Ola-Uber Auto Ban : ನಾಳೆಯಿಂದ ಬೆಂಗಳೂರಲ್ಲಿ ಓಲಾ ಊಬರ್ ಆಟೋ ಸೇವೆ ಬಂದ್!
ಸಾರ್ವಜನಿಕರು ಕೂಡ ಆಪ್ ಆಧಾರಿತ ಆಟೋ ಸೇವೆ ಪಡೆಯದಂತೆ ಮನವಿ ಮಾಡಿಕೊಂಡ ಸಾರಿಗೆ ಇಲಾಖೆ ಮಾಡಿಕೊಂಡಿದೆ ಎಂದು ಸಾರಿಗೆ ಆಯುಕ್ತ ಟಿಹೆಚ್ ಎಂ ಕುಮಾರ್
ಬೆಂಗಳೂರು : ಅಗ್ರಿಗೇಟರ್ಸ್ ಲೆಸೆನ್ಸ್ ಮಾಡೋದಕ್ಕೆ 3 ವೀಲರ್ ಮಾಡೋದಕ್ಕೆ ಅವಕಾಶ ವಿಲ್ಲ. ನಾಳೆಯಿಂದ ಓಲಾ ಊಬರ್ ಆಪ್ ಆಧಾರಿತ ಎಲ್ಲಾ ಆಟೋ ಸೇವೆ ಸ್ಥಗಿತಗೊಳಿಸುವಂತೆ ಮನವಿ ಮಾಡುತ್ತೇವೆ. ಸಾರ್ವಜನಿಕರು ಕೂಡ ಆಪ್ ಆಧಾರಿತ ಆಟೋ ಸೇವೆ ಪಡೆಯದಂತೆ ಮನವಿ ಮಾಡಿಕೊಂಡ ಸಾರಿಗೆ ಇಲಾಖೆ ಮಾಡಿಕೊಂಡಿದೆ ಎಂದು ಸಾರಿಗೆ ಆಯುಕ್ತ ಟಿಹೆಚ್ ಎಂ ಕುಮಾರ್ ಹೇಳಿದ್ದಾರೆ.
ಇಂದು ನಡೆದ ಓಲಾ ಹಾಗೂ ಊಬರ್ ಸಭೆಯಲ್ಲಿ ವಕೀಲರು ಆಟೋ ಚಾಲಕರ ಮುಖಂಡರು ಭಾಗಿಯಾಗಿದ್ರು. ಸಭೆ ಬಳಿ ಮಾತನಾಡಿದ ಸಾರಿಗೆ ಆಯುಕ್ತರು, 3 ವೀಲರ್ ಅಗ್ರೀಗೇಟ್ ರೂಲ್ಸ್ ಅವಕಾಶ ಇಲ್ಲ. ಅಗ್ರಿಗೇಟರ್ ಅಂತ ಅವರಿಗೆ ಅನುಮತಿ ನೀಡಲು ಬರುವುದಿಲ್ಲ. ಈಗಾಗಲೆ ಓಲಾ ಉಬರ್ ಜೊತೆ ಸಭೆ ನಡೆಸಿ ಮನವರಿಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : Basavaraja Bommai : 'ಬಿಜೆಪಿ ಪರವಾದ ಉತ್ಸಾಹ ; 2023 ರಲ್ಲಿ ನಾವೇ ಅಧಿಕಾರಕ್ಕೆ'
ನಾಳೆಯಿಂದ ಓಲಾ ಉಬರ್ ಆಟೋ ಸೇವೆ ಕೊಡಬೇಕು ಅಂದ್ರೆ ಸರ್ಕಾರದಿಂದ ಅನುಮತಿ ಪಡೆಯಬೇಕು. ಹೀಗಾಗಿ ಸಾರಿಗೆ ಇಲಾಖೆ ಅನುಮತಿ ಕೇಳಲು ಸಿಎಂ ಬಳಿ ಚರ್ಚಿಸಲಿದೆ. ಆರ್ ಟಿಎ ನಿಗದಿ ಪಡಿಸಿದ ಕಿ.ಮೀಗೆ 30 ರೂ. ಹಾಗೂ ಜಿಎಸ್ ಟಿ ಶೇ.18 ರಷ್ಟು ಮಾತ್ರ ಪಡೆಯುವಂತೆ. ರಾಜ್ಯ ಸರ್ಕಾರದಿಂದ ಬೈಕ್ ಟ್ಯಾಕ್ಸಿ ಅನುಮತಿ ಇಲ್ಲ. ಒಂದು ವೇಳೆ ನಡೆಸುತ್ತಿದ್ದರೆ ಅದು ಅಕ್ರಮ ಆರೋಪದಡಿ ಕ್ರಮ ಕೈಗೊಳ್ಳಲಾಗುತ್ತದೆ.
ಒಂದು ವೇಳೆ ಓಲಾ ಉಬರ್ ಸೇವೆ ನೀಡಿದ್ರೆ ಕಂಪೆನಿ ಮೇಲೆ ಆರ್ ಟಿಓ ಕ್ರಮ ಕೈಗೊಂಡು, ಒಂದು ಆಟೋಗೆ 5 ಸಾವಿರ ದಂಡ ಹಾಕಲಿದೆ. ನಾಳೆಯಿಂದ ಓಲಾ ಉಬರ್ ಸೇವೆ ಸಲ್ಲಿಸ್ತಿದ್ರೆ ಪ್ರಯಾಣಿಕರು ದೂರು ನೀಡಬಹುದು. ಅದಕ್ಕೆ ಸಾರಿಗೆ ಇಲಾಖೆ ಎರಡು ಸಹಾಯವಾಣಿ ನಂಬರ್ 9449863426 , 9449863429 ನೀಡಿದೆ. ಓಲಾ ಉಬರ್ ದಂಡ ಪಾವತಿಸಲು 7 ದಿನ ಕಾಲಾವಕಾಶ ನೀಡಲಿದೆ.
ಇದನ್ನೂ ಓದಿ : ಮೀಸಲಾತಿ ಬಗ್ಗೆ ನಿರ್ಧರಿಸಿದ್ದೇವೆ, ಕ್ರೆಡಿಟ್ ತಗೋಳ್ತೇವೆ: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.