ಪುನೀತ್ ಗೆ ಸಿಗದ ಪದ್ಮಶ್ರೀ ಪ್ರಶಸ್ತಿ ; ಡಿಕೆಶಿ ಅಸಮಾಧಾನ
ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಪದ್ಮ ಪ್ರಶಸ್ತಿ ಪಟ್ಟಿಯನ್ನು ಘೋಷಿಸಲಾಗಿದೆ, ಆದರೆ ನಟ ಪುನೀತ್ ರಾಜಕುಮಾರ್ ಅವರಿಗೆ ಪದ್ಮಶ್ರೀ ಪುರಸ್ಕಾರ ಸಿಗದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಗಣರಾಜ್ಯೋತ್ಸವದ ಹಿನ್ನಲೆಯಲ್ಲಿ ಪದ್ಮ ಪ್ರಶಸ್ತಿ ಪಟ್ಟಿಯನ್ನು ಘೋಷಿಸಲಾಗಿದೆ, ಆದರೆ ನಟ ಪುನೀತ್ ರಾಜಕುಮಾರ್ ಅವರಿಗೆ ಪದ್ಮಶ್ರೀ ಪುರಸ್ಕಾರ ಸಿಗದಿರುವುದಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್ ಎಂದಾದರೂ ಗೌರವ ನೀಡಿದೆಯೇ?: ಬಿಜೆಪಿ
'ಪುನೀತ್ ರಾಜಕುಮಾರ್ ಅವರ ಹೆಸರನ್ನು ಪದ್ಮ ಪ್ರಶಸ್ತಿಗೆ ಶಿಫಾರಸು ಮಾಡುತ್ತೇವೆ ಎಂದು ಮುಖ್ಯಮಂತ್ರಿಗಳು ಹೇಳಿದ್ದರು, ಆದರೆ ಪ್ರಶಸ್ತಿ ಪಟ್ಟಿಯಲ್ಲಿ ಅವರ ಹೆಸರಿಲ್ಲ ಎಂಬ ಪ್ರಶ್ನೆಗೆ, 'ಪ್ರಧಾನಮಂತ್ರಿಗಳಿಗೆ ಯಾರು ಏನು ಶಿಫಾರಸ್ಸು ಮಾಡಿದ್ದರೋ ಗೊತ್ತಿಲ್ಲ. ಪಾದಯಾತ್ರೆ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಯಾವ ಕಲಾವಿದರ ಜತೆ ಏನು ಮಾತನಾಡಿದ್ದರು ಎಂಬುದನ್ನು ಈ ಸಂದರ್ಭದಲ್ಲಿ ಹೇಳುವುದಿಲ್ಲ. ಆದರೆ ಅವರು ಪುನೀತ್ ವಿಚಾರದಲ್ಲಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ' ಎಂದರು.
ಇದನ್ನೂ ಓದಿ: UP Election: ಹಾರ್ದಿಕ್, ಕನ್ಹಯ್ಯಗೆ ನೀಡಿದ ಗೌರವದಷ್ಟೂ ಖರ್ಗೆಗೆ ನೀಡಿಲ್ಲವೆಂದ ಬಿಜೆಪಿ
ಪರಪ್ಪನ ಅಗ್ರಹಾರ ಜೈಲಲ್ಲಿ ವಿಶೇಷ ಸೌಲಭ್ಯ ವಿಚಾರವಾಗಿ ಕೇಳಿದ ಪ್ರಶ್ನೆಗೆ, 'ಗೃಹ ಸಚಿವರು ಇದ್ದಾರೆ, ಅವರು ಏನು ಹೇಳುತ್ತಾರೋ ಕಾದು ನೋಡೋಣ' ಎಂದರು.
ಇದನ್ನೂ ಓದಿ: UP Election: ಹಾರ್ದಿಕ್, ಕನ್ಹಯ್ಯಗೆ ನೀಡಿದ ಗೌರವದಷ್ಟೂ ಖರ್ಗೆಗೆ ನೀಡಿಲ್ಲವೆಂದ ಬಿಜೆಪಿ
ಇದಕ್ಕೂ ಮುನ್ನ ಮಾಧ್ಯಮಗಳ ಜತೆ ಪ್ರತ್ಯೇಕವಾಗಿ ಮಾತನಾಡಿದ ಶಿವಕುಮಾರ್ ಅವರು, 16 ಬಿಜೆಪಿ ನಾಯಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂಬ ಯತ್ನಾಳ್ ಅವರ ಹೇಳಿಕೆ ಕುರಿತ ಪ್ರಶ್ನೆಗೆ, 'ನಿಮ್ಹಾನ್ಸ್ ನಲ್ಲಿ ಅಡ್ಮಿಟ್ ಮಾಡಬೇಕಾದವವರ ಹೇಳಿಕೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರ ಪಕ್ಷದವರಿಗೆ ಪಟ್ಟಿ ನೀಡಿ, ಅವರಿಗೆ ಏನು ಬೇಕೋ ಮಾಡಿಕೊಳ್ಳಲಿ' ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.