ಬೆಂಗಳೂರು : ಹಿಂಗಾರು ಬಿತ್ತನೆ ಹಾಗೂ ಬೆಳೆಗಳ ಸಂರಕ್ಷಣೆಗಾಗಿ ಕೃಷಿ ಇಲಾಖೆಯು ರೈತರಿಗೆ ಮನ್ನೇಚ್ಚರಿಕಾ ಕ್ರಮಗಳನ್ನು ತಿಳಿಸಿದೆ. ಈ ಕುರಿತು ಕೃಷಿ ಇಲಾಖೆಯ ಜಂಟಿನಿರ್ದೇಶಕರು ಪ್ರಕಟಣೆ ನೀಡಿದ್ದು, ಬಿತ್ತನೆ ಸಂದರ್ಭದಲ್ಲಿ ಬೀಜೋಪಚಾರ ಮತ್ತು ಹಿಂಗಾರು ಆರಂಭದಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ರೋಗ, ಕೀಟಗಳ ಹಾವಳಿಯನ್ನು ನಿಯಂತ್ರಿಸಲು ಕೃಷಿ ತಜ್ಞರು ನೀಡಿರುವ ನಿರ್ವಹಣಾ ಕ್ರಮಗಳನ್ನು ಪಾಲಿಸಬೇಕೆಂದು ಅವರು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಹಿಂಗಾರು ಹಂಗಾಮಿನ ಬೆಳೆಗಳ ರೋಗ ಹಾಗೂ ಕೀಟಗಳ ನಿರ್ವಹಣಾ ಕ್ರಮಗಳು:


ಹಿಂಗಾರಿ ಜೋಳ ಬೀಜೋಪಚಾರ: ಗಂಧಕ ಬೀಜೋಪಚಾರದ ಪೂರ್ವದಲ್ಲಿ ಪ್ರತಿ ಕಿ.ಗ್ರಾಂ ಬೀಜವನ್ನು 1.5 ಲೀ ನೀರಿನಲ್ಲಿ 30 ಗ್ರಾಂ ಕ್ಯಾಲ್ಸಿಯಂ ಕ್ಲೋರೈಡ್ ಅಥವಾ 7.5 ಗ್ರಾಂ ಪೊಟ್ಯಾಷಿಯಂ ನೈಟ್ರೇಟ್ ಬೆರೆಸಿದ ಅಥವಾ ಗೋಮೂತ್ರ (ಶೇ.25) ಬೆರೆಸಿದ ದ್ರಾವಣದಲ್ಲಿ 8 ಗಂಟೆಗಳ ಕಾಲ ನೆನೆಸಿ ನೆರಳಿನಲ್ಲಿ ಒಣಗಿಸಿ ಬಿತ್ತುವುದರಿಂದ ಬೀಜ ಮೊಳಕೆ ಹಾಗೂ ಸಸಿಗಳ ಬೆಳವಣಿಗೆ ಸುಧಾರಿಸುವುದು.


ಹಿಂಗಾರಿ ಜೋಳ ಬಿತ್ತಿದ 30 ಮತ್ತು 60 ದಿವಸಗಳಾದ ಮೇಲೆ ಪೊಟ್ಯಾಷಿಯಂ ನೈಟ್ರೇಟ್ (ಏಓಔ3) ಶೇ. 0.5 (ಪ್ರತಿ ಲೀಟರ್ ನೀರಿಗೆ 5 ಗ್ರಾಂ ಬೆರೆಸಿ) ಸಿಂಪರಣೆ ಕೈಗೊಳ್ಳುವುದರಿಂದ ಬರ ನಿರೋಧಕ ಶಕ್ತಿಯನ್ನು ವೃದ್ಧಿಸಿ ಹೆಚ್ಚಿನ ಇಳುವರಿ ಪಡೆಯಬಹುದು.


ಇದನ್ನೂ ಓದಿ-Chanakya Niti : ಕೆಳಗೆ ಬಿದ್ದಈ ವಸ್ತುಗಳು ತೆಗೆದುಕೊಳ್ಳಲು ಹಿಂಜರಿಯಬೇಡಿ, ಇದರಿಂದ ನಿಮಗಿದೆ ಆರ್ಥಿಕ ಲಾಭ!


ಕೀಟ ಹಾಗೂ ರೋಗ ನಿರ್ವಹಣೆ ಕ್ರಮ:


ಕಾಡಿಗೆ ರೋಗ: ಒಂದು ಕಿ.ಗ್ರಾಂ ಬೀಜಕ್ಕೆ 2 ಗ್ರಾಂ ಗಂಧಕ ಅಥವಾ ಕ್ಯಾಪ್ಟಾನ್ 80 ಡಬ್ಲೂಪಿ ಅಥವಾ 2 ಗ್ರಾಂ ಥೈರಾಮ್ 75 ಡಬ್ಲೂಪಿ. ಲೇಪನ ಮಾಡಿ ಬಿತ್ತನೆ ಮಾಡಬೇಕು. ಕೊಯ್ಲ ಮಾಡುವ ಮೊದಲು ಕಾಡಿಗೆ ರೋಗ ಪೀಡಿತ ತೆನೆಗಳನ್ನು ಗುರುತಿಸಿ ಆಯ್ದು ಸುಡುವುದರಿಂದ ರೋಗ ಹರಡುವುದನ್ನು ತಡೆಗಟ್ಟಬಹುದು.


ಫಾಲ್ ಸೈನಿಕ ಹುಳು:ಈ ಕೀಟದ ಬಾಧೆ ಹೆಚ್ಚಿನ ಪ್ರಮಾಣದಲ್ಲಿ ಜೋಳ ಮತ್ತು ಗೋವಿನ ಜೋಳದಲ್ಲಿ ಕಂಡುಬಂದಿರುವುದರಿಂದ, ರೈತರು ಈ ಕೀಟದ ನಿರ್ವಹಣೆಗೆ 0.3 ಗ್ರಾಂ. ಇಮಾಮೆಕ್ಟಿನ್ ಬೆಂಜೋಯೆಟ್ 5 Sಉ ಅಥವಾ 0.2ಮಿ.ಲೀ, ಸ್ಪೈನೋಸ್ಯಾಡ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಾಯಂಕಾಲದ ಹೊತ್ತಿನಲ್ಲಿ ಸಿಂಪರಣೆ ಮಾಡಿ ಕೀಟದ ನಿರ್ವಹಣೆ ಮಾಡಬೇಕು. ಬೆಳೆಯು ಎತ್ತರವಿದ್ದಾಗ ಕಳಿತ ಪಾಷಾಣವನ್ನು 50 ಕಿ.ಗ್ರಾಂ. ದಷ್ಟು ಸುಳಿ ಹಾಗೂ ಎಲೆಗಳ ಮೇಲೆ ಬೀಳುವಂತೆ ಎರಚಬೇಕು.


ಪಾಷಾಣ ತಯಾರಿಸುವ ವಿಧಾನ: 4 ಕಿ.ಗ್ರಾಂ ಬೆಲ್ಲ, 250 ಮಿ.ಲೀ ಮೊನೋಕ್ರೋಟೊಫಾಸ್ 36 ಎಸ್.ಎಲ್, 5-8 ಲೀಟರ್ ನೀರು ಹಾಗೂ 50 ಕಿ. ಗ್ರಾಂ ಅಕ್ಕಿ ಅಥವಾ ಗೋದಿ ತೌಡಿನೊಂದಿಗೆ ಬೆರೆಸಿ. ನಂತರ 48 ಗಂಟೆಗಳ ಕಾಲ ಗೋಣಿ ಚೀಲಗಳಲ್ಲಿ ಕಳಿಯಲು ಇಡಬೇಕು.


ಸಸ್ಯ ಹೇನು ಮತ್ತು ಸುಳಿ ತಿಗಣೆ :ಈ ಕೀಟಗಳ ನಿರ್ವಹಣೆಗೆ 0.5 ಮಿ.ಲೀ ಇಮಿಡಾಕ್ಲೋಪ್ರಿಡ್ ಅಥವಾ 1.00 ಗ್ರಾಂ ಆಸಿಪೀಟ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಂಪಡಿಸಬೇಕು.


ಕುಸುಬೆ :ಕುಸುಬೆ ಬೆಳೆಯಲ್ಲಿ ಎಲೆ ತಿನ್ನುವ ಹುಳು ಬಾಧೆ ಕಂಡು ಬಂದಲ್ಲಿ ನಿರ್ವಹಣೆಗೆ 2 ಮಿ.ಲೀ ಕ್ವಿನಾಲ್‍ಫಾಸ್ ಅಥವಾ 0.5 ಮಿ.ಲೀ ಲ್ಯಾಮಡಾಸೈಲೋಥ್ರಿನ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.


ಸಸ್ಯ ಹೇನು: ಈ ಕೀಟದ ಬಾಧೆ ನಿರ್ವಹಣೆಗೆ 0.5 ಮಿ.ಲೀ ಇಮಿಡಾಕ್ಲೋಪ್ರಿಡ್ ಅಥವಾ 1.0 ಗ್ರಾಂ ಆಸಿಫೇಟ್ ಪ್ರತಿ ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.


ತೊಂಡಿಲು ಕೊರಕ:ಈ ಕೀಟದ ಬಾಧೆ ಕಂಡುಬಂದಲ್ಲಿ 2 ಮಿ,ಲೀ ಕ್ವಿನಾಲಫಾಸ್ ಅಥವಾ 0.5 ಮಿ.ಲೀ ಲ್ಯಾಮಡಾಸೈಲೋಥ್ರಿನ್ 5 ಇಸಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.


ಎಲೆ ಚುಕ್ಕೆ ರೋಗ: ರೋಗ ಕಂಡು ಬಂದ ತಕ್ಷಣ 2 ಗ್ರಾಂ ಮ್ಯಾಂಕೋಜೆಬ್ 75 ಡಬ್ಲೂಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.


ಕಡಲೆ :


ಕಡಲೆ ಕಾಯಿಕೊರಕ (ಹೆಲಿಕೋವರ್ಪಾ): ಬಿತ್ತುವಾಗ ಪ್ರತಿ ಎಕರೆಗೆ 20 ಗ್ರಾಂ ಸೂರ್ಯಕಾಂತಿ ಹಾಗೂ 20 ಗ್ರಾಂ ಜೋಳದ ಬೀಜಗಳನ್ನು ಕೂಡಿಸಿ ಬಿತ್ತಬೇಕು. ನಂತರ ಬೆಳೆಯು ಕಾಳು ಕಟ್ಟವ ಹಂತದಲ್ಲಿದ್ದಾಗ ಪ್ರತಿ ಎಕರೆಗೆ 10 ಸೇರು ಚುರಿಮುರಿಯನ್ನು (ಮಂಡಕ್ಕಿ/ಮಂಡ್ಯಾಳ) ಹೊಲದ ತುಂಬೆಲ್ಲಾ ಚೆಲ್ಲುವುದರಿಂದ ಪಕ್ಷಿಗಳಿಗೆ ಕೀಡೆಗಳನ್ನು ತಿನ್ನಲು ಪೋತ್ಸಾಹಿಸಿದಂತೆ ಆಗುತ್ತದೆ.


ಕೀಟನಾಶಕಗಳಾದ 2 ಮಿ.ಲೀ ಕ್ಲೋರಫೆನಾಫೈರ್ 24% ಎಸ್.ಸಿ.ಅಥವಾ 0.075 ಮಿ.ಲೀ ಫ್ಲೂಬೆಂಡಿಯಾಮೈಡ್ 39.35 ಎಸ್.ಸಿ ಅಥವಾ ಕ್ಲೋರೆಂಟ್ರಿನಾಲಿಪ್ರೋಲ 18.5 ಎಸ್. ಸಿ, 0.15 ಮಿ.ಲೀ ಅಥವಾ 0.2 ಗ್ರಾಂ ಇಮಾಮೆಕ್ಟಿನ್ ಬೆಂಜೊಯೇಟ, 5 ಎಸ್.ಜಿ ಅಥವಾ 0.1 ಮಿ.ಲೀ ಸ್ಪೈನೊಸ್ಯಾಡ್ 45 ಎಸ.ಸಿ ಅಥವಾ 0.3 ಮಿ.ಲೀ ಇಂಡಾಕ್ಸಾಕಾರ್ಬ್ 14.5 ಎಸ್.ಸಿ.ಅಥವಾ 4 ಗ್ರಾಂ ಕಾರ್ಬರಿಲ್ 50 ಡಬ್ಲೂಪಿ. ಅಥವಾ 1.0 ಮೀ.ಲೀ ಮಿಥೈಲ್ ಪ್ಯಾರಾಥಿಯಾನ್ 50 ಇ.ಸಿ. ಅಥವಾ 2 ಮಿ.ಲೀ ಕ್ವಿನಾಲ್ಫಾಸ್ 25 ಇ.ಸಿ ಅಥವಾ 2 ಮಿ.ಲೀ ಮಿಥೊಮಿಲ್ 40 ಎಸ್.ಪಿ ಅಥವಾ 2 ಮಿ.ಲೀ ಪ್ರೋಫೆನೋಫಾಸ್ 50 ಇ.ಸಿ ಅಥವಾ 1 ಗ್ರಾಂ ಅಸಿಫೇಟ್ 75 ಎಸ್.ಪಿ ಅಥವಾ ಬೆಳ್ಳೂಳಿ ಮತ್ತು ಹಸಿ ಮೆಣಸಿಕಾಯಿ ಕಷಾಯವನ್ನು 20 ಮಿ.ಲೀ ಪ್ರತಿ ಲೀಟರ್ ನೀರಿನಲ್ಲಿ ಸಿಂಪಡಿಸಬೇಕು.


ತುಕ್ಕುರೋಗ¬: ಕಡಲೆ ಮತ್ತು ಗೋಧಿ ಬೆಳೆಗಳಿಗೆ ಬರುವ ತುಕ್ಕು ರೋಗ ನಿರ್ವಹಣೆಗೆ ಮುಂಜಾಗ್ರತಾ ಕ್ರಮವಾಗಿ ರೋಗ ಕಂಡು ತಕ್ಷಣ ಹೆಕ್ಸಾಕೋನಾಜೋಲ್ 1 ಮಿ.ಲೀ ಅಥವಾ ಪ್ರೊಫಿಕೋನಾಜೋಲ್ 1 ಮಿ.ಲೀ ಪ್ರತಿ ಲೀಡರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.


ನಟೆ ರೋಗ/ ಸಿಡಿ ರೋಗ/ ಸೊರಗು ರೋಗ / ಮತ್ತು ಬೇರು ಕೊಳೆ ರೋಗ: ಪ್ರತಿ ಕಿ.ಗ್ರಾಂ ಬೀಜಕ್ಕೆ 2 ಗ್ರಾಂ ಕ್ಯಾಫ್ಟಾನ್ 80 ಡಬ್ಲೂ.ಪಿ ಅಥವಾ ಥೈರಾಮ್ 75 ಡಬ್ಲೂಪಿ. ಅಥವಾ ಮೆಂಕೋಜೆಬ್ 75 ಡಬ್ಲೂ.ಪಿ ಅಥವಾ 3.5 ಗ್ರಾಂ (ಕಾರ್ಬನಡೈಜಿಮ್ + ಮ್ಯಾಂಕೋಜೆಬ್) ಅಥವಾ 4 ಗ್ರಾಂ ಟ್ರೈಕೋಡರ್ಮಾ ಜೈವಿಕ ಶಿಲೀಂಧ್ರದಿಂದ ಬೀಜೋಪಚಾರ ಮಾಡಬೇಕು. ರೋಗ ಬಾಧಿತ ಗಿಡಗಳನ್ನು ಆಗಾಗ ಕಿತ್ತು ಸುಡಬೇಕು. ನೆಟೆ ರೋಗ ಮತ್ತು ಬೇರು ಕೊಳೆ ರೋಗದ ಪರಿಣಾಮಕಾರಿ ನಿರ್ವಹಣೆಗೆ ಬಿತ್ತನೆ ಬೀಜಕ್ಕೆ ಟ್ರೈಕೋಡರ್ಮಾ ಜೈವಿಕ ಶಿಲೀಂಧ್ರನಾಶಕವನ್ನು ಪ್ರತಿ ಕಿ.ಗ್ರಾಂ ಬೀಜಕ್ಕೆ 4 ಗ್ರಾಂ ದಂತೆ ಬೀಜೋಪಚಾರ ಮಾಡುವುದರ ಜೊತೆಗೆ 1 ಕಿ.ಗ್ರಾಂ ಟ್ರೈಕೋಡರ್ಮಾ ಪುಡಿಯನ್ನು 100. ಕಿ.ಗ್ರಾಂ ಪುಡಿ ಮಾಡಿದ ತಿಪ್ಪೆಗೊಬ್ಬರ ಮತ್ತು 20 ಕಿ.ಗ್ರಾಂ ಬೇವಿನ ಬೀಜದ ಪುಡಿಯಲ್ಲಿ ಮಿಶ್ರಮಾಡಿ ಶೇ. 50 ರಷ್ಟು ತೇವಾಂಶ ಇರುವಂತೆ ಮಾಡಿ ಪ್ಲಾಸ್ಟಿಕ್ ಹೊದಿಕೆಯಿಂದ ಮುಚ್ಚಿ 7 ದಿವಸಗಳವರೆಗೆ ಇಟ್ಟು ಒಂದು ಎಕರೆ ಜಮೀನಿಗೆ (ಮಣ್ಣಿಗೆ) ಬಿತ್ತುವ ಸಮಯದಲ್ಲಿ ಉಪಯೋಗಿಸಬೇಕು.


ಇದನ್ನೂ ಓದಿ: Bangalore Police : ಚಿಲುಮೆ ಕಚೇರಿ ಮೇಲೆ‌ ಪೊಲೀಸರ ದಾಳಿ: ನಾಲ್ವರು ವಶಕ್ಕೆ


ಗೋದಿ:


ತುಕ್ಕು ರೋಗ: ನಿಗದಿತ ಸಮಯದಲ್ಲಿ ಅಂದರೆ ಅಕ್ಟೋಬರ್ 1 ನೇ ಹಾಗೂ 2ನೇ ವಾರದಲ್ಲಿ ಬಿತ್ತನೆ ಮಾಡಿದಲ್ಲಿ ಈ ರೋಗದ ಬಾಧೆಯು ಕಡಿಮೆಯಾಗುವುದು. ಬಿತ್ತನೆಗೆ ರೋಗ ನಿರೋಧಕ ತಳಿಗಳನ್ನು ಉಪಯೋಗಿಸುವುದು. ಎಲೆ ತುಕ್ಕುರೋಗ ಕಂಡ ತಕ್ಷಣ 1 ಮಿ.ಲೀ ಪ್ರೊಪಿಕೋನ್‍ಜೋಲ್ 25 ಇ ಸಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ರೋಗದ ತ್ರೀವ್ರತೆಗೆ ಅನುಗುಣವಾಗಿ 15 ದಿನಗಳ ಅಂತರದಲ್ಲಿ ಎರಡನೆಯ ಸಿಂಪರಣೆ ಮಾಡಬೇಕು.


ಎಲೆ ಮಚ್ಚೆ ರೋಗ:ರೋಗವು ಕಾಣಿಸಿಕೊಂಡ ಕೊಡಲೇ 2 ಗ್ರಾಂ ಮ್ಯಾಂಕೊಜೆಬ್ 75 ಡಬ್ಲು.ಪಿ. ಶಿಲೀಂದ್ರನಾಶಕವನ್ನು ಅಥವಾ 1.0 ಮಿ.ಲೀ ಹೆಕ್ಸಾಕೋನಾಜೋಲ್ 5% ಇ.ಸಿ. ಯನ್ನು ಪ್ರತಿ ಲೀ. ನೀರಿನಲ್ಲಿ ಬೆರೆಸಿ ಸಂಪರಣೆ ಮಾಡಬೇಕು. ರೋಗದ ತೀವ್ರತೆಗೆ ಅನುಗುಣವಾಗಿ 15 ದಿನಗಳ ಅಂತರದಲ್ಲಿ ಈ ಸಿಂಪರಣೆ ಕೈಗೊಳ್ಳಬೇಕು.


ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.