ಚಿಕ್ಕಮಗಳೂರು : ಹಿಂದೂ ಸಂಪ್ರದಾಯದಲ್ಲಿ ದೈವ ದೇವರುಗಳಿಗೆ ಬಹಳ ಪ್ರಾಮುಖ್ಯತೆ ಇದೆ. ನಮ್ಮ ಸುತ್ತ ನಡೆಯುವ ಕೆಲವು ಘಟನೆಗಳು ಬೆಚ್ಚಿ ಬೀಳುಸುವಂತಿದೆ. ಯಾವುದಾದರೂ ವಿಚಾರಕ್ಕೆ ಸಂಬಂಧಪಟ್ಟಂತೆ ಗೊಂದಲ ಎದ್ದಾಗ ದೈವಗಳ ಮುಂದೆ ಪ್ರಶ್ನೆ ಹಾಕುವುದು ಹಿಂದಿನಿಂದ ನಡೆದುಕೊಂಡು ಬಂದಿರುವ ನಂಬಿಕೆ. ಅಲ್ಲದೆ ದರ್ಶನದ ವೇಳೆ ಕೂಡಾ ಸಮಸ್ಯೆಗೆಳಿಗೆ ಪರಿಹಾರ ಏನು ಎನ್ನುವುದನ್ನು ಕೇಳಲಾಗುತ್ತದೆ. ಹೀಗೆ ಪ್ರಶ್ನೆಗಳನ್ನು ಕೇಳುವಾಗ ದೈವಗಳು ನೀಡುವ ಉತ್ತರವನ್ನು ದೈವ ನುಡಿ ಎನ್ನುತ್ತಾರೆ. ಒಮ್ಮೊಮ್ಮೆ ದೈವಗಳ ಬಾಯಿಯಿಂದ ಬರುವ ಮಾತುಗಳು ಬೆಚ್ಚಿ ಬೀಳಿಸುತ್ತವೆ. ಚಿಕ್ಕಮಗಳೂರಿನಲ್ಲಿ ಕೂಡಾ ಇಂಥದ್ದೇ ಘಟನೆ ನಡೆದಿದೆ. 


COMMERCIAL BREAK
SCROLL TO CONTINUE READING

ಇಲ್ಲಿ ದೈವದ ನುಡಿ ನಿಜವಾಗಿದೆ. ದೈವದ ನುಡಿಯಂತೆಯೇ ಅದು ಹೇಳಿದ ಜಾಗದಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟ ಪುರಾತನ ಕಾಲದ ವಿಗ್ರಹಗಳು ಪತ್ತೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಚಾರ್ಮಾಡಿ ಘಾಟ್ ಬಳಿಯ ಅಲೆಖಾನ್ ರಸ್ತೆಯಲ್ಲಿರೋ ದೈವಸ್ಥಾನವಿದೆ. ಇದು ಚಾಮುಂಡೇಶ್ಚರಿ, ಗುಳಿಗ, ಬಬ್ಬುಸ್ವಾಮಿ ಇರುವ ಕ್ಷೇತ್ರ. ಈ ದೈವಗಳ ಮೇಲೆ ಇಲ್ಲಿನ ಜನರಿಗೆ ಭಾರೀ ನಂಬಿಕೆಯಿದೆ. 


ಇದನ್ನೂ ಓದಿ : ವಿದೇಶಕ್ಕೆ ಹಾರಿದ ಹಿಜಾಬ್ ಹುಡುಗಿ ಮುಸ್ಕಾನ್ , ತನಿಖೆ ನಡೆಸುವಂತೆ ಕೇಳಿಬಂದಿದೆ ಒತ್ತಾಯ


ಎಪ್ರಿಲ್ 24 ರಂದು ಇಲ್ಲಿನ ವಾರ್ಷಿಕ ಜಾತ್ರೋತ್ಸವ ನಡೆದಿತ್ತು. ಜಾತ್ರೋತ್ಸವದ ವೇಳೆ , ಗುಳಿಗ ದೈವದ ದರ್ಶನ ನಡೆಸಲಾಗಿತ್ತು. ಗುಳಿಗನ ದರ್ಶನದ ವೇಳೆ ದೇವಸ್ಥಾನದಿಂದ ಮೂರು ಕಿ.ಮೀ  ದೂರದಲ್ಲಿ , ನಿರ್ದಿಷ್ಟ ಜಾಗದಲ್ಲಿ ಕ್ಷೇತ್ರಕ್ಕೆ ಸಂಬಂಧಪಟ್ಟ ವಸ್ತುಗಳಿಗೆ ಹುಡುಕಾಟ ನಡೆಸುವಂತೆ ದೈವ ಸೂಚಿಸಿತ್ತು. ದೈವದ ನುಡಿಯಂತೆ ದೇವಸ್ಥಾನದ ಸಮಿತಿಯವರು ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದಾರೆ.  ದೈವ ಹೇಳಿದ ಹಾಗೆ, ಮರದ ಕೆಳಗೆ ಹುಡುಕಾಟ ನಡೆಸಿದಾಗ, ಗುಳಿಗ ಕ್ಷೇತ್ರದ ಮೂಲ ವಿಗ್ರಹಗಳು, ಕತ್ತಿ, ಗಂಟೆಗಳು  ಪತ್ತೆಯಾಗಿವೆ. 


ಈ ಕ್ಷೇತ್ರದ  ದೈವಗಳನ್ನು ಇಲ್ಲಿನ ಜನ ಬಹಳವಾಗಿ ನಂಬುತ್ತಾರೆ.  ಆಲೆಖಾನ್ ಸೇರಿದಂತೆ ಸುತ್ತಮುತ್ತಲಿನ ಜನರ ಆರಾದ್ಯ ದೈವಗಳಿವು.  ಚಾರ್ಮಾಡಿ ಘಾಟ್ ನಲ್ಲಿ ಅವಘಡ ಸಂಭವಿಸದಂತೆ ಇದೇ ದೈವಗಳು ಕಾಪಾಡುತ್ತವೆ ಎನ್ನುವುದು ಇಲ್ಲಿನ ಜನರ ನಂಬಿಕೆ. 


ಇದನ್ನೂ ಓದಿ :  ವಾತಾವರಣದಲ್ಲಿ ಏರುಪೇರು ಪ್ರಭಾವ: ಮಾರುಕಟ್ಟೆಯಲ್ಲಿ ತರಕಾರಿ ಬೆಲೆ ಹೀಗಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3hEw2hy ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.