ಹಾಸನ : ಬೇಲೂರು ಚನ್ನಕೇಶವ ದೇಗುಲದ ಮುಂಭಾಗದಲ್ಲಿದ್ದ ಮುಸ್ಲಿಂ ವ್ಯಾಪಾರಿಗೆ  ನೋಟಿಸ್ ನೀಡಲಾಗಿದೆ (Muslim vendor). ಅಂಗಡಿ ತೆರವು ಮಾಡುವಂತೆ ದೇಗುಲದ ಕಾರ್ಯ ನಿರ್ವಾಹಕ ಅಧಿಕಾರಿ,  ಮುಸ್ಲಿಂ ವ್ಯಾಪಾರಿಗೆ   ನೋಟಿಸ್ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಬೇಲೂರು ಶ್ರೀಚನ್ನಕೇಶವ ದೇವಾಲಯದ ಆವರಣದಲ್ಲಿ (Beluru Chennakeshava Temple)ಅನ್ಯಧರ್ಮದವರಿಗೆ   ವ್ಯಾಪಾರಕ್ಕೆ ಅವಕಾಶ ನೀಡದಂತೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು (VHP)ಬೇಲೂರು ಚನ್ನಕೇಶವ ದೇಗುಲಕ್ಕೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ದೇವಾಲಯದ ಮುಂಭಾಗದಲ್ಲಿರುವ ಅಂಗಡಿ ತೆರವು ಮಾಡುವಂತೆ ಮುಸ್ಲಿಂ ವ್ಯಾಪಾರಿಗೆ  ನೋಟಿಸ್ ನೀಡಲಾಗಿದೆ. 


ಇದನ್ನೂ ಓದಿ :  Ugadi: ಹೂವು-ಹಣ್ಣಗಳ ದರದಲ್ಲಿ ಕೊಂಚ ಏರಿಕೆ- ಆದ್ರೂ ಯುಗಾದಿ ಸಂಭ್ರಮಕ್ಕಿಲ್ಲ ಅಡ್ಡಿ


ರೆಹಮಾನ್ ಷರೀಫ್‌ ಎಂಬವರಿಗೆ ತಮ್ಮ ಅಂಗಡಿ ತೆರವು ಮಾಡುವಂತೆ, ಶ್ರೀಚನ್ನಕೇಶವ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ವಿದ್ಯುಲ್ಲತಾ ನೋಟಿಸ್ (Notice)ನೀಡಿದ್ದಾರೆ.  ದೇವಾಲಯಕ್ಕೆ ಸೇರಿದ ವಾಣಿಜ್ಯ ಮಳಿಗೆಯನ್ನು 1-9-2018 ರಿಂದ 30-8-2023ರವರೆಗೆ ಐದು ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿದ್ದಾರೆ. ಆದರೆ ಧಾರ್ಮಿಕ ದತ್ತಿ ಕಾಯ್ದೆ 2002 ರ ನಿಯಮ 31 (12) ರಿ ಸಂಸ್ಥೆ ಅನ್ವಯದ ಜಮೀನು, ಕಟ್ಟಡಗಳು, ನಿವೇಶನ ಸೇರಿದಂತೆ ಯಾವುದೇ ಸ್ವತ್ತನ್ನು ಹಿಂದುಗಳಲ್ಲದವರಿಗೆ (Hindu)ಗುತ್ತಿಗೆ ನೀಡತಕ್ಕದ್ದಲ್ಲ.. ಈ ನಿಯಮವಿರುವುದರಿಂದ ಗುತ್ತಿಗೆ ಪಡೆದಿರುವ ಮಳಿಗೆಯನ್ನು  ನೋಟಿಸ್ ತಲುಪಿದ‌ ಮೂರು ದಿನದ‌ ಒಳಗೆ ಖಾಲಿ ಮಾಡುವಂತೆ ಸೂಚಿಸಲಾಗಿದೆ. ತಪ್ಪಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳುಲಾಗುವುದು ಎಂದು,  ಶ್ರೀಚನ್ನಕೇಶವ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನೋಟಿಸ್ ನೀಡಿದ್ದಾರೆ. 


ಸುಮಾರು 1970 ಇಸವಿಯಿಂದ ಇಲ್ಲಿಯವರೆಗೂ ಬಾಡಿಗೆದಾರರಾಗಿ ಅಂಗಡಿಯನ್ನು ಯಾವ ತಂಟೆ ತಕರಾರು ಇಲ್ಲದೆ ನಡೆಸಿಕೊಂಡು ಬಂದಿದ್ದೇವೆ. 2002 ರ ಕಾಯ್ದೆ ಪ್ರಕಾರ ಈಗ  ನೋಟಿಸ್ ನೀಡಲಾಗಿದೆ. ಇದರಿಂದ ಬಡವರಾದ ನಮಗೆ ತೊಂದರೆಯಾಗುತ್ತದೆ. ರಥೋತ್ಸವ ಇರುವುದರಿಂದ ನನಗೆ ಕೊಟ್ಟಿರುವ ಅವಧಿಯವರೆಗೂ ಸದರಿ ಅಂಗಡಿಯನ್ನು ನಡೆಸಲು ಅನುಕೂಲವಾಗುವಂತೆ ಅನುಮತಿ ಕೊಡಬೇಕೆಂದು ರೆಹಮಾನ್ ಮನವಿ ಮಾಡಿ ಅಧಿಕಾರಿ  ನೋಟಿಸ್ ಗೆ ಉತ್ತರ ನೀಡಿದ್ದಾರೆ. 


ಇದನ್ನೂ ಓದಿ :   Ugadi: ಯುಗಾದಿ ಹಬ್ಬದ ಪ್ರಯುಕ್ತ ಪ್ರಸಿದ್ಧ ಘಾಟಿ ದೇವಾಲಯಲಕ್ಕೆ ಹೂವಿನ ಅಲಂಕಾರ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.