Lockdown Return: ಓಮಿಕ್ರಾನ್ ಡೆಲ್ಟಾಕ್ಕಿಂತ ಹೆಚ್ಚು ಅಪಾಯಕಾರಿ ಎಂದ ವಿಜ್ಞಾನಿಗಳು; ಮತ್ತೆ ಲಾಕ್‌ಡೌನ್‌ಗೆ ನಡೆದಿದೆಯೇ ಸಿದ್ಧತೆ

Lockdown Return: ಭಾರತದಲ್ಲಿಯೂ ಓಮಿಕ್ರಾನ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಇಲ್ಲಿಯವರೆಗೆ 220 ಸೋಂಕಿತ ರೋಗಿಗಳು ಪತ್ತೆಯಾಗಿದ್ದಾರೆ. ಡೆಲ್ಟಾಕ್ಕಿಂತ ಓಮಿಕ್ರಾನ್ ಅಪಾಯಕಾರಿ, ಮತ್ತೆ ಲಾಕ್‌ಡೌನ್‌ಗೆ ಸಿದ್ಧರಾಗಿರಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

Written by - Yashaswini V | Last Updated : Dec 22, 2021, 08:35 AM IST
  • ಭಾರತದಲ್ಲಿ ಕರೋನಾವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್ ಹೆಚ್ಚಳ
  • ಓಮಿಕ್ರಾನ್ ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚು ಅಪಾಯಕಾರಿ ಎಂದು ವಿಜ್ಞಾನಿಗಳ ಎಚ್ಚರಿಕೆ
  • ಮತ್ತೆ ಜಾರಿಯಾಗಲಿದೆಯೇ ಲಾಕ್‌ಡೌನ್‌?
Lockdown Return: ಓಮಿಕ್ರಾನ್ ಡೆಲ್ಟಾಕ್ಕಿಂತ ಹೆಚ್ಚು ಅಪಾಯಕಾರಿ ಎಂದ ವಿಜ್ಞಾನಿಗಳು; ಮತ್ತೆ ಲಾಕ್‌ಡೌನ್‌ಗೆ ನಡೆದಿದೆಯೇ ಸಿದ್ಧತೆ title=
Will lockdown return in india

Lockdown Return: ಭಾರತದಲ್ಲಿಯೂ, ಕರೋನಾವೈರಸ್‌ನ ಹೊಸ ರೂಪಾಂತರವಾದ ಓಮಿಕ್ರಾನ್ (Omicron) ಪ್ರಕರಣಗಳು ಹೆಚ್ಚುತ್ತಿವೆ. ಇಲ್ಲಿಯವರೆಗೆ, 14 ರಾಜ್ಯಗಳಲ್ಲಿ 220 ಓಮಿಕ್ರಾನ್ ರೋಗಿಗಳು ಪತ್ತೆಯಾಗಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು, ಕರೋನಾದ ಹೊಸ ರೂಪಾಂತರವಾದ ಓಮಿಕ್ರಾನ್ ಹಿಂದಿನ ಡೆಲ್ಟಾಕ್ಕಿಂತ ಮೂರು ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ವೇಗವಾಗಿ ಹರಡುತ್ತಿದೆ ಎಂದು ಕೇಂದ್ರ ಸರ್ಕಾರ (Central Govt) ಹೇಳಿದೆ. ಈ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳು ತಮ್ಮ ಕಡೆಯಿಂದ ಕಟ್ಟೆಚ್ಚರ ವಹಿಸಿ ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಬೇಕು. ಒಮಿಕ್ರಾನ್ ಅನ್ನು ನಿಯಂತ್ರಿಸುವುದು ಅವಶ್ಯಕ ಮತ್ತು ಇದಕ್ಕಾಗಿ ಎಲ್ಲಾ ಕ್ರಮಗಳನ್ನು ಈಗ ಪರಿಗಣಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ. 

ಈ ಕುರಿತಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಈ ಹೊಸ ರೂಪಾಂತರದ ಕೊರೊನಾ (Coronavirus new Variant Omicron) ಬಗ್ಗೆ ಎಚ್ಚರಿಕೆ ವಹಿಸಬೇಕು ಮತ್ತು ಅಗತ್ಯವಿದ್ದರೆ ಯಾವುದೇ ರೀತಿಯ ಕರ್ಫ್ಯೂ ವಿಧಿಸಬಹುದು. ಸಂಪೂರ್ಣವಾಗಿ ತುರ್ತು ಪರಿಸ್ಥಿತಿ ಎದುರಿಸಲು ಸಿದ್ಧರಾಗಿರಿ. ಕಡಿಮೆ ಪ್ರಕರಣಗಳು ದಾಖಲಾಗಿದ್ದರೂ, ಅವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು ಮತ್ತು ಸ್ಥಳೀಯ ಮಟ್ಟ ಮತ್ತು ಜಿಲ್ಲಾ ಮಟ್ಟದಲ್ಲಿ ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. 

ಇದನ್ನೂ ಓದಿ -  Omicron: ಯುರೋಪ್ ನಲ್ಲಿ ಕರೋನಾ 'ಚಂಡಮಾರುತ', ಕುಸಿಯಲಿದೆ ಆರೋಗ್ಯ ಕ್ಷೇತ್ರ; WHO ಎಚ್ಚರಿಕೆ

ಓಮಿಕ್ರಾನ್ ಡೆಲ್ಟಾಗಿಂತ ಮೂರು ಪಟ್ಟು ಹೆಚ್ಚು ಅಪಾಯಕಾರಿ ಎಂದು ವಿಜ್ಞಾನಿಗಳ ಎಚ್ಚರಿಕೆ:
ಪ್ರಸ್ತುತ ವೈಜ್ಞಾನಿಕ ಸತ್ಯಗಳ ಆಧಾರದ ಮೇಲೆ ಓಮಿಕ್ರಾನ್ ಡೆಲ್ಟಾಕ್ಕಿಂತ ಮೂರು ಪಟ್ಟು ಹೆಚ್ಚು ಸಾಂಕ್ರಾಮಿಕ ಎಂದು ಹೇಳಬಹುದು. ಇದರ ಹೊರತಾಗಿ, ಡೆಲ್ಟಾ (Delta) ರೂಪಾಂತರಗಳು ಇನ್ನೂ ಕಾಳಜಿಯ ವಿಷಯವಾಗಿ ಉಳಿದಿವೆ ಮತ್ತು ಅವು ದೇಶದ ವಿವಿಧ ಭಾಗಗಳಲ್ಲಿವೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ದೂರದೃಷ್ಟಿ, ದತ್ತಾಂಶಗಳ ತ್ವರಿತ ಮತ್ತು ನಿಖರ ವಿಶ್ಲೇಷಣೆ, ಸ್ಥಳದ ತುರ್ತುಸ್ಥಿತಿಯನ್ನು ಅರ್ಥಮಾಡಿಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಕಟ್ಟುನಿಟ್ಟಾದ ಮತ್ತು ತ್ವರಿತ ಧಾರಕ ವಲಯಗಳನ್ನು ರಚಿಸುವ ಕೆಲಸ ಸ್ಥಳೀಯ ಮತ್ತು ಜಿಲ್ಲಾ ಮಟ್ಟದಲ್ಲಿ ಅಗತ್ಯವಾಗಿದೆ ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಹೇಳಿದ್ದಾರೆ. 

ಆಸ್ಪತ್ರೆಗಳಲ್ಲಿ ಸಂಪೂರ್ಣ ಸನ್ನದ್ಧತೆ ಕಾಯ್ದುಕೊಳ್ಳುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ:
ಇದಲ್ಲದೆ ಕರೋನಾವೈರಸ್ ಹೊಸ ರೂಪಾಂತರ ಒಮಿಕ್ರಾನ್ (Omicron) ಹೆಚ್ಚು ಹರಡದಂತೆ ನಿಗಾವಹಿಸಲು ಈಗಿನಿಂದಲೇ ಜಿಲ್ಲಾ ಮಟ್ಟದಲ್ಲಿ ಕಂಟೈನ್‌ಮೆಂಟ್ ಝೋನ್‌ನ ಗಾತ್ರ ಮತ್ತು ಅದರ ಕಟ್ಟುನಿಟ್ಟಿನ ಅನುಷ್ಠಾನವನ್ನು ಯೋಜಿಸಿ, ಸ್ಥಳೀಯ ಮಟ್ಟದಲ್ಲಿ ಅದನ್ನು ನಿಲ್ಲಿಸುವುದನ್ನು ಖಚಿತಪಡಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.

ಇದನ್ನೂ ಓದಿ-  Night Curfew: ದೇಶದಲ್ಲಿ 200ರ ಗಡಿ ದಾಟಿದ ಒಮಿಕ್ರಾನ್ ಸೋಂಕಿತರ ಸಂಖ್ಯೆ ; ರಾತ್ರಿ ಕರ್ಫ್ಯೂ ಹೇರಲು ರಾಜ್ಯಗಳಿಗೆ ಕೇಂದ್ರದ ಅನುಮತಿ

ಕಳೆದ ವಾರದಲ್ಲಿ ಪರೀಕ್ಷಾ ಪಾಸಿಟಿವಿಟಿ ದರ 10 ಅಥವಾ ಅದಕ್ಕಿಂತ ಹೆಚ್ಚು ದಾಖಲಾಗಿದೆಯೇ ಮತ್ತು ಆಸ್ಪತ್ರೆಗಳಲ್ಲಿನ ರೋಗಿಗಳ ಸಂಖ್ಯೆ ಒಟ್ಟು ಹಾಸಿಗೆಗಳ ಸಂಖ್ಯೆಗಿಂತ 40 ಪ್ರತಿಶತ ಅಥವಾ ಅದಕ್ಕಿಂತ ಹೆಚ್ಚಿದೆಯೇ? ಜನರಿಗೆ ಆಮ್ಲಜನಕದ ಬೆಂಬಲದ ಅಗತ್ಯವಿದೆಯೇ ಅಥವಾ ICU ಬೆಡ್‌ಗಳ ಅವಶ್ಯಕತೆ ಇವೆಲ್ಲವುಗಳ ಬಗ್ಗೆ ನಿಗಾ ಇಡುವಂತೆ ಕೇಂದ್ರವು ರಾಜ್ಯಗಳಿಗೆ ಸಲಹೆ ನೀಡಿದೆ. 

ಇದಲ್ಲದೆ, ನಿಯಂತ್ರಣ ಪ್ರಕ್ರಿಯೆ, ಕರೋನಾ ತನಿಖೆ, ಸಂಪರ್ಕ ಪತ್ತೆ, ಕಣ್ಗಾವಲು, ನಿರ್ಣಾಯಕ ಸಂದರ್ಭಗಳಲ್ಲಿ ಆರೋಗ್ಯ ವ್ಯವಸ್ಥೆಯ ನಿರ್ವಹಣೆ, ಕರೋನಾ ಲಸಿಕೆ ಮತ್ತು ಕರೋನಾ ತಡೆಗಟ್ಟುವಿಕೆಗೆ ಸೂಕ್ತವಾದ ನಡವಳಿಕೆಯ ಮಾನದಂಡಗಳನ್ನು ಅನುಸರಿಸಲು ರಾಜ್ಯಗಳಿಗೆ ಸೂಚಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News