ನವದೆಹಲಿ: ಅಚ್ಚರಿಯ ಸಂಗತಿಯೊಂದರಲ್ಲಿಶೇ 91ರಷ್ಟು ನಗರ ವಲಸೆಗಾರರು ಮತದಾನ ನೋಂದಣಿ ಮಾಡಿಸಿಲ್ಲ ಎನ್ನುವ ಅಂಶ ಈಗ ಅಧ್ಯಯನದ ಮೂಲಕ ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ದೆಹಲಿ, ಮುಂಬೈ-ಪುಣೆ, ಬೆಂಗಳೂರು ಮತ್ತು ಹೈದರಾಬಾದ್ ನಲ್ಲಿ ಸುಮಾರು1100 ನಗರ ವಲಸೆಗಾರರ ಕುರಿತು ಅಧ್ಯಯನ ಮಾಡಿದಾಗ ಈ ಅಂಶ ಬೆಳಕಿಗೆ ಬಂದಿದೆ. ನೆಸ್ಟಾವೇ ಎನ್ನುವ ಹೌಸಿಂಗ್ ಪೋರ್ಟಲ್ ಈ ವಿಚಾರವಾಗಿ ಅಧ್ಯಯನ ನಡೆಸಿದ್ದು, ಇದರಲ್ಲಿ ಬಹುತೇಕರು ತಮ್ಮ 20 ವರ್ಷ ವಯಸ್ಸಿನ ಆಸುಪಾಸಿನಲ್ಲಿದ್ದಾರೆ ಎನ್ನಲಾಗಿದೆ.


ಈ ಅಧ್ಯಯನದ ಕುರಿತಾಗಿ ಈಗ ಪ್ರತಿಕ್ರಿಯಿಸಿರುವ ನೆಸ್ಟಾವೇ ಸಿಇಓ" ಬಹುತೇಕರು ತಮ್ಮ ಮತ ನೋಂದಣಿ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಅದರ ಪ್ರಕ್ರಿಯೆ ನಿಜಕ್ಕೂ ಕಷ್ಟ. ಅದರಲ್ಲೂ ಅದೇ ರಾಜ್ಯದಿಂದ ಬಂದಿರದಿದ್ದರೆ ಇನ್ನು ಕಷ್ಟ, ಕರ್ನಾಟಕದಲ್ಲಿ ಭಾಷೆಯ ಸಮಸ್ಯೆ ಇದೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಹೊಸ ಮತದಾರರಿಗೆ ಸಹಾಯಕಾರಿಯಾಗುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.


ಬಹುತೇಕ ನಗರ ವಲಸೆಗಾರರಿಗೆ ಮತ ನೋಂದಣಿ ಹೇಗೆ ಮಾಡಿಸಬೇಕು ಎನ್ನುವ ವಿಚಾರವೇ ತಿಳಿದಿರುವುದಿಲ್ಲ.ಮತ್ತು ಅದರಲ್ಲಿ ಅವರಿಗೆ ಬಹುತೇಕ ವಾಸಸ್ತಾನಕ್ಕೆ ಸಂಬಂಧಪಟ್ಟ ದಾಖಲೆಗಳು ಕೂಡ ಇರುವುದುದಿಲ್ಲ. ಆದ್ದರಿಂದ ಮತದಾನ ನೋಂದಣಿ ಮಾಡಿಸದಿರುವುದಕ್ಕೆ ಇದು ಒಂದು ಕಾರಣ ಎಂದು ಹೇಳಲಾಗುತ್ತಿದೆ.