ಬೆಂಗಳೂರು: ಸಾರಿಗೆ ನೌಕರರ ಮತ್ತು ಸರ್ಕಾರದ ನಡುವೆ ನಡೆಯುತ್ತಿರುವ ಜಗಳದಿಂದ ಮುಷ್ಕರವನ್ನು ಧಿಕ್ಕರಿಸಿದ ಚಾಲಕನ ಸಾವಿಗೆ ಕಾರಣವಾಗಿದೆ. ಇದರಿಂದ ದುಷ್ಕರ್ಮಿಗಳಿಂದ ಕಲ್ಲು ತೂರಾಟ ನಡೆದಿದೆ ಎಂದು ವರದಿಯಾಗಿದೆ.


COMMERCIAL BREAK
SCROLL TO CONTINUE READING

ಜಮಖಂಡಿ ಬಳಿ ಬಸ್ ಓಡಿಸುತ್ತಿದ್ದಾಗ ಸಾವನ್ನಪ್ಪಿದ ಎನ್‌ಡಬ್ಲ್ಯುಕೆಆರ್‌ಟಿಸಿ(NWKRTC)ಗೆ ಸೇರಿದ 59 ವರ್ಷದ ಚಾಲಕ ರಸೂಲ್ ಅವಟಿ ಸಾವಿಗೆ ಮುಷ್ಕರ ನಡೆಸಿದ ಕಾರ್ಮಿಕರನ್ನು ಉಪಮುಖ್ಯಮಂತ್ರಿ ಮತ್ತು ಸಾರಿಗೆ ಸಚಿವ ಲಕ್ಷ್ಮಣ್ ಸವದಿ ದೂಷಿಸಿದ್ದಾರೆ.


ಇದನ್ನೂ ಓದಿ: COVID-19: ರಾಜ್ಯ ಸರ್ಕಾರದಿಂದ ಹೊಸ ಕೋವಿಡ್-19 ಮಾರ್ಗಸೂಚಿ: ಧಾರ್ಮಿಕ ಕಾರ್ಯಕ್ರಮಗಳಿಗೆ ನಿಷೇಧ, ವಿವಾಹ ಸಮಾರಂಭಗಳಿಗೆ ಮಿತಿ!


ಈ ಕುರಿತು ಮಾತನಾಡಿದ ಸಚಿವ ಲಕ್ಷ್ಮಣ್ ಸವದಿ(Laxman Savadi), ಮುಷ್ಕರ ನಡೆಸುತ್ತಿರುವ ಕಾರ್ಮಿಕರು ಇದು ಶಾಂತಿಯುತ ಪ್ರತಿಭಟನೆ ಎಂದು ಹೇಳಿದರು ಆದರೆ ಈಗ ತಮ್ಮ ಸಹೋದ್ಯೋಗಿಯ ಜೀವವನ್ನು ಬಲಿ ತೆಗೆದುಕೊಂಡಿದ್ದಾರೆ. ಸರ್ಕಾರ ಇದನ್ನು ಕ್ಷಮಿಸುವುದಿಲ್ಲ. ಮುಷ್ಕರದಲ್ಲಿರುವವರು ಕಾರ್ಮಿಕರನ್ನು ಕರ್ತವ್ಯಕ್ಕೆ ಮರಳಲು ಅನುಮತಿಸುವುದಿಲ್ಲ ಮತ್ತು ಕ್ರಿಮಿನಲ್ ಕೃತ್ಯಗಳ ಮೂಲಕ ನಿಷ್ಠಾವಂತ ಕಾರ್ಮಿಕರನ್ನು ಹಿಮ್ಮೆಟ್ಟಿಸಬಹುದೆಂದು ಭಾವಿಸುತ್ತಾರೆ ಎಂದು ಹೇಳಿದರು.


ಇದನ್ನೂ ಓದಿ: Karnataka By-Polls: ಕಾಂಗ್ರೆಸ್, ಬಿಜೆಪಿ ಪಾಲಿಗೆ ಪ್ರತಿಷ್ಟೆಯಾಗಿರುವ ರಾಜ್ಯದ ಉಪಚುನಾವಣೆಗೆ ಇಂದು ಮತದಾನ


ಮುಷ್ಕರವನ್ನು ಮುನ್ನಡೆಸಿದವರು ಘಟನೆ ಅಥವಾ ಸಚಿವರ ಆರೋಪಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಲೀಗ್‌ನ ಮುಖ್ಯಸ್ಥ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್(Kodihalli Chandrashekar) ಮತ್ತು ಅಧ್ಯಕ್ಷ ಆರ್.ಚಂದ್ರಶೇಖರ್ ಅವರು ಪದೇ ಪದೇ ಪ್ರಶ್ನಿಸಿದರು  ಯಾವುದೇ ಪ್ರತಿಕ್ರ್ರಿಯೆ ನೀಡಿಲ್ಲ.


ಇದನ್ನೂ ಓದಿ: Basavaraj Bommai: 'ರೆಮ್‌ಡೆಸಿವಿರ್' ಕದ್ದು ಮಾರುವವರಿಗೆ ಖಡಕ್ ಎಚ್ಚರಿಕೆ ನೀಡಿದ ಗೃಹ ಸಚಿವ!


ಮುಷ್ಕರ(Bus Strike)ವು ಶಾಂತಿಯುತವಾಗಿ ನಡೆಯುತ್ತದೆ ಎಂದು ಹೇಳಿದ್ದ ಸಾರಿಗೆ ಸಂಘಟನೆಗೆ ಈ ಸಾವು ದೊಡ್ಡ ಹಿನ್ನಡೆಯಾಗಿದೆ ಎಂದು ಹೇಳಿದ್ದಾರೆ. ಇದರಿಂದ ಮುಷ್ಕರವನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.


ಇದನ್ನೂ ಓದಿ: Rainfall in Karnataka: ರಾಜ್ಯದ ಹಲವಡೆ ಗುಡುಗು ಸಹಿತ ಭಾರಿ ಮಳೆ: ಕೆಲವು ಜಿಲ್ಲೆಗಳಲ್ಲಿ 'ಯಲ್ಲೋ ಅಲರ್ಟ್'


ನಾಲ್ಕು ನಿಗಮಗಳಲ್ಲಿ ನಿನ್ನೆ (ಶುಕ್ರವಾರ) 254 ನೌಕರರನ್ನು ವಜಾ ಮಾಡಿದ್ದು, ಒಟ್ಟು ಕಾರ್ಮಿಕರ ಸಂಖ್ಯೆಯನ್ನು 1,054 ಕ್ಕೆ ಏರಿಕೆ ಆಗಿದೆ. ಇದಲ್ಲದೆ, 489 ಉದ್ಯೋಗಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.