ಕೆರೆಗೆ ನೀರು ಬಿಡುತ್ತಿರುವ ಅಪಾರ್ಟ್ಮೆಂಟ್ ಗಳ ವಿರುದ್ದ ಎನ್ ಜಿ ಟಿ ಗರಂ
ಬೆಳ್ಳಂದೂರು ಕೆರೆಗೆ ಕಲುಷಿತ ನೀರು ಬಿಡುತ್ತಿರುವ ಅಪಾರ್ಟ್ಮೆಂಟ್ ಗಳ ವಿರುದ್ದ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಅಸಮಾಧಾನ.
ನವದೆಹಲಿ: ಬೆಂಗಳೂರಿನ ಬೆಳ್ಳಂದೂರು ಕೆರೆಗೆ ಕಲುಷಿತ ನೀರು ಬಿಡುತ್ತಿರುವ ಅಲ್ಲಿನ ಅಪಾರ್ಟ್ಮೆಂಟ್ ಗಳ ವಿರುದ್ದ ಬುಧವಾರ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಅಸಮಾಧಾನ ವ್ಯಕ್ತಪಡಿಸಿದೆ.
ವಸತಿ ಸಮುಚ್ಛಯಗಳು ಕೆರೆಗೆ ಕಲುಷಿತ ನೀರನ್ನು ಬಿಡುತ್ತಿಲ್ಲ. ಅಪಾರ್ಟ್ಮೆಂಟ್ ಗಳಿಂದಾಗಿ ಕೆರೆ ನೀರು ಕಲುಷಿತವಾಗುತ್ತಿಲ್ಲ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ ಅಪಾರ್ಟ್ಮೆಂಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಯಿತು.
ಅರ್ಪಾರ್ಟ್ಮೆಂಟ್‌ಗಳಿಂದ ಕೆರೆ ಮಾಲಿನ್ಯವಾಗುತ್ತಿಲ್ಲ. ಸುತ್ತಲಿನ 150 ಅರ್ಪಾಟ್ಮೆಂಟ್ ಗಳು ಕೂಡ ಒಳ ಚರಂಡಿ ವ್ಯವಸ್ಥೆಯನ್ನು ಹೊಂದಿವೆ. ಇವುಗಳನ್ನು ಬಿಡಬ್ಯ್ಲೂ ಎಸ್ ಎಸ್ ಬಿ ಸರಿಯಾಗಿ ನಿಭಾಯಿಸುತ್ತಿಲ್ಲ. ಆದುದರಿಂದ ಅರ್ಪಾಟ್ಮೆಂಟ್ ಗಳಲ್ಲಿ ಘನತಾಜ್ಯ ಪರಿಷ್ಕರಣ ಘಟಕ ಅವಳವಡಿಸುವ ಅವಶ್ಯಕತೆಯೂ ಇಲ್ಲ ಎಂದ ಶ್ರೀಕಾಂತ್ ಹೇಳಲೆತ್ನಿಸಿದರು. ಈ ಸಂದರ್ಭದಲ್ಲಿ ಆಕ್ರೋಶಗೊಂಡ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮುಖ್ಯ ನ್ಯಾಯಮೂರ್ತಿ ಸ್ವತಂತ್ರ ಕುಮಾರ್, 'ಮೂಲ ಯಾವುದಾದರೂ ಕಲುಷಿತ ನೀರು ಕೆರೆ ಸೇರುತ್ತಿರುವುದು ನಿಜ. ಒಳಚಂರಡಿ ವ್ಯವಸ್ಥೆ ಬೆಂಗಳೂರಿನಲ್ಲಿ ವಿಫಲವಾಗಿದೆ. ಸಂಸ್ಕರಣ ಘಟಕ ಅಳವಡಿಸದ ಅಪಾರ್ಟ್ಮೆಂಟ್ ಬೀಗ ಜಡಿಯಿರಿ' ಎಂದು ಸೂಚಿಸಿದರು. ಜೊತೆಗೆ ಎಷ್ಟೇ ವರ್ಷ ಹಳೆಯದಾದ್ರೂ ಪರವಾಗಿಲ್ಲ ಸಂಸ್ಕರಣ ಘಟಕ ಅಳವಡಿಸಲೇಬೇಕು. ಸಂಸ್ಕರಣ ಘಟಕ ಅಳವಡಿಕೆಗೆ ಸರಕಾರ ಕೈಜೋಡಿಸಬೇಕು. ತಕರಾರು ಇದ್ದಲ್ಲಿ ಸರಕಾರ ನ್ಯಾಯಾಧಿಕರಣಕ್ಕೆ ವರದಿ ಸಲ್ಲಿಸಬೇಕು. ಮಾಲಿನ್ಯ ನಿಯಂತ್ರಣಕ್ಕೆ ತೆಗೆದುಕೊಂಡ ಕ್ರಮದ ವರದಿ ಸಲ್ಲಿಸಬೇಕು ಎಂದು ರಾಜ್ಯ ಸರಕಾರಕ್ಕೆ ಆದೇಶಿಸಿತು.