Neha Hiremath bvb : ಮಗಳ ಹತ್ಯೆಗೆ ನ್ಯಾಯ ದಕ್ಕಿಸಿ ಕೊಡುವ ಹೊಣೆಯನ್ನು ಪ್ರಹ್ಲಾದ ಜೋಶಿ ಹೆಗಲಿಗೆ ಹಾಕಿದರೇ ಕಾಂಗ್ರೆಸ್ ಕಾರ್ಪೋರೇಟರ್? ಈ ಕುರಿತು ಸಾರ್ವಜನಿಕ ಮತ್ತು ರಾಜಕೀಯ ವಲಯದಲ್ಲಿ ಸದ್ಯ ಇಂಥದ್ದೋಂದು ಪ್ರಶ್ನೆ ಮೂಡುವುದು ಸಹಜವೇ. ಕಾರಣ ಕಾಂಗ್ರೆಸ್ಸಿಗರ ಜಾಣ ಕುರುಡು ನಡೆ.


COMMERCIAL BREAK
SCROLL TO CONTINUE READING

ಹುಬ್ಬಳ್ಳಿಯ ಕಾಲೇಜ್ ಕ್ಯಾಂಪಸ್ ಅಲ್ಲಿ ಬರ್ಭರ ಹತ್ಯೆಗೀಡಾದ ಯುವತಿ ನೇಹಾಳ ತಂದೆ ನಿರಂಜನ್ ಹಿರೇಮಠ ಮಹಾನಗರ ಪಾಲಿಕೆ ಸದಸ್ಯ. ಅದರಲ್ಲೂ ಆಡಳಿತ ಪಕ್ಷ ಕಾಂಗ್ರೆಸ್ ನ ಜನಪ್ರತಿನಿಧಿ. ಹಾಗಿದ್ದರೂ ಒಬ್ಬ ಅಸಹಾಯಕ ತಂದೆಯಂತೆ ಬಿಜೆಪಿ ಮೊರೆ ಹೋದರೆ?!


ಇದನ್ನೂ ಓದಿ:ಸ್ವತಃ ಮಗನಿಗೆ ಫಸ್ಟ್‌ ಟೈಮ್‌ ಸೆಕ್ಸ್‌ ಯಾವಾಗ ಮಾಡಿದೆ ಅಂತ ಕೇಳಿದ ಮಲೈಕಾ..! ಉತ್ತರ ಏನಿತ್ತು ಗೊತ್ತೆ..?


ನೇಹಾಳ ಹತ್ಯೆ ಸುದ್ದಿ ತಿಳಿಯುತ್ತಲೇ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ರಾತ್ರೋ ರಾತ್ರಿ ಕಾರ್ಪೋರೇಟರ್ ನಿರಂಜನ್ ಮನೆಗೆ ತೆರಳಿ ಘಾಸಿಗೊಂಡ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಿದರು. ಆದರೆ, ಈ ವೇಳೆ ನೇಹಾಳ ಅತ್ತೆ ಮತ್ತು ತಂದೆ ಜೋಶಿ ಅವರೆದುರು ಕರ ಜೋಡಿಸಿ ಸರ್, ಮಗಳ ಸಾವಿಗೆ ನ್ಯಾಯ ದಕ್ಕಿಸಿ ಕೊಡಿ ಇದು ನಿಮ್ಮಿಂದ ಮಾತ್ರವೇ ಸಾಧ್ಯ ಎಂದು ಅಲವತ್ತುಕೊಂಡರು. 


ಪ್ರಹ್ಲಾದ ಜೋಶಿ ಅವರಲ್ಲಿ ನಿರಂಜನ್ ಕೈ ಜೋಡಿಸಿ ನ್ಯಾಯಕ್ಕಾಗಿ ಮೊರೆ ಇಡುತ್ತಿದ್ದ ಪರಿ ನೋಡಿದರೆ ತಾವೊಬ್ಬ ಕಾಂಗ್ರೆಸ್ ಕಾರ್ಪೋರೇಟರ್ ಎಂಬುದನ್ನೇ ಮರೆತು ಒಬ್ಬ ಸಾಮಾನ್ಯ- ಅಸಹಾಯಕ ತಂದೆಯಾಗಿ ಬೇಡಿಕೊಳ್ಳುತ್ತಿದ್ದಂತೆ ಭಾಸವಾಯಿತು. ಅಲ್ಲದೆ, ರಾಜ್ಯದಲ್ಲಿನ ತಮ್ಮದೇ ಕಾಂಗ್ರೆಸ್ ಸರ್ಕಾರದ ಮೇಲೆ  ನಂಬಿಕೆ ಕಳೆದುಕೊಂಡರಾ ಕಾಂಗ್ರೆಸ್ ಕಾರ್ಪೋರೇಟರ್? ಎಂಬ ಪ್ರಶ್ನೆ ಹುಟ್ಟು ಹಾಕಿದೆ.


ಇದನ್ನೂ ಓದಿ:ನೇಹಾ ಸಾವಿಗೆ ಆಕ್ರೋಶ ಹೊರ ಹಾಕಿದ ಆಂಜನೇಯ ಭಕ್ತ ಧ್ರುವ ಸರ್ಜಾ..! ಕ್ರೂರಿಗೆ ತಕ್ಕ ಶಿಕ್ಷೆಯಾಗಬೇಕು ಎಂದ ನಟ


ಸಾಲು ಸಾಲು ಘಟನೆಗಳಲ್ಲಿ ಆದ ಕ್ರಮ ನಿರಂಜನ್ ಆತ್ಮವಿಶ್ವಾಸ ಕುಗ್ಗಿಸಿತೇ?: ರಾಜ್ಯದಲ್ಲಿ ಇತ್ತೀಚಿಗೆ ನಡೆದ ಪಾಕಿಸ್ತಾನ ಜಿಂದಾಬಾದ್, ರಾಮೇಶ್ವರ ಕೇಫೇ ಸ್ಫೋಟ, ಹನುಮಾನ್ ಚಾಲೀಸ್ ಹಾಕಿದವನ ಮೇಲೆ ಹಲ್ಲೆ, FIR, ಶ್ರೀರಾಮ ಘೋಷಣೆ ಕೂಗಿದವರ ಮೇಲೆ ಹಲ್ಲೆ ಹೀಗೆ ಸಾಲು ಸಾಲು ಅಹಿತಕರ ಕೃತ್ಯಗಳಲ್ಲಿ ರಾಜ್ಯ ಸರ್ಕಾರ ಕೈಗೊಂಡ ಕ್ರಮಗಳನ್ನು ಯೋಚಿಸಿದ ನಿರಂಜನ್ ಅವರಲ್ಲಿ ಬಹುಷಃ ತಮ್ಮ ಮಗಳ ಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗುವ ಆತ್ಮವಿಶ್ವಾಸವನ್ನು ಕುಗ್ಗಿಸಿತೇ ಪ್ರಶ್ನೆ ಜತೆಗೆ ಗ್ರಾಸ ಚರ್ಚೆಗೆ ಕಾರಣವಾಗಿದೆ ಈಗ.


ಕಂಗೆಡಿಸಿತೇ ಸಿಎಂ-ಪರಂ "ವೈಯಕ್ತಿಕ" ಹೇಳಿಕೆ: ನೇಹಾಳ ಹತ್ಯೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಪರಮೇಶ್ವರ್ ಅವರು ನೀಡಿದ ಅದು ವೈಯಕ್ತಿಕ ಎಂಬ ಪ್ರತಿಕ್ರಿಯೆ ಕಾರ್ಪೋರೇಟರ್ ನಿರಂಜನ್ ಮಾತ್ರವಲ್ಲ, ಇಡೀ ಕುಟುಂಬವನ್ನೇ ಕಂಗೆಡಿಸಿದೆ.


ಇದನ್ನೂ ಓದಿ: ಮದುವೆಗೂ ಮುನ್ನವೇ ಗರ್ಭಿಣಿಯಾಗಿದ್ದ ಈ ನಟಿ, ಟೈಗರ್​ ಶ್ರಾಫ್​ ಜೊತೆ ಲಿಫ್ಟ್​ ನಲ್ಲಿ ಸಿಕ್ಕಿಬಿದ್ದಿದ್ದರು..!


ಮಗಳ ಆತ್ಮ ಶಾಂತಿಗಾಗಿ ಜೋಶಿಗೆ ಮೊರೆ: ಕಾರ್ಪೋರೇಟರ್ ನಿರಂಜನ್ ಮತ್ತು ಕುಟುಂಬ ನೇಹಾ ಹತ್ಯೆಗೆ ನ್ಯಾಯ ದಕ್ಕಿಸಲು, ಪ್ರಹ್ಲಾದ ಜೋಶಿ ಅವರೇ ಸರಿ ಎಂಬ ನಿರ್ಣಯಕ್ಕೆ ಬಂದಂತಿದೆ. ಅಲ್ಲದೇ, ವಿರೋಧ ಪಕ್ಷದವರಾದ್ರೂ ಜೋಶಿ ಅವರು ಯಾವತ್ತೂ ಇಂಥ ಅನ್ಯಾಯದ ವಿರುದ್ಧ ಹೋರಾಡುತ್ತಲೇ ಬಂದವರೆಂಬ ಆತ್ಮವಿಶ್ವಾಸದಲ್ಲಿ ಫಯಾಜ್ ಗೆ ಶಿಕ್ಷೆ ಕೊಡಿಸುವ ಹೊಣೆಯನ್ನು ಕೇಂದ್ರ ಸಚಿವರ ಹೆಗಲಿಗೇರಿಸಿದರು.


ಹೋರಾಟದ ಸಾಂತ್ವನ: ನೇಹಾ ಕುಟುಂಬವಿತ್ತ ಕಣ್ಣೀರು ಒರೆಸಲು ಮುಂದಾದ ಸಚಿವ ಜೋಶಿ ನಿರಂಜನ್ ಅವರ ಭುಜದ ಮೇಲೆ ಕೈಯಿರಿಸಿ ಸಾಂತ್ವನ ಹೇಳಿದ್ದಲ್ಲದೆ, ನ್ಯಾಯಕ್ಕೆ ಹೋರಾಟ ನಡೆಸೋಣ ಎಂದು ಅಭಯ ನೀಡಿದ್ದು, ಒಟ್ಟಾರೆ ನೇಹಾ ಹತ್ಯೆ ಪ್ರಕರಣ-ಹೋರಾಟ-ಶಿಕ್ಷೆ ಯಾವ ಹಂತ ತಲುಪುತ್ತದೋ ಕಾದು ನೋಡಬೇಕು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.