ಬೆಂಗಳೂರು: ಕೇಂದ್ರ ಸರ್ಕಾರದ ಮಟ್ಟದಲ್ಲಿ ಕರ್ನಾಟಕದ ವಿಚಾರ ಬಂದಾಗ ಅನಂತಕುಮಾರ್ ಅವರು ಆಪದ್ಬಾಂಧವರಾಗಿದ್ದರು. ಈಗ ರಾಜ್ಯಕ್ಕೆ ಮತ್ತು ಬಿಜೆಪಿಗೆ ಅವರ ಅಗತ್ಯವಿತ್ತು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ. 


COMMERCIAL BREAK
SCROLL TO CONTINUE READING

ಕೇಂದ್ರದ ಮಾಜಿ ಸಚಿವ ದಿ. ಅನಂತಕುಮಾರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ಅನಂತಕುಮಾರ 64 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅನಂತಕುಮಾರ್ ಅವರು ಅನಂತವಾದ ಬದುಕನ್ನು ಅಲ್ಪ ಸಮಯದಲ್ಲಿ ಇದ್ದು ಯಶಸ್ಸು ಸಾಧನೆಗಳನ್ನು ಮಾಡಿ ಅತಿ ಚಿಕ್ಕ ವಯಸಿನಲ್ಲಿ ಬಿಟ್ಟು ಹೋಗಿದ್ದಾರೆ. ಅನಂತಕುಮಾರ್ ನಾನು ಕ್ಲಾಸ್ ಮೇಟ್. ನಾನು ಏನಾದರು ತಪ್ಪು ಮಾಡಿದ್ದರೆ ಅವರು ಕರೆಕ್ಷನ್ ಮಾಡುತ್ತಿದ್ದರು. ಅವರು ನಮ್ಮ ಬೆಂಚ್ ಮೆಟ್ ಆಗಿದ್ದರು ಎಂದರು.


ಇದನ್ನೂ ಓದಿ: ಆದಿತ್ಯ ಎಲ್-1 ಯಶಸ್ವಿ ಉಡಾವಣೆ: ಬಾಹ್ಯಾಕಾಶದಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು!


ಅವರಿಗೆ ಬಹಳ ಉತ್ಸಾಹಿ ಹಾಗೂ ದೂರದೃಷ್ಟಿಯುಳ್ಳ ನಾಯಕತ್ವದ ಗುಣ‌ ಇತ್ತು. ನಾವು ಕಾಲೇಜಿನಲ್ಲಿ ಕ್ಯಾಂಟೀನ್ ನಲ್ಲಿ ಟಿ ಕುಡಿಯುವಾಗ ಎಮರ್ಜೆನ್ಸಿ ವಿರುದ್ದ ಪ್ರತಿಭಟನೆ ಮಾಡೊಣ ಅಂತ ಹೇಳಿದರು. ಅವರನ್ನು ವಿದ್ಯಾರ್ಥಿ ಸಂಘಟನೆಯ ಜನರಲ್ ಸೆಕ್ರೆಟರಿ ಮಾಡಿದ್ದೇವು. ಅವರು ಪ್ರತಿಭಟನೆಯಲ್ಲಿ ಆರೆಸ್ಟ್ ಆಗಿ ನಾಲ್ಕು ತಿಂಗಳು ಜೈಲಿಗೆ ಹೋಗಿದ್ದರು. ಆದರೆ, ಸದಾ ಕಾಲ ಉತ್ಸಾಹ ಕಡಿಮೆಯಾಗಲಿಲ್ಲ. ಹುಬ್ಬಳ್ಳಿಯಲ್ಲಿ ಎಂಟಿಎಸ್ ಕಾಲೋನಿ ಅವರ ತಾಯಿ ಗಿರಿಜಾ ಶಾಸ್ತ್ರಿ ಅವರಲ್ಲಿ ದೇಶ ಭಕ್ತಿ ಮತ್ತು ಹೋರಾಟದ ಛಲ ಇತ್ತು. ಅವರ ತಂದೆ ಶಿಸ್ತಿನ ವ್ಯಕ್ತಿ, ಅವರಿಬ್ಬರ ಗುಣಗಳು ಅನಂತಕುಮಾರ್ ಅವರಿಗೆ ಬಂದಿತ್ತು.ತೇಜಸ್ವಿನಿ ಅನಂತಕುಮಾರ್ ಅವರು ಅನಂತಕುಮಾರ್ ಅವರಿಗೆ ಬೆಂಬಲವಾಗಿ ನಿಂತಿದ್ದರು ಎಂದು ಹೇಳಿದರು.


ಇದನ್ನೂ ಓದಿ: ಐತಿಹಾಸಿಕ ಮಾದಗಮಾಸೂರು ಕೆರೆಗೆ ಬಾಗಿನ ಅರ್ಪಿಸಿದ ಶಾಸಕ!


ಅನಂತಕುಮಾರ್ ಅವರು ಅಪಾದ್ಬಾಂದವರು, ಕೇಂದ್ರದ ಯಾವುದೇ ವಿಚಾರ ಬಂದಾಗ ನಾವು ಅನಂತ ಕುಮಾರ್ ಮೇಲೆ ಹಾಕುತ್ತಿದ್ದೆವು. ಮೊನ್ನೆಯ ಕಾವೇರಿ ವಿಚಾರವಾಗಿ‌ ನಡೆದ ಸರ್ವ ಪಕ್ಷದ ಸಭೆಯಲ್ಲಿ ಅವರನ್ನು ಎಲ್ಲರೂ ನೆನೆಸಿಕೊಂಡರು ಎಂದು ಹೇಳಿದರು. ಕೃಷ್ಣಾ ನದಿ ವಿಚಾರದಲ್ಲಿ ರಾಜ್ಯಕ್ಕೆ ಒಂದು ಆತಂಕ ಎದುರಾಗಿತ್ತು. ಆಂದ್ರ ತೆಲಂಗಾಣಕ್ಕೆ ಪ್ರತ್ಯೇಕವಾಗಿ ನೀರು ಹಂಚಿಕೆಗೆ ಮಾಡುವಂತೆ  ಆಗ್ರಹಿಸಿದ್ದರು. ಆಗ ನಾನು ಅನಂತಕುಮಾರ್ ಅವರಿಗೆ ಇದರ ಬಗ್ಗೆ ಹೇಳಿದೆ. ಅವರು ತಕ್ಷಣ ಲಾ ಸೆಕ್ರೆಟರಿಗೆ ಕರೆದು ರಾಜ್ಯ ಸರ್ಕಾರದ ಪರ ಬರೆಯುವಂತೆ  ಹೇಳಿದರು. ಅವರು ನಿರಾಕರಿಸಿದರು, ಆದರೆ, ಅನಂತಕುಮಾರ್ ಅವರು ಲಾ ಸೆಕ್ರೆಟರಿಯನ್ನೇ ಬದಲಾಯಿಸುವುದಾಗಿ ಹೇಳಿದರು. ಆಗ ಆತ ಸಹಿ ಮಾಡಿದ.  ಇದು ಅತ್ಯಂತ ದೊಡ್ಡ ಕೆಲಸ. ಅವರು ಇಡೀ ರಾಜ್ಯಕ್ಕೆ ದೊಡ್ಡ ಕೊಡುಗೆ ಕೊಟ್ಟಿದ್ದಾರೆ. ಅವರು ನಾನು ಬೇರೆ ಬೇರೆ ಪಕ್ಷದಲ್ಲಿ ಇದ್ದೆವು, ನನಗೆ ಯಾವಾಗಲೂ ದೋಸ್ತ ಅಂತ ಕರೆಯುತ್ತಿದ್ದರು. ಅವರು ಬಿಜೆಪಿಗೆ ಬರುವಂತೆ ಒತ್ತಾಯ ಮಾಡಿದರು. ರಾಜನಾಥ ಸಿಂಗ್ ಅವರು ನೀವೇಕೆ ಬಿಜೆಪಿ ಬರುತ್ತಿಲ್ಲ ಎಂದರು.  ನೀನು ಬಂದರೆ ನಮಗೂ ಅನುಕೂಲ ನಿನಗೂ ಗೌರವ ಸಿಗುತ್ತದೆ ಅಂತ ಅನಂತಕುಮಾರ್ ಹೇಳಿದರು. ಅನಂತಕುಮಾರ್ ಒತ್ತಾಯಕ್ಕೆ ಬಿಜೆಪಿ ಬಂದೆ. ನನ್ನನ್ನು ಗೌರವದಿಂದ ನೋಡಿಕೊಂಡರು ಎಂದು ಹಳೆಯ‌ ನೆನಪುಗಳನ್ನು ಮೆಲುಕು ಹಾಕಿದರು.


ಅವರಿಗೆ ಅದಮ್ಯ ಚೇತನದ ಬಗ್ಗೆ ಬಹಳ ಪ್ರೀತಿ ಆಸಕ್ತಿ ಇತ್ತು. ತೇಜಸ್ವಿಯವರು ಅದನ್ನು ಅತ್ಯಂತ ಶ್ರದ್ದೆಯಿಂದ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಿ.ಟಿ.ರವಿ, ಅದಮ್ಯ ಚೆತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್, ಅನಂತಕುಮಾರ್ ಪ್ರತಿಷ್ಠಾನದ ಅಧ್ಯಕ್ಷ ಪ್ರೊ. ಪಿ.ವಿ.ಕೃಷ್ಣಭಟ್ ಹಾಜರಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.