ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ವಿರುದ್ದ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. 2024ರ ಲೋಕಸಭಾ ಚುನಾವಣೆಗೆ ಮಂಡ್ಯ ಸಂಸದರು ಬೆಂಗಳೂರಿನಲ್ಲಿ ಸ್ಪರ್ಧಿಸಲಿದ್ದಾರೆ ಅಂತಾ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ರಾಜಕಾರಣವೆಂಬ ಸುಮಲತಾ ಹೇಳಿಕೆ ವಿಚಾರಕ್ಕೆ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ.  ಹೊಂದಾಣಿಕೆ ರಾಜಕಾರಣ ಅನ್ನೋದು ಮಂಡ್ಯ ಜಿಲ್ಲೆಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಾರಂಭವಾಗಿದೆ. ರೈತ ಸಂಘ, ಕಾಂಗ್ರೆಸ್ ಮತ್ತು ಬಿಜೆಪಿಯವರು ಕೇವಲ ಲೋಕಸಭಾ ಚುನಾವಣೆ ಅಷ್ಟೇ ಅಲ್ಲ. ವಿಧಾನ ಪರಿಷತ್ ಚುನಾವಣೆಯಲ್ಲಿ ಯಾರು ಹೊಂದಾಣಿಕೆ ರಾಜಕಾರಣ ಮಾಡಿದ್ರು ಅಂತಾ ಇಡೀ ರಾಜ್ಯವೇ ನೋಡಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ: 26ನೇ ರಾಷ್ಟ್ರೀಯ ಯುವ ಜನೋತ್ಸವ: ಗಮನ ಸೆಳೆದ ಸಿರಿಧಾನ್ಯ ಮೇಳ


ಹೊಂದಾಣಿಕೆ ಬಗ್ಗೆ ಸಂಸದರಿಗೆ ಮಾತನಾಡುವ ನೈತಿಕತೆ ಹಕ್ಕಿಲ್ಲ. 2024ಕ್ಕೆ ಮಂಡ್ಯ ಜಿಲ್ಲೆಯಲ್ಲಿ ಅಲ್ಲ, ಬೆಂಗಳೂರಿನಲ್ಲಿ ಸ್ಪರ್ಧೆ ಮಾಡಬೇಕು ಅಂತಾ ಚರ್ಚೆ ಮಾಡ್ತಿದ್ದಾರೆ. ಸಂಸದರು ಮೊದಲು ಅದರ ಬಗ್ಗೆ ಮಾತನಾಡಲಿ ಎಂದು ಸಂಸದೆ ಸುಮಲತಾ ವಿರುದ್ದ ನಿಖಿಲ್ ಕುಮಾರಸ್ವಾಮಿ ಕಿಡಿಕಾರಿದ್ದಾರೆ.


ಕಾಂಗ್ರೆಸ್‍ಗೆ ಹಲವು ನಾಯಕರ ಸೇರ್ಪಡೆ!


2023ರ ಸಾರ್ವತ್ರಿಕ ಚುನಾವಣೆ ಹಿನ್ನೆಲೆ ಕೆಲ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಇಂದು ಕಾಂಗ್ರೆಸ್‍ ಪಕ್ಷದ ಕಚೇರಿಯಲ್ಲಿ ಹಲವು ನಾಯಕರು ಸೇರ್ಪಡೆಯಾಗಲಿದ್ದಾರೆ. ವೈಎಸ್‍ವಿ ದತ್ತ, ನಾಗೇಶ್ ಇಂದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಲಿರುವ ದತ್ತ ಅವರು ಕಡೂರು ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ನಾಗೇಶ್ ಕೂಡ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಟಿಕೆಟ್ ಕೇಳಿದ್ದು, ‘ಕೈ’ ನಾಯಕರು ಮಹದೇವಪುರ ವಿಧಾನಸಭಾ ಕ್ಷೇತ್ರದದಲ್ಲಿ ಟಿಕೆಟ್ ಭರವಸೆ ನೀಡಿದ್ದಾರಂತೆ.


ಇದನ್ನೂ ಓದಿ: Makar Sankranti 2023: ಕಲ್ಯಾಣ ಕರ್ನಾಟಕದ ಅತಿದೊಡ್ಡ ಮೈಲಾರ ಲಿಂಗ ಜಾತ್ರೆಗೆ ಸರ್ವ ಸಿದ್ಧತೆ


ಕಾಂಗ್ರೆಸ್‍ಗೆ ಇತರ ಪಕ್ಷಗಳ ಪ್ರಮುಖರಿಗೆ ಗಾಳ ಹಾಕಲಾಗುತ್ತಿದೆ.  ಅಗತ್ಯವಿದ್ದಲ್ಲಿ ಟಿಕೆಟ್ ನೀಡುವ ನಿರ್ಧಾರ ಮಾಡಲಾಗಿದ್ದು, ಬಿಜೆಪಿಗೆ ಟಕ್ಕರ್ ನೀಡಲು ಮಾಸ್ಟರ್ ಪ್ಲಾನ್ ಮಾಡಲಾಗಿದೆ. ಪಕ್ಷದ ಇಮೇಜ್ ಹೆಚ್ಚಿಸಲು ಇತರ ಪಕ್ಷದ ನಾಯಕರಿಗೆ ಗಾಳ ಹಾಕಲಾಗುತ್ತಿದೆ. ಕಳೆದ ವಾರ ಮಂಡ್ಯ, ಕನಕಪುರ ಭಾಗದ ನಾಯಕರು ‘ಕೈ’ ಪಕ್ಷಕ್ಕೆ ಸೇರ್ಪಡೆಯಾಗಿದ್ದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.