ಫೆಬ್ರವರಿ 6ರಿಂದ ಮಹಾದಾಯಿ ನ್ಯಾಯಾಧೀಕರಣದಲ್ಲಿ ನಡೆಯುವ ಮಹಾದಾಯಿ ಅಂತಿಮ ಹಂತದ ವಿಚಾರಣೆಗೆ ಹಿರಿಯ ನ್ಯಾಯವಾದಿ ಪಾಲಿ ಎಸ್.ನಾರಿಮನ್ ಬರುವುದು ಅನುಮಾನವಾಗಿದೆ.


COMMERCIAL BREAK
SCROLL TO CONTINUE READING

ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಹಿರಿಯ ವಕೀಲ ನಾರಿಮನ್ ಅವರಿಗೆ ವೈದ್ಯರು ಕನಿಷ್ಠ ಆರು ತಿಂಗಳ ವಿಶ್ರಾಂತಿಯಲ್ಲಿರುವಂತೆ ಸಲಹೆ ನೀಡಿರುವುದರಿಂದ ಮಹಾದಾಯಿ ಅಂತಿಮ ಹಂತದ ವಿಚಾರಣೆಯಲ್ಲಿ ನಾರಿಮನ್ ಹಾಜರಿ ಅನುಮಾನ ಎಂದು ಹೇಳಲಾಗುತ್ತಿದೆ. ಈ ನಿಟ್ಟಿನಲ್ಲಿ ನಾರಿಮನ್ ಬದಲಿಗೆ ಹಿರಿಯ ವಕೀಲರ ಹುಡುಕಾಟ ಆರಂಭಿಸಿರುವ ರಾಜ್ಯ ಸರ್ಕಾರ ಹಿರಿಯ ವಕೀಲ ಗೋಪಾಲ್ ಸುಬ್ರಹ್ಮಣ್ಯಂ ಜತೆ ಮಾತುಕತೆ ಆರಂಭಿಸಿದೆ.


ಅಷ್ಟೇ ಅಲ್ಲದೆ ವಕೀಲ ಕಪಿಲ್ ಸಿಬಲ್, ಶ್ಯಾಮ್ ದಿವಾನ್ ಜತೆಯೂ ರಾಜ್ಯ ಸರ್ಕಾರ ಮಾತುಕತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.