Corona Vaccine : ಮಹಾಮಾರಿಯ ವಿರುದ್ಧ ಮಹಾಸಮರಾಭ್ಯಾಸ, ಕರೋನಾ ವಿರುದ್ಧ ಕದನಕ್ಕೆ ಕ್ಷಣಗಣನೆ !
ದೇಶಾದ್ಯಂತ ಕರೋನಾ ಲಸಿಕೆಯ ಡ್ರೈರನ್ ಅಂದರೆ, ಲಸಿಕೆ ಪ್ರಯೋಗಿಸುವ ಪೂರ್ವಾಭ್ಯಾಸ ನಡೆಸಲಾಗುತ್ತಿದೆ. ಪ್ರಾಥಮಿಕ ಹಂತದ ಪೂರ್ವಾಭ್ಯಾಸ ಯಶಸ್ವಿಯಾದ ಕಾರಣ, ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಡ್ರೈರನ್ ನಡೆಯುತ್ತಿದೆ.
ಬೆಂಗಳೂರು : ಇನ್ನು ಮಹಾಮಾರಿ ಕರೋನಾಗೆ (Coronavirus) ಭಯ ಪಡಬೇಕಾಗಿಲ್ಲ. ಕರೋನಾ ಲಸಿಕೆ (Corona Vaccine) ಸ್ವಲ್ಪ ದಿನಗಳಲ್ಲಿ ಬಳಕೆಗೆ ಸಿಗಲಿದೆ. ಈ ನಿಟ್ಟಿನಲ್ಲಿ ದೇಶಾದ್ಯಂತ ಡ್ರೈರನ್ ಅಂದರೆ, ಲಸಿಕೆ ಪ್ರಯೋಗಿಸುವ ಪೂರ್ವಾಭ್ಯಾಸ ನಡೆಸಲಾಗುತ್ತಿದೆ. ಪ್ರಾಥಮಿಕ ಹಂತದ ಪೂರ್ವಾಭ್ಯಾಸ ಯಶಸ್ವಿಯಾದ ಕಾರಣ, ದೇಶಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಡ್ರೈರನ್ ನಡೆಯುತ್ತಿದೆ. ಆದರೆ, ಹಿಮಾಚಲ, ಅರುಣಾಚಲ ಮತ್ತು ಹರಿಯಾಣಗಳಲ್ಲಿ ಡ್ರೈರನ್ ನಡೆಯುತ್ತಿಲ್ಲ.
ಮಹಾಮಾರಿಯ ವಿರುದ್ಧ ಮಹಾಸಮರ :
ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಡ್ರೈ ರನ್ ನಡೆಯುತ್ತಿದೆ. ಬೆಂಗಳೂರು ಮತ್ತು ಬೆಳಗಾವಿಯಲ್ಲಿ ಲಸಿಕೆಯ ಉಗ್ರಾಣವಿದೆ. ಶಿವಮೊಗ್ಗ, ಬಳ್ಳಾರಿ, ಕಲಬುರಗಿ, ಬಾಗಲಕೋಟೆ ಮತ್ತು ಮಂಗಳೂರಿನಲ್ಲಿ ಪ್ರಾದೇಶಿಕ ಲಸಿಕೆ ದಾಸ್ತಾನು ಕೇಂದ್ರಗಳಿವೆ. ಇಲ್ಲಿಂದ 2,855 ಶೀತಲ ಸರಣಿ ಪಾಯಿಂಟ್ ಗಳಿಗೆ ಕರೋನಾ ವ್ಯಾಕ್ಸಿನ್ (Corona Vaccine)ತಲುಪಲಿದೆ. ಒಂದು ಡೋಸ್ ಲಸಿಕೆಗೆ ಪೂರ್ವಾಭ್ಯಾಸ ಮಾಡಲಾಗುತ್ತಿದೆ. ಲಸಿಕೆ (Vaccination) ನೀಡಲು ಆರೋಗ್ಯ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗಿದೆ. ಅಗತ್ಯ ಪ್ರಮಾಣದ ಲಸಿಕೆ ಕೇಂದ್ರಗಳನ್ನೂ ಗುರುತಿಸಲಾಗಿದೆ.
ಲಸಿಕೆ ಅಷ್ಟೇ ಅಲ್ಲ, ಸಿರಿಂಜ್ ಕೂಡಾ ಮುಖ್ಯ:
ಒಂದು ಕೇಂದ್ರದಲ್ಲಿ ತಲಾ 100 ಮಂದಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ನೀಡಲು ಈಗಾಗಲೇ 24 ಲಕ್ಷ ಸಿರಿಂಜ್ ಗಳನ್ನು ಜಿಲ್ಲಾ ಕೇಂದ್ರಗಳಿಗೆ ರವಾನಿಸಲಾಗಿದೆ. ಕೇಂದ್ರದಿಂದ ಇನ್ನೂ 31 ಲಕ್ಷ ಸಿರಿಂಜ್ ಗಳು ಬರಬೇಕಿದೆ. ಲಸಿಕೆಗಳನ್ನು ಸಂಗ್ರಹಿಸಿಡಲು 2ರಿಂದ 8 ಡಿಗ್ರಿ ಉಷ್ಣತೆ ಕಾಪಾಡಿಕೊಳ್ಳುವ 64 ಬೃಹತ್ ಐಸ್ ಲೈನ್ಡ್ ರೆಫ್ರಿಜರೇಟ್ ಗಳು ರಾಜ್ಯಕ್ಕೆ ಬಂದಿವೆ. ಇದನ್ನು ಲಸಿಕಾ ಕೇಂದ್ರಗಳಲ್ಲಿ ಬಳಸಲಾಗುತ್ತದೆ.
ಲಸಿಕೆ ಡ್ರೈರನ್ ಯಾಕೆ..?
ಜನರಿಗೆ ಮಾಹಿತಿ ನೀಡುವುದು, ಲಸಿಕಾ ಕೇಂದ್ರಗಳಲ್ಲಿನ ವ್ಯವಸ್ಥೆ, ಸಿದ್ದತೆ, ಭದ್ರತೆ, ಲಸಿಕೆ ಸಾಗಾಣಿಕೆ ವ್ಯವಸ್ಥೆ, ಕೊವಿಡ್ (COVID) ಅಪ್ಲಿಕೇಶನ್ ಬಳಕೆ ಇತ್ಯಾದಿ ಅಂಶಗಳನ್ನು ಡ್ರೈ ರನ್ ವೇಳೆ ಪರಿಶೀಲಿಸಲಾಗುವುದು. ಲಸಿಕೆ ವಿತರಣೆಯ ಮೈಕ್ರೋ ಪ್ಲಾನಿಂಗ್ ದಕ್ಷತೆಯನ್ನು ಸರ್ಕಾರ ಪರಿಶೀಲಿಸಲಿದೆ. ಈ ಹಿಂದೆ ಪಲ್ಸ್ ಪೊಲೀಯೋ ಲಸಿಕೆ ಅಭಿಯಾನದ ಅನುಭವ ಕರೋನಾ ಲಸಿಕೆ ಪ್ರಯೋಗಿಸುವ ಅಭಿಯಾನದಲ್ಲಿ ನೆರವಿಗೆ ಬಂದಿದೆ.
ಇದನ್ನೂ ಓದಿ : ಶಾಕಿಂಗ್ ! Pfizer ಲಸಿಕೆ ಪಡೆದ ನಂತರ ಪಾರ್ಶ್ವವಾಯುವಿಗೆ ತುತ್ತಾದ ಮಹಿಳಾ ವೈದ್ಯೆ
ಇನ್ನು ನಡೆಯಲ್ಲ ಕರೋನಾ ಆಟ..!
ಮೊದಲ ಹಂತದಲ್ಲಿ 30 ಕೋಟಿ ಭಾರತೀಯರಿಗೆ ಕರೋನಾ ಲಸಿಕೆ ಮೊದಲ ಡೋಸ್ ನೀಡುವ ಯೋಜನೆ ಇಟ್ಟುಕೊಳ್ಳಲಾಗಿದೆ. ನಿಮಗೆ ಗೊತ್ತಿರಲಿ, ಈಗಾಗಲೇ ಕೊವಿಶೀಲ್ಡ್ (Covishield) ಮತ್ತು ಕೊವ್ಯಾಕ್ಸಿನ್ (Covaxin) ಈ ಎರಡು ಲಸಿಕೆಗಳ ತುರ್ತು ಬಳಕೆಗೆ ಸರ್ಕಾರ ಒಪ್ಪಿಗೆ ನೀಡಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.