ಬೆಂಗಳೂರು: ಪೆಟ್ರೋಲ್, ಡೀಸೆಲ್, ತರಕಾರಿ ದಿನನಿತ್ಯ ಬಳಸುವ ವಸ್ತುಗಳು ಸಹ ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನತೆಗೆ ನೈಸ್ ರಸ್ತೆ ಟೋಲ್ ಶುಲ್ಕ ಹೆಚ್ಚಳದ ಶಾಕ್ ಎದುರಾಗಿತ್ತು. ಬೆಲೆ ಏರಿಕೆಯಿಂದ ತತ್ತರಿಸಿದ್ದ ಜನರಿಗೆ ನೈಸ್ ರಸ್ತೆಯ ಟೋಲ್ ದರ ಏರಿಕೆ ಆಗ್ತಿರೋ ಕಾರಣ ವಾಹನ ಸವಾರರು ಕಿಡಿ ಕಾರಿದ್ದರು.ಆದರೆ ಇದೀಗ ನೈಸ್ ಸಂಸ್ಥೆ ಟೋಲ್ ದರ ಏರಿಕೆ ಸದ್ಯಕ್ಕೆ ಮಾಡುವುದಿಲ್ಲ ಕೆಲ ದಿನಗಳ ಕಾಲ ಮುಂದೂಡಿದೆ ಎಂದು ಹೇಳಿಕೊಂಡಿದೆ.‌


COMMERCIAL BREAK
SCROLL TO CONTINUE READING

ಬೆಂಗಳೂರಿನ ನೈಸ್ ರಸ್ತೆ ಟೋಲ್ ದರವನ್ನು ಕೂಡ ಹೆಚ್ಚಳ ಮಾಡಲಾಗುತ್ತದೆ ಪರಿಷ್ಕೃತ ದರ ನಾಳೆಯಿಂದ ಜಾರಿಗೆ ಬರಲಿದೆ ಎಂದು ಈ ಹಿಂದೆ ಹೇಳಲಾಗಿತ್ತು. ಆದ್ರೆ ಇದೀಗ ನೈಸ್ ಸಂಸ್ಥೆ ತೆಗೆದುಕೊಂಡಿರುವ ನಿರ್ಧಾರದಿಂದ ವಾಹನಸವಾರರು ಕೊಂಚ ರಿಲೀಫ್ ಆಗಿದ್ದಾರೆ.


ಇದನ್ನೂ ಓದಿ-24-06-2022 Today Vegetable Price: ಇಂದು ತರಕಾರಿ-ಹಣ್ಣಿನ ಬೆಲೆ ಹೀಗಿದೆ


ಯಾವ ಮಾರ್ಗದಲ್ಲಿ ಎಷ್ಟೆಷ್ಟು ದರ ಹೆಚ್ಚಳದ ಪ್ರಸ್ತಾವನೆ ಇತ್ತು..?


ಹೊಸೂರು-ಬನ್ನೇರುಘಟ್ಟ ರಸ್ತೆ ಸಂಚರಿಸುವ ಬೈಕ್ ಗಳಿಗೆ 20 ರೂ. ಟೋಲ್ ದರ, ಕಾರುಗಳಿಗೆ 45 ರೂ ಟೋಲ್ ದರ ಹೆಚ್ಚಳ ಮಾಡಲಾಗುವುದು ಎಂದು ಹೇಳಲಾಗಿತ್ತು.


ಇದನ್ನೂ ಓದಿ-Ration Card: ರೇಶನ್ ಕಾರ್ಡ್ ಧಾರಕರಿಗೆ ಬಿಗ್ ಶಾಕ್! ಸರ್ಕಾರದಿಂದ ಬೆಚ್ಚಿಬೀಳಿಸುವ ನಿರ್ಧಾರ


ಬನ್ನೇರುಘಟ್ಟ ರಸ್ತೆಯಿಂದ ಕನಕಪುರ ರಸ್ತೆಯಲ್ಲಿ ಸಂಚರಿಸುವ ಕಾರ್ ಗಳಿಗೆ 35, ಬೈಕ್ ಗಳಿಗೆ 12 ರೂ. ಕನಕಪುರ ರಸ್ತೆಯಿಂದ ಕ್ಲವರ್ ಲೀಫ್ ರಸ್ತೆಯಲ್ಲಿ ಸಂಚರಿಸುವ ಕಾರ್ ಗಳಿಗೆ 25, ಬೈಕ್ ಗಳಿಗೆ 8 ರೂ ಗೆ ಏರಿಸುವುದಾಗಿ ನೈಸ್ ಸಂಸ್ಥೆ ತಿಳಿಸಿತ್ತು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ