೆ ಟು ಬೊಮ್ಮಸಂದ್ರ ಮಾರ್ಗದಲ್ಲಿ ಈ ಡ್ರೈವರ್ ಲೆಸ್ ಟ್ರೈನ್ಗಳು ಓಡಲಿವೆ. ಸದ್ಯ ನೇರಳೆ ಮತ್ತು ಹಸಿರು ಮಾರ್ಗದಲ್ಲಿರೋ ಟ್ರೈನ್ಗಳನ್ನೂ ಸಹ ಡ್ರೈವರ್ ಇಲ್ಲದೇ ಓಡಿಸಬಹುದು. ಆದ್ರೆ ಸಿಗ್ನಲಿಂಗ್ ವ್ಯವಸ್ಥೆ ಡ್ರೈವರ್ ಲೆಸ್ ಟ್ರೈನ್ ಓಡಲು ಬೇಕಾದ ಹಾಗೇ ರೂಪಿಸಿಲ್ಲ. ಈಕಾರಣದಿಂದಾಗಿ ಲೋಕೋಪೈಲೆಟ್ ಗಳನ್ನ ಇಟ್ಟು ಮೆಟ್ರೋ ಓಡಿಸಲಾಗ್ತಿದೆ. ಆದ್ರೆ ಇನ್ಮುಂದೆ ಬರೋ ಎಲ್ಲಾ ರೀಚ್ಗಳಲ್ಲೂ ಡ್ರೈವರ್ ಇರೋದಿಲ್ಲ. ಬದಲಾಗಿ ಆಟೋಮ್ಯಾಟಿಕ್ ಸಿಗ್ನಲಿಂಗ್ ವ್ಯವಸ್ಥೆ ಅಳವಡಿಸಿಕೊಂಡು ಮೆಟ್ರೋ ಓಡಲಿದೆ. ಟ್ರೈನ್ಗಳನ್ನ ಕಂಟ್ರೋಲ್ ರೂಂಗಳಿಂದಲೇ ನಿಂಯಂತ್ರಿಸೋ ವ್ಯವಸ್ಥೆ ಜಾರಿಗೆ ಬರಲಿದೆ. ಇದರಿಂದ ಮ್ಯಾನ್ಯುವಲ್ ಎರರ್ಗಳು ಕಡಿಮೆಯಾಗುತ್ತೆ. ಸದ್ಯ ಮ್ಯಾನ್ಯುವಲ್ ಎರರ್ ಕಾರಣದಿಂದ ಆಗಾಗ ಮೆಟ್ರೋ ನಿಂತೋಗೋ ಪ್ರಕರಣ ನಡೆಯುತ್ತಿದೆ ಇದು ಇನ್ಮುಂದೆ ಇರೋದಿಲ್ಲ ಅನ್ನೋದು ಬಿಎಂಆರ್ಸಿಎಲ್ ವಾದ
ಇದನ್ನೂ ಓದಿ: ‘ನಾವು ವಿವೇಕಾನಂದರ ವಂಶಸ್ಥರೇ ವಿನಃ ಮೊಘಲರ ವಂಶಸ್ಥರಲ್ಲ’
ಜನರಿಗೆ ಭಯಬೇಡ ಇದೊಂದು ಯಶಸ್ವಿ ಮಾಡೆಲ್:
ಇನ್ನು ಡ್ರೈವರ್ ಲೆಸ್ ಟ್ರೈನ್ ಗಳಿಂದ ಸುರಕ್ಷತೆ ಹೇಗೆ ಎಂಬ ಪ್ರಶ್ನೆ ಬರುತ್ತೆ. ಹೀಗಾಗೇ ಪ್ರಯಾಣಿಕರು ಹತ್ತುವ ಮತ್ತು ಇಳಿಯುವ ಸ್ಥಳಗಳಲ್ಲಿ ಆಟೋಮ್ಯಾಟಿಕ್ ಸ್ಕ್ರೀನ್ ಡೋರ್ಗಳನ್ನು ಅಳವಡಿಸೋಕೆ ಬಿಎಂಆರ್ಸಿಎಲ್ ನಿರ್ಧರಿಸಿದೆ. ಉಳಿದಂತೆ ಡ್ರೈವರ್ ಲೆಸ್ ಮೆಟ್ರೋ ಟ್ರೈನ್ಗಳು ನಮ್ಮ ಮೆಟ್ರೋಗೆ ಆಪರೇಷನ್ ಖರ್ಚನ್ನೂ ಕಡಿಮೆ ಮಾಡುತ್ತೆ ಅನ್ನೋದು ಬಿಎಂಆರ್ಸಿಎಲ್ ವಾದ. ಈಗಾಗಲೇ ದೆಹಲಿಯಲ್ಲಿ ಡ್ರೈವರ್ ಲೆಸ್ ಟ್ರೈನ್ ಓಡ್ತಿದೆ. ಇದೊಂದು ಯಶಸ್ವಿ ಮಾಡೆಲ್ ಹೀಗಾಗಿ ಜನ್ರಿಗೆ ಭಯ ಬೇಡ ಎನ್ನುತ್ತಿದೆ ಬಿಎಂಆರ್ಸಿಎಲ್.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.