ಬೆಂಗಳೂರು : ಹೊಸ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್ಸಿಎಲ್ ಟಿಕೆಟ್ ದರ ನಿಗದಿ ಮಾಡಿದೆ. 


COMMERCIAL BREAK
SCROLL TO CONTINUE READING

ಹೊಸ ವರ್ಷಾಚರಣೆ ವೇಳೆ ಮೆಟ್ರೋ ರೈಲು ನಿಲ್ದಾಣಗಳಿಗೆ ಹೆಚ್ಚಿನ ಜನರು ಆಗಮಿಸುವ ನಿರೀಕ್ಷೆ ಇದ್ದು, ಇದೇ ಕಾರಣಕ್ಕೆ ಮೆಟ್ರೋ ರೈಲು ಪ್ರಾಧಿಕಾರ ಪ್ರಮುಖ ಮೂರು ರೈಲು ನಿಲ್ದಾಣಗಳಲ್ಲಿನ ಟಿಕೆಟ್ ದರವನ್ನು ಒಟ್ಟಾರೆ 50 ರೂ.ಗೆ ನಿಗದಿ ಪಡಿಸಿದೆ.


ಬಿಎಂಆರ್ ಸಿಎಲ್ ನೀಡಿರುವ ಮಾಹಿತಿಯಂತೆ ಹೊಸ ವರ್ಷಾಚರಣೆ ವೇಳೆ ಟ್ರಿನಿಟಿ ನಿಲ್ದಾಣ, ಎಂ.ಜಿ. ರಸ್ತೆ ಮತ್ತು ಕಬ್ಬನ್ ಪಾರ್ಕ್ ನಿಲ್ದಾಣಗಳಲ್ಲಿ ಅತಿ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ಆ ಸಂದರ್ಭದಲ್ಲಿ ಈ ಮೂರು ನಿಲ್ದಾಣಗಳಲ್ಲಿ ಚಿಲ್ಲರೆ ಹೊಂದಾಣಿಕೆ ಮಾಡುವುದು ಕಷ್ಟಕರವಾದ್ದರಿಂದ ಈ ಮೂರು ನಿಲ್ದಾಣಗಳಲ್ಲಿ ಟಿಕೆಟ್ ದರವನ್ನು 50 ರೂ.ಗಳಿಗೆ ನಿಗದಿ ಪಡಿಸಲಾಗಿದೆ. 


ಈ ದರವು ಡಿಸೆಂಬರ್ 31ರ ರಾತ್ರಿ 11ರ ಬಳಿಕ ಮತ್ತು ಜನವರಿ 1ರ ಬೆಳಗ್ಗೆ 2 ಗಂಟೆಯವರೆಗೂ ಈ ಮೂರು ನಿಲ್ದಾಣಗಳಿಂದ ಪ್ರಯಾಣಿಸುವ ಪ್ರಯಾಣಿಕರು ಯಾವುದೇ ನಿಲ್ದಾಣಕ್ಕೆ ಪ್ರಯಾಣಿಸಿದರೂ 50 ರು.ಗಳ ಟಿಕೆಟ್ ಪಡೆಯಬೇಕು.


ಇನ್ನುಳಿದಂತೆ ಹೊಸ ವರ್ಷಾಚರಣೆ ವೇಳೆ ಮೆಟ್ರೋ ಸ್ಮಾರ್ಟ್ ಕಾರ್ಡ್ ನ ರಿಯಾಯಿತಿ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಬಿಎಂಆರ್ ಸಿಎಲ್ ಸ್ಪಷ್ಟಪಡಿಸಿದೆ.