ಬೆಂಗಳೂರು: ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಎಂದಿಗೂ ಬೇರೆಯವರ ತಟ್ಟೆಯ ಅನ್ನ ಕಿತ್ತು ತಿನ್ನುವುದಿಲ್ಲ ಎಂದು ಕೆಪಿಸಿಸಿ ವಕ್ತಾರರಾದ ಎಂ ಲಕ್ಷ್ಮಣ್ ಹಾಗೂ ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಜಂಟಿ ಪತ್ರಿಕಾಗೋಷ್ಠಿ ಮುಖ್ಯಾಂಶಗಳು:


ಬಿಜೆಪಿಯ ಮಾಜಿ ಕಾರ್ಪೊರೇಟರ್ ಎನ್.ಆರ್ ರಮೇಶ್ ಅವರು ಈ ಹಿಂದೆ ಯಡಿಯೂರು ವಾರ್ಡ್ ನಿಂದ ಆಯ್ಕೆಯಾಗಿದ್ದರು. ನಂತರ ಮೀಸಲಾತಿ ಬದಲಾವಣೆಯಾದ ನಂತರ ಅವರ ಪತ್ನಿ ಪಾಲಿಕೆ ಸದಸ್ಯರಾಗಿದ್ದರು. ಅವರ ಅವಧಿ ಮುಕ್ತಾಯವಾಗಿದ್ದರೂ ಅವರ ಕಾರುಭಾರು ಜೋರಾಗಿದೆ.ಇವರು ಒಂದೇ ವಾರ್ಡ್ ನಲ್ಲಿ 250 ಕೋಟಿಗೂ ಅಧಿಕ ಮೊತ್ತದ ಟೆಂಡರ್ ಅನ್ನು ಪ್ರಮುಖ 3 ಬೇನಾಮಿ ವ್ಯಕ್ತಿಗಳಿಗೆ ನೀಡಿದ್ದು, ಅದರ ದಾಖಲೆ ಇದೆ. ಸತೀಶ್, ಹೆಚ್.ಎಸ್ ನಂದಿನಿ ಹಾಗೂ ಮಂಜುನಾಥ್ ಎಸ್ ಎಂಬುವವರಿಗೆ ನೀಡಿದ್ದಾರೆ. ವಾರ್ಡ್ ನಲ್ಲಿ ನಡೆಯುತ್ತಿರುವ ಎಲ್ಲಾ ಕಾಮಗಾರಿ ಟೆಂಡರ್ ಈ ಮೂವರು ಬೇನಾಮಿ ಹೆಸರಿಗೆ ಪಡೆದುಕೊಂಡಿದ್ದಾರೆ.ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭ: ಪರೀಕ್ಷಗೂ ಮುನ್ನವೇ ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್


ಇತ್ತೀಚೆಗೆ ಇವರು ಚುನಾವಣಾ ಆಯೋಗಕ್ಕೆ ದೂರು ನೀಡಿ ತಮ್ಮ ವಾರ್ಡ್ ನಲ್ಲಿ 10 ಸಾವಿರ ನಕಲಿ ಮತದಾರರು ಇದ್ದಾರೆ ಎಂದು ದೂರಿನಲ್ಲಿ ಹೇಳುತ್ತಾರೆ. ಈ ದೂರಿನ ಆಧಾರದ ಮೇಲೆ ಆಯೋಗ ತನಿಖೆ ಮಾಡಿ ವರದಿ ನಿದ್ದು, ಇವರ ಆರೋಪ ಸುಳ್ಳು ಎಂದು ಸ್ಪಷ್ಟವಾಗಿ ತಿಳಿಸಿದೆ. ಇದೇ ಕೆಲಸವನ್ನು ಬೇರೆಯವರು ಮಾಡಿದ್ದರೆ ಆಯೋಗ ಸುಮೋಟೋ ಪ್ರಕರಣ ದಾಖಲಿಸುತ್ತಿತ್ತು. ಆದರೆ ಈ ಪ್ರಕರಣದಲ್ಲಿ ಮಾಡಿಲ್ಲ. ಈತ ಕಳೆದ 8-10 ವರ್ಷಗಳಲ್ಲಿ 200 ಕೋಟಿ ಆಸ್ತಿ ಮಾಡಿದ್ದಾರೆ. ಈ ವಿಚಾರವಾಗಿ ನಮ್ಮ ನಾಯಕರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಬೇರೆ ಬೇರೆ ಕೋರ್ಟ್ ಗಳಲ್ಲಿ ಕೇಸ್ ಹಾಕಲಾಗಿದೆ. ಬಿಜೆಪಿ ನಾಯಕರಾಗಿರುವ ಹಿನ್ನೆಲೆಯಲ್ಲಿ ಇವರ ವಿರುದ್ದ ಕ್ರಮ ಕೈಗೊಂಡಿಲ್ಲ. ಮುಂದಿನ ಎರಡು ತಿಂಗಳ ನಂತರ ನಮ್ಮ ಸರ್ಕಾರ ಬಂದ ನಂತರ ಈತನ ವಿರುದ್ಧ ಸಂಪೂರ್ಣ ಪ್ರಕರಣ ತನಿಖೆ ಮಾಡಿಸಿ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗೆ ಕಳಿಸುವ ಕೆಲಸ ಮಾಡುತ್ತೇವೆ ಎಂದು ಅಲ್ಲಿನ ಮತದಾರರಿಗೆ ಭರವಸೆ ನೀಡುತ್ತೇನೆ.


ಇನ್ನು ಮೈಸೂರು ಬೆಂಗಳೂರು ಹೆದ್ದಾರಿ ಎಕ್ಸ್ ಪ್ರೆಸ್ ವೇ ಆಗಿದೆ. ಈ ರಸ್ತೆಗಳನ್ನು 60% ಕೇಂದ್ರ ಸರ್ಕಾರ 40% ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಆರಂಭದಲ್ಲಿ ನಾಲ್ಕು ಪಥದಲ್ಲಿದ್ದ ರಸ್ತೆಯನ್ನು 4-3-2014ರಲ್ಲಿ ಕೇಂದ್ರ ಸರ್ಕಾರ ಆಸ್ಕರ್ ಫರ್ನಾಂಡೀಸ್ ಅವರು ಸಚಿವರಾಗಿದ್ದಾಗ 6 ಪಥದ ರಸ್ತೆಗೆ ಏರಿಸಲು ಸಿದ್ದರಾಮಯ್ಯ ಅವರ ಸರ್ಕಾರ ಪ್ರಸ್ತಾವನೆ ಸಲ್ಲಿಸಿತ್ತು, ಅನುಮೋದನೆ ಸಿಕ್ಕಿತ್ತು. 2017ರಲ್ಲಿ ಈ ಯೋಜನೆ ಕಾರ್ಯರೂಪಕ್ಕೆ ಬಂದಿತ್ತು. 5 ಬಾರಿ ಈ ಯೋಜನೆ ಮೊತ್ತ ಹೆಚ್ಚಾಗಿದೆ. ಆರಂಭದಲ್ಲಿ 3 ಸಾವಿರ ಕೋಟಿ ಇದ್ದ ಅಂದಾಜು ಮೊತ್ತ 2023ರಲ್ಲಿ 12 ಸಾವಿರ ಕೋಟಿಗೆ ಏರಿಕೆಯಾಗಿದೆ. 


ಸರ್ಕಾರ ರಾಮನಗರ ಹಾಗೂ ಮಂಡ್ಯದಲ್ಲಿ 2 ಕಡೆ ಟೋಲ್ ನಿರ್ಮಾಣ ಮಾಡಲಾಗಿದೆ. ನಾಲ್ಕು ಚಕ್ರಗಳ ವಾಹನಕ್ಕೆ ಒಂದು ಕಡೆ 135 ರೂ ಟೋಲ್ ಇದೆ. ನಾಳೆಯಿಂದ ಟೋಲ್ ಅನ್ನು ಶೇ.22 ಏರಿಕೆ ಮಾಡಲಾಗಿದೆ. ಕಾನೂನಿನ ಪ್ರಕಾರ ಟೋಲ್ ಸಂಗ್ರಹಿಸುವ ಅಧಿಕಾರ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಮಾತ್ರ. ಆದರೆ ಇಲ್ಲಿ ನಾಗ್ಪುರದ ಕಂಪನಿಗೆ ಟೋಲ್ ಸಂಗ್ರಹಿಸುವ ಜವಾಬ್ದಾರಿ ನೀಡಿದ್ದಾರೆ. ಅವರ ಮಾಹಿತಿ ಪ್ರಕಾರ ಪ್ರತಿನಿತ್ಯ 90 ಸಾವಿರ ವಾಹನ ಸಂಚಾರ ಮಾಡಲಿದೆ. ಇದರಲ್ಲಿ ಸರಾಸರಿ ಒಂದು ದಿನಕ್ಕೆ 5.50 ಕೋಟಿ ಟೋಲ್ ಸಂಗ್ರಹವಾಗುತ್ತದೆ. ಆರಂಭದ 90 ದಿನಗಳಿಗೆ ಒಪ್ಪಂದ ಮಾಡಿಕೊಂಡು ಟೋಲ್ ಸಂಗ್ರಹಿಸುವ ಅಧಿಕಾರವನ್ನು ಸ್ಕೈಲಾರ್ಜ್ ಕಂಪನಿಗೆ ನೀಡಲಾಗಿದೆ.  ಒಪ್ಪಂದದ ಪ್ರಕಾರ ಇವರು ಕೇಂದ್ರ ಸರ್ಕಾರಕ್ಕೆ ಅಥವಾ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಪ್ರತಿ ನಿತ್ಯ 62 ಲಕ್ಷ ನೀಡಬೇಕು. ಆದರೆ ಇಲ್ಲಿ ಪ್ರತಿನಿತ್ಯ 5.50 ಕೋಟಿ ಟೋಲ್ ಸಂಗ್ರಹವಾಗುತ್ತಿದೆ. ಈ ಕಂಪನಿ 90 ದಿನಗಳಲ್ಲಿ 484 ಕೋಟಿ ಟೋಲ್ ಸಂಗ್ರಹಿಸಲಿದ್ದು, ಇವರು ಸರ್ಕಾರಕ್ಕೆ ಅಥವಾ ಪ್ರಾಧಿಕಾರಕ್ಕೆ 90 ದಿನಗಲಲ್ಲಿ ನೀಡುವ ಹಣ ಕೇವಲ 5 ಕೋಟಿ ಮಾತ್ರ. 


ಈಗ ಟೋಲ್ ಏರಿಕೆಯಿಂದ ನಾಳೆಯಿಂದ ಕಾರು ಹಾಗೂ ಇತರೆ ನಾಲ್ಕು ಚಂಕ್ರದ ವಾಹನಗಳಿಗೆ 135 ರೂ ಇದ್ದ ಟೋಲ್ 165 ರೂ. ಆಗಲಿದೆ.  ಮನಿ ಬಸ್ ಗಳಿಗೆ  210ರಿಂದ 270, ಟ್ರಕ್ ಮತ್ತು ಬಸ್ ಟೋಲ್ 440ರಿಂದ 565 ಆಗಿದೆ. ವಾಣಿಜ್ಯ ವಾಹಗಳು 480ರಿಂದ 615 ನೀಡಬೇಕು. ಭಾರಿ ವಾಹನಗಳು 685ರಿಂದ 885 ರೂ. ಟೋಲ್ ನೀಡಬೇಕಿದೆ. ಇನ್ನು ಈ ಒಪ್ಪಂದದಲ್ಲಿ ವಾರ್ಷಿಕವಾಗಿ ಟೋಲ್ ಏರಿಕೆ ಪ್ರಮಾಣವನ್ನು ಶೇ.48ಕ್ಕೆ ನಿಗದಿ ಮಾಡಿದ್ದಾರೆ. ಅಂದರೆ ಈ ವರ್ಷ ನೀವು 200 ರೂ. ಟೆಲ್ ನೀಡುತ್ತಿದ್ದರೆ, ಮುಂದಿನ ವರ್ಷ ನೀವು 300 ರೂ. ನೀಡಬೇಕು. ಇದು ಸುಲಿಗೆ ಮಾಡುವ ವ್ಯವಸ್ಥೆ. ಈ ರಸ್ತೆ ಉದ್ಘಾಟನೆಯಾಗಿ ಒಂದು ತಿಂಗಳಾಗಿಲ್ಲ. ಆಗಲೇ ಹೆಚ್ಚಿಸಿದ್ದಾರೆ. ಇದು ಕೇವಲ 55 ಕಿ.ಮೀ ರಸ್ತೆಗೆ ಮಾತ್ರ ಹಾಕುತ್ತಿದ್ದು, ಮತ್ತೊಂದು ಭಾಗದ ರಸ್ತೆಗೆ ಹಾಕಿಲ್ಲ. ಅಲ್ಲಿಯೂ ಹೆಚ್ಚಳ ಮಾಡಿದರೆ ಬೆಂಗಳೂರಿನಿಂದ ಮೈಸೂರಿಗೆ ಒಂದು ಕಡೆಗೆ ಸಾಗಲು 450 ರೂ, ಬೆಂಗಳೂರಿನಿಂದ ಮೈಸೂರಿಗೆ ಹೋಗಿ ವಾಪಸ್ಸಾಗಲು 900 ರೂ. ನೀಡಬೇಕು. ಪಾಸ್ಟ್ಯಾಗ್ ಇಲ್ಲವಾದರೆ ಇದರ ಪ್ರಮಾಣ ದುಪ್ಪಟ್ಟಾಗುತ್ತದೆ.


ಈ ರಸ್ತೆಯ 21 ಕಿ.ಮೀ ನಷ್ಟು ರಸ್ತೆ ಕಾಮಗಾರಿ ಅಪೂರ್ಣವಾಗಿದೆ. ಇದು ಸರ್ವೀಸ್ ರಸ್ತೆಯಲ್ಲಿ ಸುಮಾರು 37 ಕಿ.ಮೀ ಕಾಮಗಾರಿ ಪೂರ್ಣಗೊಂಡಿಲ್ಲ. ಇಲ್ಲಿ ಮಳೆ ನೀರು ಹರಿಯಲು ಅವಕಾಶ ಕಲ್ಪಿಸಿಲ್ಲ. ಹೀಗಾಗಿ ಮಳೆ ನೀರು ರಸ್ತೆಯಲ್ಲಿ ನಿಲ್ಲಲಿದೆ. ಒಪ್ಪಂದದ ಪ್ರಕಾರ 88 ಅಂಡರ್ ಪಾಸ್ ಮಾಡಬೇಕಿದೆ. ಅವರು ಮಾಡಿರುವುದು 20 ಮಾತ್ರ. ಓವರ್ ಪಾಸ್ ಗಳು 37 ಮಾಡಬೇಕಿತ್ತು, 7 ಮಾಡಿದ್ದಾರೆ. ಎಡಬದಿಯ ಗ್ರಾಮದವರು ಬಲಬದಿಯ ಗ್ರಾಮಕ್ಕೆ ಹೋಗಲು ಸುಮಾರು 20 ಕಿ.ಮೀ ಸಂಚಾರ ಮಾಡಬೇಕಿದೆ. 


ಇನ್ನು ಮೀಸಲಾತಿ ವಿಚಾರದಲ್ಲಿ ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯಗಳನ್ನು ವಿಲನ್ ಗಳಾಗಿ ಮಾಡುವ ಪ್ರಯತ್ನ ಮಾಡುತ್ತಿವೆ. ನಾನು ಈ ಹಿಂಗೆಯೇ ಮುಸಲ್ಮಾನರ ಮೀಸಲಾತಿ ಕಿತ್ತು ನೀಡಲಿದ್ದಾರೆ ಎಂದು ಹೇಳಿದ್ದೆ. ಇದು ನ್ಯಾಯಾಲಯದ ಕಾನೂನಿನಲ್ಲಿ ಊರ್ಜಿತವಾಗುವುದಿಲ್ಲ. 


ಚುನಾವಣೆ ಸಮಯದಲ್ಲಿ ಜನರಿಗೆ ಮಂಕುಬೂದಿ ಎರಚಿ 2ಸಿ ಮತ್ತು 2ಡಿ ವರ್ಗಕ್ಕೆ ನೀಡಿದ್ದಾರೆ. ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಎಂದಿಗೂ ಬೋರೆಯವರ ತಟ್ಟೆಯ ಅನ್ನ ಕಿತ್ತು ತಿನ್ನುವುದಿಲ್ಲ. ಬೇರೆಯವರಿಗೆ ಕೊಟ್ಟಿರುವ ಪರಂಪರೆ ಇದೆ. ಇನ್ನು ಮುಸಲ್ಮಾನ ಸಮುದಾಯಕ್ಕೆ ಈ ಹಿಂದೆ ಜಾತಿ ಆಧಾರದ ಮೇಲೆ ಮೀಸಲಾತಿ ನೀಡಿದ್ದು, ಅದನ್ನು ತೆಗೆದು ಈಗ ಆರ್ಥಿಕವಾಗಿ ಹಿಂದುಳಿದ ವರ್ಗದಲ್ಲಿ ನೀಡುತ್ತೇವೆ ಎಂದಿದ್ದಾರೆ. ಜಾತಿ ಆಧಾರದ ಮೇಲೆ ಮೀಸಲಾತಿ ಪಡೆಯುವವರು ಆರ್ಥಿಕ ಆಧಾರದ ಮೇಲೆ ಪಡೆಯಲು ಸಾಧ್ಯವಿಲ್ಲ. ಆರ್ಥಿಕ ಆಧಾರದ ಮೇಲೆ ಮೀಸಲಾತಿ ಪಡೆಯುವವರು ಜಾತಿ ಮೇಲೆ ಮೀಸಲಾತಿ ಪಡೆಯಲು ಆಗುವುದಿಲ್ಲ. ಚುನಾವಣೆ ಸಮಯದಲ್ಲಿ ಈ ವಿಚಾರದಲ್ಲಿ ಗೊಂದಲ ಸೃಷ್ಟಿಸಿದ್ದಾರೆ. ಈ ಒಕ್ಕಲಿಗರು ಹಾಗೂ ಲಿಂಗಾಯತರು ಸರ್ಕಾರಕ್ಕೆ ಈ ತೀರ್ಮಾನ ಬೇಡ ಎಂದು ಸರ್ಕಾರಕ್ಕೆ ತಿಳಿಸಲಿ. 


ಇನ್ನು ಬಿಜೆಪಿ ಜನರನ್ನು ಹೇಗೆ ಮೂರ್ಖರನ್ನಾಗಿಸುವ ಪ್ರಯತ್ನ ಮಾಡುತ್ತದೆ ಎಂಬುದಕ್ಕೆ ಒಳ ಮೀಸಲಾತಿ ಸಾಕ್ಷಿ. 2020ರಲ್ಲಿ  ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗ ನಾಲ್ಕು ಸಮುದಾಯವನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ತೆಗೆಯುವಂತೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಾಗ, ಸರ್ಕಾರ ಅದಕ್ಕೆ ಉತ್ತರ ನೀಡುವುದಿಲ್ಲ. ಆದರೆ ಈಗ ವಂದಿತಾ ಶರ್ಮಾ ವರು ಒಳ ಮೀಸಲಾತಿ ವಿಚಾರವಾಗಿ ಪತ್ರ ಬರೆದಿದ್ದು, ಅದರ ಕೊನೆ ಪ್ಯಾರಾದಲ್ಲಿ ಬೋವಿ, ಬಂಜಾರ, ಕೊರಮ ಹಾಗೂ ಕೊರಚ ಸಮುದಾಯ ಪರಿಶಿಷ್ಟ ಜಾತಿ ವಿಭಾಗದಲ್ಲಿ ಉಳಿಯಲಿದೆ ಎಂದು ತಿಳಿಸಿದ್ದಾರೆ.


ಕೇಂದ್ರದ ಬಿಜೆಪಿ ಸರ್ಕಾರವೇ ಈ ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕಿತ್ತುಹಾಕುವಂತೆ ಪತ್ರ ಬರೆಯುತ್ತಾರೆ, ನೀವು ಅವರು ಮುಂದುವರಿಯಲಿದ್ದಾರೆ ಎಂದು ಪತ್ರ ಬರೆದು ಈ ಸಮುದಾಯಗಳನ್ನು ಯಾಮಾರಿಸುತ್ತಿದ್ದೀರಾ? ಇದೇ ಕಾರಮಕ್ಕೆ ಅವರು ಧಂಗೆ ಎದ್ದಿದ್ದಾರೆ. ಬಿಜೆಪಿಯವರೇ ಗಲಾಟೆ ಮಾಡಿಸಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರು ಯಡಿಯೂರಪ್ಪ ಅವರ ಕುಟುಂಬವನ್ನು ರಾಜಕೀಯವಾಗಿ ಮುಗಿಸಲು ಪ್ರಯತ್ನಿಸುತ್ತಿದ್ದಾರೆ. ಅದೇ ಕಾರಣಕ್ಕೆ ವಿಜಯೇಂದ್ರ ಅವರನ್ನು ವರುಣಾದಲ್ಲಿ ನಿಲ್ಲಿಸಲು ಪ್ರಯತ್ನಿಸುತ್ತಿದ್ದಾರೆ. ವಿಜಯೇಂದ್ರ ಅವರಲ್ಲ ಯಡಿಯೂರಪ್ಪ ಅವರೇ ಸ್ಪರ್ಧಿಸಿದರೂ ಸಿದ್ದರಾಮಯ್ಯ ಅವರು 1 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ. 


ಇದನ್ನೂ ಓದಿ: ಪ್ರಥಮ ಪಿಯುಸಿ ಫಲಿತಾಂಶ ಪ್ರಕಟ : ಈ ಲಿಂಕ್ ಮೂಲಕ ರಿಸಲ್ಟ್ ತಿಳಿಯಿರಿ


ಇನ್ನು ನಿನ್ನೆಯಿಂದ ನೀತಿ ಸಂಹಿತೆ ಜಾರಿಯಾಗಿದ್ದು, ಎಲ್ಲಾ ಜಿಲ್ಲೆಗಳಲ್ಲಿ ಹಾಕಲಾಗಿರುವ ಅಧಿಕಾರಿಗಳು ಬಿಜೆಪಿ ಪರವಾಗಿ ಮೃದು ಧೋರಣೆ ಹೊಂದಿರುವವರು. ಸಿದ್ದರಾಮಯ್ಯ ಅವರು ಮೊನ್ನೆ ತಮ್ಮ ಊರಿಗೆ ಹೋದರೆ ಅಲ್ಲಿ ಸಭೆ ನಡೆಸಬಾರದು ಎಂದು ಪ್ರಕರಣ ದಾಖಲಿಸಿದ್ದಾರೆ. ಚುನಾವಣಾ ಆಯೋಗ ಪ್ರಚಾರ ಮಾಡಬಾರದು ಎಂದು ನೀತಿ ಸಂಹಿತೆ ಜಾರಿ ಮಾಡಿದೆಯೇ? ನಮ್ಮ ಮಾಹಿತಿ ಪ್ರಕಾರ 300 ಐಟಿ ಅಧಿಕಾರಿಗಳನ್ನು ರಾಜ್ಯಕ್ಕೆ ಕರೆ ತಂದಿದ್ದು, ಕಾಂಗ್ರೆಸ್ ಪಕ್ಷ ಪ್ರಬಲವಾಗಿರುವ 150 ಕ್ಷೇತ್ರಗಳಲ್ಲಿ ಇವರನ್ನು ಅಭ್ಯರ್ಥಿ ಹಿಂದೆ ಬಿಟ್ಟಿದ್ದಾರೆ. ಹುಣಸೂರಿನ ಶಾಸಕರು ನಮ್ಮ ಕ್ಷೇತ್ರಕ್ಕೆ 5 ಕೋಟಿ ಹಣ ಬರುತ್ತಿದೆ ಎಂದು ದೂರು ನೀಡಿದರೂ ಒಬ್ಬರೂ ಪರಿಶೀಲನೆ ಮಾಡಲಿಲ್ಲ. ಚುನಾವಣಾ ಆಯೋಗ ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದ್ದು, ನೀವು ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಬೇಕು. ಈ ವಿಚಾರವಾಗಿ ನಾವು ಒಂದೆರಡು ದಿನಗಳಲ್ಲಿ ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇವೆ. ಈಗಾಗಲೇ ಬಿಜೆಪಿ ಬೇರೆ ರಾಜ್ಯಗಳಲ್ಲಿ ಎಟಿಎಂ ಹಣ ಸಾಗಾಟ ವಾಹನ, ಆಂಬುಲೆನ್ಸ್, ಪೊಲೀಸ್ ವಾಹನಗಳಲ್ಲಿ ಹಣ ಸಾಗಿಸಿದ್ದಾರೆ.


ರಮೇಶ್ ಬಾಬು


ರಾಜ್ಯದಲ್ಲಿ ಚುನಾವಣೆ ಜ್ವರ ಆರಂಭವಾಗಿದೆ. ನಿರೀಕ್ಷೆಯಂತೆ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ. ಬಿಜೆಪಿ ವೈಫಲ್ಯ ಹಾಗೂ ಗುಂಪುಗಾರಿಕೆಯಿಂದ ಬಿಜೆಪಿ ಶಾಸಕರು ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ.


ನಮಗೆ ಬಂದಿರುವ ಮಾಹಿತ ಪ್ರಕಾರ ಯಡಿಯೂರಪ್ಪ ಅವರನ್ನು ಬ್ಲಾಕ್ ಮೇಲೆ ಮಾಡುವ ಪ್ರಯತ್ನ ಮುಂದುವರಿಸಿದ್ದು, ನಿನ್ನೆ ಅವರ ಮೇಲೆ ಒತ್ತಡ ಹಾಕಿ ಅರ ಪುತ್ರ ವಿಜಯೇಂದ್ರ ಅವರನ್ನು ವರುಣಾದಲ್ಲಿ ನಿಲ್ಲಿಸಲು ತೀರ್ಮಾನಿಸಿದೆ. ಜು.25, 2021 ಬಿಜೆಪಿ ಇತಿಹಾಸದಲ್ಲಿ ಕಪ್ಪು ಚುಕ್ಕೆ. ಕಾರಣ ಯಡಿಯೂರಪ್ಪ ಅವರು ಕಣ್ಣೀರು ಹಾಕಿ ರಾಜೀನಾಮೆ ನೀಡಿದರು. ಯಡಿಯೂರಪ್ಪ ಅವರನ್ನು ಬಳಸಿಕೊಂಡು ವ್ಯವಸ್ಥಿತವಾಗಿ ಅವರನ್ನು ಮೂಲೆಗುಂಪು ಮಾಡಲು ಮುಂದಾಗಿದೆ. ಯಡಿಯೂರಪ್ಪ ಅವರು ವಿಜೇಂದ್ರ ಅವರನ್ನು ಎಂಎಲ್ ಸಿ ಮಾಡಿ ರಾಜ್ಯ ಸಂಪುಟದಲ್ಲಿ ಹಾಗೂ ರಾಂಘವೇಂದ್ರ ಅವರನ್ನು ಕೇಂದ್ರ ಸಂಪುಟದಲ್ಲಿ ಸೇರಿಸುವಂತೆ ಬಿಜೆಪಿ ನಾಯಕರಿಗೆ ತಿಳಿಸಿದರೂ ಇದುವರೆಗೂ ಯಾವುದೂ ಸಾಧ್ಯವಾಗಿಲ್ಲ. ವಿಜಯೇಂದ್ರ ಅವರ ಮೇಲೆ ಐದಾರೂ ಡಿ ಹಾಗೂ ಐಟಿ ಪ್ರಕರಣಗಳು ಬಾಕಿ ಇವೆ. ಇವುಗಳನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯ ಅವರ ವಿರುದ್ಧ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ. 


ಯಡಿಯೂರಪ್ಪ ಅವರು ಆರು ತಿಂಗಳ ಮುನ್ನವೇ ಶಿಕಾರಿಪುರದಲ್ಲಿ ವಿಜಯೇಂದ್ರಗೆ ಟಿಕೆಟ್ ನೀಡುವುದಾಗಿ ಹೇಳಿದ್ದರು. ಆದರೆ ಈಗ ವರುಣಾದಲ್ಲಿ ಸ್ಪರ್ಧಿಸುವ ಬಗ್ಗೆ ಒತ್ತಡ ಹಾಕುತ್ತಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಪಟ್ಟಿ ಇನ್ನು ಬಿಡುಗಡೆ ಮಾಡಿಲ್ಲ. ತಮ್ಮ ಪುತ್ರನಿಗೆ ಶಿಕಾರಿಪುರದಲ್ಲಿ ಟಿಕೆಟ್ ಸಿಗುವ ಆತಂಕ ಯಡಿಯೂರಪ್ಪ ಅವರಿಗೆ ಇದೆ. ಒಳ ಮೀಸಲಾತಿ ವಿಚಾರದಲ್ಲಿ ಶಿಕಾರಿಪುರದಲ್ಲಿ ಯಾವ ಪರಿಸ್ಥಿತಿ ನಿರ್ಮಿಸಿದ್ದಾರೆ. ಇಂತಹ ಅನೇಕ ತಂತ್ರಗಾರಿಕೆಗಳನ್ನು ಬಿಜೆಪಿ ಸರ್ಕಾರ ಮಾಡುತ್ತಿದೆ. 


ವಿರೋಧ ಪಕ್ಷಗಳ ಮೇಲೆ ಬಿಜೆಪಿ ಸರ್ಕಾರದ ಇಡಿ ಮತ್ತು ಐಟಿ ದಾಳಿ ಸದ್ಯದಲ್ಲೇ ಆರಂಭವಾಗುವ ಸಾಧ್ಯತೆ ಇದೆ. ಬಿಜೆಪಿಯವರು ಏನೇ ಮಾಡಿದರೂ ರಾಜ್ಯದ ಜನರ ಮನಸ್ಸು ಬದಲಿಸಲು ಆಗುವುದಿಲ್ಲ.


ಇತ್ತೀಚೆಗೆ ಸಿದ್ದರಾಮಯ್ಯ ಅವರು ಜೆಡಿಎಸ್ ಎಷ್ಟೇ ಬೊಂಬಡ ಬಡೆದುಕೊಂಡರು ಅಧಿಕಾರಕ್ಕೆ ಬರುವುದಿಲ್ಲ ಎಂದಿದ್ದರು. ಇದನ್ನು ಟೀಕಿಸುವ ಭರದಲ್ಲಿ ಕುಮಾರಸ್ವಾಮಿ ಅಪಹಾಸ್ಯಕ್ಕೆ ಗುರಿಯಾಗುತ್ತಿದ್ದಾರೆ. ಅವರು ಬಿಜೆಪಿ ಬಿ ಟೀಂ ಆಗಿ ಕೆಲಸ ಮಾಡುತ್ತಿದ್ದು, ಈಗಾಗಲೇ ಬಿಜೆಪಿ ನಾಯಕರನ್ನು ಭೇಟಿ ಮಾಡಿ ಸಂಪರ್ಕದಲ್ಲಿದ್ದಾರೆ. ಕಾಂಗ್ರೆಸ್ ಗೆಲ್ಲುವ ಕ್ಷೇತ್ರಗಳಲ್ಲಿ ಬಿಜೆಪಿ ನಿರ್ದೇಶದನದಂತೆ ಅಭ್ಯರ್ಥಿ ಕಣಕ್ಕಿಳಿಸುವ ಭರವಸೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಜನರ ಬೆಂಬಲದೊಂದಿಗೆ ಇವರ ಷಡ್ಯಂತ್ರವನ್ನು ಮೆಟ್ಟಿನಿಂತು 135-140 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.