ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್ ಎಂದಾದರೂ ಗೌರವ ನೀಡಿದೆಯೇ?: ಬಿಜೆಪಿ

ದಲಿತ ಮುಖ್ಯಮಂತ್ರಿ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಸಂವಿಧಾನಕ್ಕೆ ದ್ರೋಹ ಎಸಗುತ್ತಲೇ ಬಂದಿದೆ ಅಂತಾ ಬಿಜೆಪಿ ಕಿಡಿಕಾರಿದೆ.

Written by - Zee Kannada News Desk | Last Updated : Jan 26, 2022, 02:14 PM IST
  • ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್ ಗೌರವ ನೀಡಿದ್ದರೆ ಕರ್ನಾಟಕ ಎಂದೋ ದಲಿತ ಸಿಎಂ ಕಾಣುತ್ತಿತ್ತು
  • ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮಾಡಿದ ಐತಿಹಾಸಿಕ ಅನ್ಯಾಯ ನೆನಪಿಸಬೇಕೇ? ಎಂದು ಪ್ರಶ್ನಿಸಿದ ಬಿಜೆಪಿ
  • ಒಡೆದ ಮನೆ ಕಾಂಗ್ರೆಸ್ ನಲ್ಲಿ ಯಜಮಾನಿಕೆಗೆ ಈಗ ಮತ್ತೊಬ್ಬ ಸದಸ್ಯ ಸೇರ್ಪಡೆಯಾಗಿದ್ದಾರೆ
ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್ ಎಂದಾದರೂ ಗೌರವ ನೀಡಿದೆಯೇ?: ಬಿಜೆಪಿ title=
ದಲಿತ ವಿರೋಧಿ ಕಾಂಗ್ರೆಸ್ ಎಂದ ಬಿಜೆಪಿ

ಬೆಂಗಳೂರು: ಸಂವಿಧಾನದ ಆಶಯಗಳಿಗೆ(Constitutional Aspirations) ಕಾಂಗ್ರೆಸ್ ಪಕ್ಷ ಎಂದಾದರೂ ಗೌರವ ನೀಡಿದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ. #ದಲಿತವಿರೋಧಿಕಾಂಗ್ರೆಸ್‌ ಹ್ಯಾಶ್ ಟ್ಯಾಗ್ ಬಳಿಸಿ ಬುಧವಾರ ಟ್ವೀಟ್ ಮಾಡಿರುವ ಬಿಜೆಪಿ, ‘ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್ ಗೌರವ ನೀಡಿದ್ದರೆ ಕರ್ನಾಟಕ ಎಂದೋ ದಲಿತ ಮುಖ್ಯಮಂತ್ರಿಯನ್ನು ಕಾಣುತ್ತಿತ್ತು. ಆದರೆ ಕಾಂಗ್ರೆಸ್ ಈ ವಿಚಾರದಲ್ಲಿ ಸಂವಿಧಾನಕ್ಕೆ ದ್ರೋಹ ಎಸಗುತ್ತಲೇ ಬಂದಿದೆ’ ಅಂತಾ ಕಿಡಿಕಾರಿದೆ.

‘ದಲಿತರು ಹಾಗೂ ಹಿಂದುಳಿದ ವರ್ಗದವರಿಗೆ ಕಾಂಗ್ರೆಸ್ ಪಕ್ಷ ಮಾಡಿದ ನಿರಂತರ ದ್ರೋಹಗಳ‌ ಬಗ್ಗೆ ಪಟ್ಟಿ ಮಾಡಿದರೆ ಅವುಗಳ ಸಂಖ್ಯೆ ಅಗಣಿತ. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್(Dr BR Ambedkar) ಅವರಿಗೆ ಮಾಡಿದ ಐತಿಹಾಸಿಕ ಅನ್ಯಾಯ ನೆನಪಿಸಬೇಕೇ?’ ಅಂತಾ ಕಾಂಗ್ರೆಸ್ ಗೆ ಬಿಜೆಪಿ(Karnataka BJP) ಪ್ರಶ್ನಿಸಿದೆ.

ಇದನ್ನೂ ಓದಿ: ನಾಯಕತ್ವ ಬದಲಾವಣೆ ಇಲ್ಲ, ಪೂರ್ಣಾವಧಿಗೆ ಬೊಮ್ಮಾಯಿ ಸಿಎಂ: ನಳೀನ್ ಕುಮಾರ್ ಕಟೀಲ್

‘ಒಡೆದ ಮನೆ ಕಾಂಗ್ರೆಸ್ ನಲ್ಲಿ ಯಜಮಾನಿಕೆಗೆ ಈಗ ಮತ್ತೊಬ್ಬ ಸದಸ್ಯ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿರುವ ಎಂ.ಬಿ.ಪಾಟೀಲ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್(DK Shivakumar) ಅವರಿಗೆ ಈಗ ನೇರ ಸವಾಲು. ಒಂದು ಕಡೆ ಸಿದ್ದರಾಮಯ್ಯ, ಮತ್ತೊಂದು ಕಡೆ ಎಂ.ಬಿ.ಪಾಟೀಲ್, ಸವಾಲು ಗೆಲ್ಲುವಿರಾ ಡಿಕೆಶಿ?’ ಅಂತಾ ಕುಟುಕಿದೆ.

‘ಸಿದ್ದರಾಮಯ್ಯ(Siddaramaiah) ಧರ್ಮ ವಿಭಜಕ, ಎಂ.ಬಿ.ಪಾಟೀಲ್(MB Patil) ಜಾತಿ ವಿಭಜಕ, ಡಿ.ಕೆ.ಶಿವಕುಮಾರ್ ಧನ ವಿಭಜಕ, ಮಲ್ಲಿಕಾರ್ಜುನ ಖರ್ಗೆ ಮನ ವಿಭಜಕ. ಈ ಕಾಂಗ್ರೆಸ್ ನಾಯಕರ ದಂಡು ಎಷ್ಟು ಭಯಾನಕ!!!’ ಅಂತಾ ಬಿಜೆಪಿ ಟೀಕಿಸಿದೆ.

ಇದನ್ನೂ ಓದಿ: UP Election: ಹಾರ್ದಿಕ್, ಕನ್ಹಯ್ಯಗೆ ನೀಡಿದ ಗೌರವದಷ್ಟೂ ಖರ್ಗೆಗೆ ನೀಡಿಲ್ಲವೆಂದ ಬಿಜೆಪಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News