ಬೆಂಗಳೂರು: ಡೆಡ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ವೇಷ ಬದಲಿಸಿಕೊಂಡು ಮತ್ತಷ್ಟು ಪ್ರಬಲವಾಗುತ್ತಿದೆ. ಒಂದು ಕಡೆ ವೈರಸ್ ಕಂಟ್ರೋಲ್ ಮಾಡಲು ವ್ಯಾಕ್ಸಿನ್ ಕೊಟ್ಟಿದ್ದರೆ, ಮತ್ತೊಂದು ಕಡೆ ಕೊರೊನಾ ರೂಪಾಂತರಿಗಳು ಈ ವ್ಯಾಕ್ಸಿನ್ ಕೋಟೆಯನ್ನೇ ಛಿದ್ರಗೊಳಿಸುತ್ತಿವೆ. ಅದರಲ್ಲೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಒಮಿಕ್ರಾನ್ ಕೇಸ್ ಗಳು ಹೆಚ್ಚಾಗುತ್ತಿರುವುದು ತೀವ್ರ ಆತಂಕ ಮೂಡಿಸಿದೆ.


COMMERCIAL BREAK
SCROLL TO CONTINUE READING

'ಒಮಿಕ್ರಾನ್' ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ  ಬಿಬಿಎಂಪಿ (BBMP) ಫುಲ್ ಅಲರ್ಟ್ ಆಗಿದೆ. ಕೇಂದ್ರ ಸರ್ಕಾರದ ವರದಿ ನೋಡಿ ಬಿಬಿಎಂಪಿ ಕಮಿಷನರ್ ಆ್ಯಕ್ಟಿವ್ ಆಗಿದ್ದು, ಬಿಬಿಎಂಪಿ ಸಿಬ್ಬಂದಿ ಹಾಗೂ ವಲಯವಾರು ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಖಡಕ್ ಆದೇಶ ನೀಡಿದ್ದಾರೆ.


ಇದನ್ನೂ ಓದಿ- ಓಮಿಕ್ರಾನ್ ಡೆಲ್ಟಾಕ್ಕಿಂತ ಹೆಚ್ಚು ಅಪಾಯಕಾರಿ ಎಂದ ವಿಜ್ಞಾನಿಗಳು; ಮತ್ತೆ ಲಾಕ್‌ಡೌನ್‌?


ಈಗಾಗಲೇ 'ಒಮಿಕ್ರಾನ್' ಬಗ್ಗೆ ಪ್ರತಿ ರಾಜ್ಯಕ್ಕೂ ಕೇಂದ್ರ ಸರ್ಕಾರ (Central Govt) ಎಚ್ಚರಿಕೆ ನೀಡಿದೆ. ದೇಶದಲ್ಲಿ ಒಮಿಕ್ರಾನ್ ಹೆಚ್ಚಾಗುವ ಮುನ್ಸೂಚನೆ ಪ್ರತಿಯೊಂದು ರಾಜ್ಯಕ್ಕೂ ಕೇಂದ್ರ ಸರ್ಕಾರದಿಂದ ಸಿಕ್ಕಿದೆ. ಹೀಗಾಗಿ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹಾಗಾದರೆ ಆ ಕ್ರಮಗಳು ಯಾವುವು ಅನ್ನೋ ಮಾಹಿತಿ ಮುಂದೆ ಇದೆ.


ಬಿಬಿಎಂಪಿ ಫುಲ್ ಅಲರ್ಟ್..!
1. ಬಿಬಿಎಂಪಿ ವ್ಯಾಪ್ತಿಯಲ್ಲಿ ಬೆಡ್ ಗಳ ಸಂಖ್ಯೆ ಹೆಚ್ಚಿಸಬೇಕು. ಅಗತ್ಯವಿದ್ದರೆ ಖಾಸಗಿ ಅಸ್ಪತ್ರೆಗಳ ಬೆಡ್ ಕಾಯ್ದಿರಿಸಲು ಸೂಚನೆ.


2. ಆಕ್ಸಿಜನ್ ಸಿಲಿಂಡರ್ ಸ್ಟಾಕ್ ಮಾಡಲು ಆದೇಶ, ಆಕ್ಸಿಜನ್ ವಿಚಾರದಲ್ಲಿ 2ನೇ ಅಲೆಯ ಪರಿಸ್ಥಿತಿ ಮರುಕಳಿಸದಂತೆ ಸಂದೇಶ.


3. ಮುಚ್ಚಿರುವ ಕೊವೀಡ್ ಕೇರ್ ಸೆಂಟರ್ (Covid Care Center) ಗಳನ್ನು ಮತ್ತೆ ತೆರೆಯಲು ಸೂಚನೆ.


ಇದನ್ನೂ ಓದಿ- Night Curfew: ದೇಶದಲ್ಲಿ 200ರ ಗಡಿ ದಾಟಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ


4. ಆಸ್ಪತ್ರೆಗಳು, ಐಸಿಯು ಬೆಡ್, ಆ್ಯಂಬುಲೆನ್ಸ್, ಆಕ್ಸಿಜನ್ ಸಿಲಿಂಡರ್ ಗಳು, ಆರೈಕೆ ಕೇಂದ್ರಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಆದೇಶ.


5. ಬಿಬಿಎಂಪಿ ವ್ಯಾಪ್ತಿಯ ಪ್ರತಿಯೊಂದು ವಲಯದಲ್ಲಿ 10ಕ್ಕೂ ಹೆಚ್ಚು ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲು ಸೂಚನೆ.  ಈ ಹಿಂದೆ ಆ್ಯಂಬುಲೆನ್ಸ್ ಕೊರತೆಯಿಂದ ರೋಗಿಗಳು ನರಳಾಡಿದ್ದರು.


6. ಸೋಂಕು ಕಂಡುಬಂದರೆ ತಕ್ಷಣ ಸೋಂಕಿತನ ಮನೆ ಸೀಲ್ ಡೌನ್. ಅಕ್ಕಪಕ್ಕದ 100 ಮೀಟರ್ ಜಾಗದಲ್ಲಿ ಜನರ ಓಡಾಟ ನಿಷಿದ್ಧ.


7. 3ಕ್ಕಿಂತ ಹೆಚ್ಚು 'ಒಮಿಕ್ರಾನ್' (Omicron) ಕೇಸ್ ಒಂದೇ ಮನೆ ಅಥವಾ ಒಂದೇ  ಅಪಾರ್ಟ್ಮೆಂಟ್ ನಲ್ಲಿ ಕಾಣಿಸಿಕೊಂಡರೆ ಆ ರಸ್ತೆಗೆ ರಸ್ತೆಯೇ ಬಂದ್.


8. ಸಿಬ್ಬಂದಿ ಕೊರತೆ ಎದುರಾದರೆ ಆಶಾ ಕಾರ್ಯಕರ್ತೆಯರು ಹಾಗೂ ಸ್ಟಾಫ್ ನರ್ಸಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲು ಸೂಚನೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.