ಬೆಂಗಳೂರು: ಬೆಂಗಳೂರು ಟೆಕ್ ಶೃಂಗಸಭೆಯ 25 ನೇ ವಾರ್ಷಿಕೋತ್ಸವದ ಈ ಸಂದರ್ಭದಲ್ಲಿ ಡಿಜಿಟಲ್ ಜಾಗತಿಕ ಕ್ಷೇತ್ರದಲ್ಲಿ ಉದಯೋನ್ಮುಖ ಟೆಕ್ ಕ್ಲಸ್ಟರ್ ಗಳನ್ನು ಬಲವರ್ಧನೆಗೊಳಿಸುವ ಪ್ರಯತ್ನಗಳಿಗೆ ಚಾಲನೆ ನೀಡುವ ಬದ್ಧತೆಯನ್ನು ಸರ್ಕಾರ ತೋರಿದೆ. ಉದ್ಯಮ ಮತ್ತು ಶೈಕ್ಷಣಿಕ ಪಾಲುದಾರರ ನೆರವಿನಿಂದ ಮೊದಲ ಹಂತದಲ್ಲಿ 3 ಕ್ಲಸ್ಟರ್ ಗಳಲ್ಲಿ ಆಂಕರ್ ಕೈಗಾರಿಕೆಗಳಿಗೆ ಚಾಲನೆ ನೀಡುವ ದಿಸೆಯಲ್ಲಿ ಒಂದು ರೋಡ್ ಮ್ಯಾಪ್ ಸಿದ್ಧಪಡಿಸಿದೆ.
ಮೈಸೂರು: ಸೈಬರ್ ಸೆಕ್ಯೂರಿಟಿ & ಇಎಸ್ ಡಿಎಂ
ಹುಬ್ಬಳ್ಳಿ- ಧಾರವಾಡ- ಬೆಳಗಾವಿ- ಅಗ್ರಿಟೆಕ್, ಇಎಸ್ ಡಿಎಂ, ಎಐ
ಮಂಗಳೂರು: ಫಿನ್ ಟೆಕ್, ಹೆಲ್ತ್ ಟೆಕ್
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಈ ಗುರಿಯನ್ನು ಸಾಧಿಸಲು ಎಲ್ಲಾ ಪಾಲುದಾರರನ್ನು ಒಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಕಾರ್ಯಕಾರಿ ಮತ್ತು ಪರವಾದ ಉದ್ಯಮವಾಗಿದೆ. 2030 ರ ವೇಳೆಗೆ ಬೆಂಗಳೂರು ಆಚೆಗೆ ಕರ್ನಾಟಕದ ಜಿಡಿಪಿಯ ಶೇ.2.5 ರಷ್ಟು ಕೊಡುಗೆ ನೀಡುತ್ತದೆ. 2026 ರ ವೇಳೆಗೆ ಭಾರತದ ಡಿಜಿಟಲ್ ಆರ್ಥಿಕ ಗುರಿಗೆ ರಾಜ್ಯವು 250 ಶತಕೋಟಿ ಡಾಠಲರ್ ಗಿಂತ ಹೆಚ್ಚು ಕೊಡುಗೆಯನ್ನು ನೀಡಲಿದೆ ಎಂದು ಅಂದಾಜಿಸಲಾಗಿದೆ.
ಉದಯೋನ್ಮುಖ ಟೆಕ್ ಕ್ಲಸ್ಟರ್ ಗಳ ಪ್ರಸ್ತುತ ಸಾಮರ್ಥ್ಯಗಳನ್ನು ಹೊರಜಗತ್ತಿಗೆ ಪರಿಚಯಿಸುವ ಮತ್ತು 2026 ರವರೆಗೆ ಪ್ರಬಲ ಮಾರ್ಗಸೂಚಿಯನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಬಿಯಾಂಡ್ ಬೆಂಗಳೂರು ಟೆಕ್ ಸಮ್ಮಿಟ್ ಅನ್ನು ಆಯೋಜಿಸಿತ್ತು. ಈ ಶೃಂಗಸಭೆಯ ಭಾಗವಾಗಿ ಕಳೆದ 12 ತಿಂಗಳಲ್ಲಿ ಈ 3 ಉದಯೋನ್ಮುಖ ಟೆಕ್ ಕ್ಲಸ್ಟರ್ ಗಳಲ್ಲಿ ತಮ್ಮ ವ್ಯವಹಾರಗಳನ್ನು ವಿಸ್ತರಣೆ ಮಾಡಿದ 33 ಕಂಪನಿಗಳನ್ನು ಕರ್ನಾಟಕ ಸರ್ಕಾರದ ಐಟಿ ಸಚಿವರಾದ ಡಾ.ಸಿ.ಎನ್.ಅಶ್ವಥ್ ನಾರಾಯಣ ಅವರು ಸನ್ಮಾನಿಸಿದರು.
ಇದನ್ನೂ ಓದಿ: Bangalore Police : ಚಿಲುಮೆ ಕಚೇರಿ ಮೇಲೆ ಪೊಲೀಸರ ದಾಳಿ: ನಾಲ್ವರು ವಶಕ್ಕೆ
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ನ ಅಧ್ಯಕ್ಷ ಬಿವಿ ನಾಯ್ಡು ಅವರು ಮಾತನಾಡಿ, ``ನಾವು ಅನುಕೂಲಕರವಾದ ವಾತಾವರಣದಲ್ಲಿ ಹಲವಾರು ಸ್ಟಾರ್ಟಪ್ ಗಳನ್ನು ಬಲವರ್ಧನೆ ಮತ್ತು ವೇಗವರ್ಧನೆ ಮಾಡಿದ್ದರ ಫಲವಾಗಿ ಕಳೆದ ವರ್ಷದಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಾಗಿದೆ. ನಾವು ಜಿಸಿಸಿ-ಸ್ಪೋಕ್ ಶೋರ್ ಸ್ಟಾಟಜಿ & ಸ್ಟಾರ್ಟಪ್ ಗ್ರಿಡ್ ನ ಉಪಕ್ರಮವನ್ನು ಮೇಲ್ವಿಚಾರಣೆ ಮಾಡಿದ್ದೇವೆ. ಇದು ಸುಮಾರು 33 ಕಂಪನಿಗಳು ಬೆಂಗಳೂರು ಕ್ಲಸ್ಟರ್ ನಿಂದ ಆಚೆಗೆ ಅಂದರೆ ಬೆಂಗಳೂರು ವಿಭಾಗದಿಂದ ಆಚೆಗೆ ಕಾರ್ಯಾಚರಣೆಯನ್ನು ಪ್ರಾರಂಭಿಸುವುದರ ಜೊತೆಗೆ ವಿಸ್ತರಣೆ ಮಾಡಿದಂತಾಗಿದೆ. ಇದರ ಪರಿಣಾಮ 10,000 ಕ್ಕೂ ಹೆಚ್ಚು ಜನರಿಗೆ ಉದ್ಯೋಗಾವಕಾಶ ದೊರೆತಿದೆ. ನಾವು ಮೈಸೂರು, ಹುಬ್ಬಳ್ಳಿ, ಧಾರವಾಡ, ಮಂಗಳೂರು, ಕಲಬುರಗಿ ಮತ್ತು ಬೆಳಗಾವಿಯಲ್ಲಿ ಎಐ ಮತ್ತು ಸೈಬರ್ ಸೆಕ್ಯೂರಿಟಿಯಲ್ಲಿ ಭವಿಷ್ಯದ ಡಿಜಿಟಲ್ ಉದ್ಯೋಗಗಳನ್ನು ಸೃಷ್ಟಿಸುತ್ತಿದ್ದೇವೆ. ಇಲ್ಲಿ 2000+ ಉದ್ಯೋಗಾವಕಾಶಗಳು ದೊರೆಯಲಿವೆ. ಈ ಮೂಲಕ ನಾವು ನಮ್ಮ ವಿಷನ್ ಅನ್ನು ವಿಸ್ತರಣೆ ಮಾಡುವ ನಿಟ್ಟಿನಲ್ಲಿ ಮುನ್ನಡಿ ಇಡುವುದರೊಂದಿಗೆ ಬೆಂಗಳೂರಿನ ನಂತರದಲ್ಲಿ ಕರ್ನಾಟಕದ ಇತರೆ ಭಾಗಗಳಲ್ಲಿ ತಂತ್ರಜ್ಞಾನಗಳು ಮತ್ತು ಅವಕಾಶಗಳನ್ನು ಕೊಂಡೊಯ್ಯುತ್ತಿದ್ದೇವೆ. ನಮ್ಮ ಶೈಕ್ಷಣಿಕ ಮತ್ತು ತರಬೇತಿ ಪಾಲುದಾರರು ಆರಂಭಿಸಲು ಆಂಕರ್ ವಲಯಗಳಾದ್ಯಂತ ನುರಿತ ಮತ್ತು ಉದ್ಯೋಗಿಗಳ ಬೇಡಿಕೆಯನ್ನು ಪೂರೈಸಲು ಸಜ್ಜಾಗಿದ್ದಾರೆ. ಇದರ ಜೊತೆಗೆ 2030 ರ ವೇಳೆಗೆ 10,000 ಸ್ಟಾರ್ಟಪ್ ಗಳಿಗೆ ಚಾಲನೆ ಮಾಡುವ ನಮ್ಮ ಗುರಿಯನ್ನು ಬೆಂಗಳೂರಿನ ಆಚೆಗೆ ಸರಿಯಾದ ದಿಕ್ಕಿನಲ್ಲಿ ಒಂದು ಸಮರ್ಪಕ ಹೆಜ್ಜೆಯಾಗಿದೆ’’ ಎಂದು ತಿಳಿಸಿದರು.
ಇದನ್ನೂ ಓದಿ-Chanakya Niti : ಕೆಳಗೆ ಬಿದ್ದಈ ವಸ್ತುಗಳು ತೆಗೆದುಕೊಳ್ಳಲು ಹಿಂಜರಿಯಬೇಡಿ, ಇದರಿಂದ ನಿಮಗಿದೆ ಆರ್ಥಿಕ ಲಾಭ!
ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ನ ಸಿಇಒ ಸಂಜೀವ್ ಗುಪ್ತ ಅವರು ಮಾತನಾಡಿ, ``ಕಂಪನಿಗಳು, ಹೂಡಿಕೆದಾರರು ಮತ್ತು ವಿಶಾಲವಾದ ಜಾಗತಿಕ ಪರಿಸರ ವ್ಯವಸ್ಥೆಯ ನಡುವೆ ನಿರಂತರ ಸಂವಾದವನ್ನು ನಿರ್ವಹಿಸುವ ಮೂಲಕ ಈ ಕ್ಲಸ್ಟರ್ ಗಳನ್ನು ಉತ್ತೇಜಿಸುವಲ್ಲಿ ಕೆಡಿಇಎಂನ ಗಮನವು ಕೇಂದ್ರೀಕೃತವಾಗಿದೆ. ಕಳೆದ 12 ತಿಂಗಳುಗಳಲ್ಲಿ ನಾವು 2026 ರ ಗುರಿಗಳನ್ನು ತಲುಪಲು ನಮಗೆ ಸಹಾಯ ಮಾಡುವ ಬೆಂಗಳೂರಿನ ಆದೇಶವನ್ನು ಚಾಲನೆ ಮಾಡಲು 13+ ಉದ್ಯಮ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ನಮ್ಮ ಪ್ರಮುಖ ಉಪಕ್ರಮಗಳಲ್ಲಿ ಸ್ಟಾರ್ಟಪ್ ಗ್ರಿಡ್ ಒಂದಾಗಿದೆ. ಇದು ಡಿಜಿಟಲ್ ಆರ್ಥಿಕತೆಯ ಬಹು ವಲಯಗಳಲ್ಲಿ ವಿವಿಧ ತಂತ್ರಜ್ಞಾನ ಸಂಬಂಧಿತ ಸ್ಟಾರ್ಟಪ್ ಗಳಿಗೆ ಸಂಪರ್ಕ ಕಲ್ಪಿಸುತ್ತದೆ. ನಾವು ಈಗಾಗಲೇ ಗ್ರಿಡ್ ನಲ್ಲಿ 400 ಕ್ಕೂ ಹೆಚ್ಚು ಸ್ಟಾರ್ಟಪ್ ಗಳನ್ನು ಹೊಂದಿದ್ದೇವೆ. ಪ್ರತಿಯೊಂದಕ್ಕೂ ಮೂಲಸೌಕರ್ಯ ಮತ್ತು ಕಸ್ಟಮೈಸ್ ಮಾಡಿದ ಪಾಲುದಾರ ಉತ್ಪನ್ನಗಳಂತಹ ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ಕ್ಲಸ್ಟರ್ ಸೀಡ್ ಫಂಡ್ ಗಳೊಂದಿಗೆ ಬೆಂಗಳೂರಿನ ಹೊರಗಿನ ಸ್ಟಾರ್ಟಪ್ ಗಳನ್ನು ಪ್ರೋತ್ಸಾಹಿಸಲು ನಾವು ಮತ್ತಷ್ಟು ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಎಲ್ಲಾ ಮೂರು ಕ್ಲಸ್ಟರ್ ಗಳಿಗೆ 75 ಕೋಟಿ ರೂಪಾಯಿಗಳನ್ನು ನೀಡುತ್ತೇವೆ. ಈ ಸಕಾರಾತ್ಮಕ ಕ್ರಮಗಳು ಭಾರತ ಮತ್ತು ವಿದೇಶಗಳೆರಡರಿಂದಲೂ ಸ್ಕೇಲೇಬಲ್ ಐಡಿಯಾಗಳೊಂದಿಗೆ ಹೆಚ್ಚು ಹೂಡಿಕೆದಾರರು ಮತ್ತು ಉದ್ಯಮಿಗಳನ್ನು ಆಕರ್ಷಿಸುತ್ತವೆ ಎಂಬುದನ್ನು ನಾವು ನಂಬುತ್ತೇವೆ’’ ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.