ಉದ್ಯೋಗ ಖಾತ್ರಿ ಕೆಲಸವನ್ನು 150 ದಿನಗಳಿಗೆ ಹೆಚ್ಚಿಸಲು ಕೇಂದ್ರಕ್ಕೆ ಪ್ರಿಯಾಂಕ್ ಖರ್ಗೆ ಮನವಿ 

ಬರ ಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನರೇಗಾ ಕೆಲಸದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸಲು ಮತ್ತು ಕರ್ನಾಟಕದ  ಆರ್ಥಿಕ ವರ್ಷ 2023-24ಕ್ಕೆ ಕಾರ್ಮಿಕ ಬಜೆಟ್ ಅನ್ನು 1300 ಲಕ್ಷದಿಂದ 1800 ಲಕ್ಷ ಕೆಲಸದ ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

Written by - Manjunath N | Last Updated : Sep 22, 2023, 04:01 PM IST
  • ಈ ಬರ ಪೀಡಿತ ಪ್ರದೇಶಗಳಿಗೆ ಪ್ರಸಕ್ತ ವರ್ಷದಲ್ಲಿ ಒಟ್ಟು 1234 ಲಕ್ಷ ಕೆಲಸದ ದಿನಗಳು ಮಂಜೂರಾಗಿದ್ದು,
  • 100 ರಿಂದ 150 ದಿನಗಳಿಗೆ ಈ ಅವಧಿಯನ್ನು ಹೆಚ್ಚಿಸುವುದರಿಂದ ಒಟ್ಟು ಕೆಲಸದ ದಿನಗಳ ಮೇಲೆ ಪರಿಣಾಮ ಬೀರಲಿದೆ
  • ಅಲ್ಲದೆ ಸರ್ಕಾರವು ಪ್ರಸಕ್ತ ಆರ್ಥಿಕ ವರ್ಷದ 5.5 ತಿಂಗಳಿನಲ್ಲಿ ಪ್ರತಿ ತಿಂಗಳು1.52 ಕೋಟಿ ಕೆಲಸದ ದಿನಗಳ ಉದ್ಯೋಗ ಸೃಷ್ಟಿಸಿದೆ
ಉದ್ಯೋಗ ಖಾತ್ರಿ ಕೆಲಸವನ್ನು 150 ದಿನಗಳಿಗೆ ಹೆಚ್ಚಿಸಲು ಕೇಂದ್ರಕ್ಕೆ ಪ್ರಿಯಾಂಕ್ ಖರ್ಗೆ ಮನವಿ  title=

ಬೆಂಗಳೂರು: ಬರ ಪೀಡಿತ ಪ್ರದೇಶಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ನರೇಗಾ ಕೆಲಸದ ದಿನಗಳನ್ನು 100 ರಿಂದ 150 ದಿನಗಳಿಗೆ ಹೆಚ್ಚಿಸಲು ಮತ್ತು ಕರ್ನಾಟಕದ  ಆರ್ಥಿಕ ವರ್ಷ 2023-24ಕ್ಕೆ ಕಾರ್ಮಿಕ ಬಜೆಟ್ ಅನ್ನು 1300 ಲಕ್ಷದಿಂದ 1800 ಲಕ್ಷ ಕೆಲಸದ ದಿನಗಳಿಗೆ ಹೆಚ್ಚಿಸಲು ಕೇಂದ್ರ ಸರ್ಕಾರಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.

ಇತ್ತೀಚೆಗೆ ದೆಹಲಿ ಭೇಟಿಯ ಸಂದರ್ಭದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರನ್ನು ಭೇಟಿ ಮಾಡಲು ಸಮಯವನ್ನು ಕೇಳಿದ್ದೆ ಆದರೆ  ಭೇಟಿಗೆ ಅವಕಾಶ ಸಿಗಲಿಲ್ಲ.ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಆದಿತ್ಯ ಎಲ್-1 ಯಶಸ್ವಿ ಉಡಾವಣೆ: ಬಾಹ್ಯಾಕಾಶದಲ್ಲಿ ಇಸ್ರೋ ಮತ್ತೊಂದು ಮೈಲಿಗಲ್ಲು!

ರಾಜ್ಯದಲ್ಲಿ ತೀವ್ರ ಬರಪರಿಸ್ಥಿತಿಯ ಹಿನ್ನಲೆಯಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾದ ಗಿರಿರಾಜ್ ಸಿಂಗ್ ಅವರಿಗೆ ಸಲ್ಲಿಸಿರುವ ಬೇಡಿಕೆಗಳು ಇಂತಿವೆ.

ಕರ್ನಾಟಕ ರಾಜ್ಯವು ನರೇಗಾ ಯೋಜನೆ ಅಡಿಯಲ್ಲಿ ನಿಯಮಿತವಾಗಿ ಉದ್ಯೋಗ ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿದ್ದು ವಯಕ್ತಿಕ ಹಾಗೂ ಸಮುದಾಯದ ಸ್ವತ್ತುಗಳನ್ನು ನಿರ್ಮಿಸುತ್ತಿದೆ. ಪ್ರಸಕ್ತ ವರ್ಷದಲ್ಲಿ ಕರ್ನಾಟಕವು 13 ಕೋಟಿ ಕೆಲಸದ ದಿನಗಳನ್ನು ಕಾರ್ಮಿಕ ಬಜೆಟ್'ನಲ್ಲಿ ಹಂಚಿಕೆ ಮಾಡಿದ್ದು ಈಗಾಗಲೇ 8.48 ಕೋಟಿ ಕೆಲಸದ ದಿನಗಳ ಉದ್ಯೋಗ ಸೃಷ್ಟಿಸಿದೆ.May be an illustration of blueprint and text

ರಾಜ್ಯದಲ್ಲಿ ಈ ಬಾರಿ ಮಳೆ ಕೊರತೆಯಿಂದ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು 31 ಜಿಲ್ಲೆಗಳ 195 ತಾಲೂಕುಗಳನ್ನು ಬರ ಪೀಡಿತ ತಾಲೂಕುಗಳೆಂದು ರಾಜ್ಯ ಸರ್ಕಾರವು ಘೋಷಿಸಿದೆ.

ಪ್ರಸ್ತುತ  ಈ ಬರ ಪೀಡಿತ ತಾಲೂಕುಗಳಲ್ಲಿ 20.86 ಲಕ್ಷ ಕುಟುಂಬಗಳಿಗೆ 7.36 ಕೋಟಿ ಕೆಲಸದ ದಿನಗಳ ಉದ್ಯೋಗವನ್ನು ಒದಗಿಸಲಾಗಿದೆ. ತೀವ್ರ ಬರದ ಹಿನ್ನಲೆಯಲ್ಲಿ ಈ ಬರ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗಕ್ಕಾಗಿ ಬೇಡಿಕೆಯಿದ್ದು ರಾಜ್ಯ ಸರ್ಕಾರವು ಈಗಾಗಲೇ 100 ದಿನಗಳಿಂದ 150 ದಿನಗಳವರೆಗೆ ಕೆಲಸದ ದಿನಗಳ ಹೆಚ್ಚಳಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಇದನ್ನೂ ಓದಿ: ಐತಿಹಾಸಿಕ ಮಾದಗಮಾಸೂರು ಕೆರೆಗೆ ಬಾಗಿನ ಅರ್ಪಿಸಿದ ಶಾಸಕ!

ಈ ಬರ ಪೀಡಿತ ಪ್ರದೇಶಗಳಿಗೆ ಪ್ರಸಕ್ತ ವರ್ಷದಲ್ಲಿ ಒಟ್ಟು 1234 ಲಕ್ಷ  ಕೆಲಸದ ದಿನಗಳು ಮಂಜೂರಾಗಿದ್ದು, 100 ರಿಂದ 150 ದಿನಗಳಿಗೆ ಈ ಅವಧಿಯನ್ನು ಹೆಚ್ಚಿಸುವುದರಿಂದ ಒಟ್ಟು ಕೆಲಸದ ದಿನಗಳ ಮೇಲೆ ಪರಿಣಾಮ ಬೀರಲಿದೆ. ಅಲ್ಲದೆ ಸರ್ಕಾರವು ಪ್ರಸಕ್ತ ಆರ್ಥಿಕ ವರ್ಷದ 5.5 ತಿಂಗಳಿನಲ್ಲಿ ಪ್ರತಿ ತಿಂಗಳು1.52 ಕೋಟಿ ಕೆಲಸದ ದಿನಗಳ ಉದ್ಯೋಗ ಸೃಷ್ಟಿಸಿದೆ. ಪ್ರಸಕ್ತ ವರ್ಷಕ್ಕೆ 1300 ಲಕ್ಷ ಕೆಲಸದ ದಿನಗಳ ಅನುಮೋದನೆ ಮಾತ್ರ ಇದ್ದು, ಇದನ್ನು 1800 ಲಕ್ಷ ದಿನಗಳಿಗೆ ಹೆಚ್ಚಿಸುವುದರಿಂದ ರಾಜ್ಯದ ಕಾರ್ಮಿಕ ಬಜೆಟ್ ಬೇಗನೆ ಮುಗಿದು ಹೋಗಲಿದೆ ಎಂದು ಹೇಳಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News