ಬೆಂಗಳೂರು: ಕರ್ನಾಟಕ ರಾಜ್ಯಾದ್ಯಂತ ಇದೇ ಡಿಸೆಂಬರ್ 9, 2023ರಂದು  ಬೃಹತ್ ರಾಷ್ಟ್ರೀಯ  ಲೋಕ್ ಅದಾಲತ್ ಅನ್ನು  ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಕಾರ್ಯನಿರ್ವಾಹಕ ಅಧ್ಯಕ್ಷರಾದ ಪಿ.ಎಸ್.ದಿನೇಶ್ ಕುಮಾರ್ ತಿಳಿಸಿದರುಅವರು ಇಂದು ಉಚ್ಚನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.


COMMERCIAL BREAK
SCROLL TO CONTINUE READING

ಪ್ರತಿ ತಾಲ್ಲೂಕು, ಜಿಲ್ಲಾ ಮಟ್ಟ ಹಾಗೂ ಉಚ್ಛನ್ಯಾಯಾಲಯದ 3 ಪೀಠಗಳಲ್ಲಿ,  ಲೋಕ್ ಅದಾಲತ್ ನ ಪೀಠಗಳನ್ನು ರಚಿಸಿ ತ್ವರಿತವಾಗಿ ನ್ಯಾಯ ಒದಗಿಸಲಾಗುತ್ತದೆ. 'ಸರ್ವರಿಗೂ ನ್ಯಾಯ" ಇದು ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶವಾಗಿದ್ದು, ಜನತಾ ನ್ಯಾಯಾಲಯ/ ಲೋಕ್ ಅದಾಲತ್ ಮೂಲಕ ಜನರಿಗೆ ತ್ವರಿತ ಮತ್ತು ಸಕ್ಷಮ ನ್ಯಾಯ ಒದಗಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ ಎಂದರು.


ಇದನ್ನೂ ಓದಿ: ಕೇಂದ್ರದಿಂದ ರೈತರಿಗೆ ಬರ ಪರಿಹಾರ: ಆರ್.ಅಶೋಕ್ ಹೇಳಿದ್ದೇನು?


ದಿನಾಂಕ 1/12/2023 ರವರೆಗೆ ರಾಜ್ಯದ  ಎಲ್ಲಾ ಜಿಲ್ಲಾ ನ್ಯಾಯಾಲಯಗಳಲ್ಲಿನ ಅಂಕಿ ಅಂಶಗಳ ಪ್ರಕಾರ 19,93,799 ಪ್ರಕರಣಗಳು ಬಾಕಿ ಇದ್ದು, ಅವಗಳ ಪೈಕಿ 2,60,000 ಕ್ಕೂ ಹೆಚ್ಚು ಪ್ರಕರಣಗಳನ್ನು ಈ ಲೋಕ್ ಅದಾಲತ್ ನಲ್ಲಿ ಇತ್ಯರ್ಥಪಡಿಸುವ  ಗುರಿ ಹೊಂದಲಾಗಿದೆ. ಸದರಿ ಲೋಕ್ ಅದಾಲತ್ ನಲ್ಲಿ ವಿಶೇಷವಾಗಿ ಮೋಟಾರು ಅಪಘಾತ ಪರಿಹಾರ,ಚೆಕ್ಕು ಅಮಾನ್ಯ, ಹಣಕಾಸು ಸಂಸ್ಥೆಗೆ ಸಂಬಂಧಿಸಿದ ಪ್ರಕರಣಗಳು, ಆಸ್ತಿ ವಿಭಾಗದ ದಾವೆಗಳು,ವೈವಾಹಿಕ/ ಕುಟುಂಬ ನ್ಯಾಯಾಲಯ ಪ್ರಕರಣಗಳನ್ನು ಶೀಘ್ರವಾಗಿ ವಿಲೇವಾರಿಗೊಳಿಸಲು ಕ್ರಮ ಕೈಗೊಳ್ಳಲಾಗುವುದೆಂದರು.


ಇದನ್ನೂ ಓದಿ: ಶಿವಮೊಗ್ಗದ ವಿದ್ಯಾನಗರ ಫ್ಲೈಓವರ್ ಉದ್ಘಾಟನೆಗೆ ನಿತಿನ್ ಗಡ್ಕರಿ!


ಯಾವುದೇ ಖರ್ಚು ಇಲ್ಲದೆ ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಬಹುದಾದ ಈ ಲೋಕ್ ಅದಾಲತ್ ನ  ಉಪಯೋಗವನ್ನು  ಸಾರ್ವಜನಿಕರು ಹಾಗೂ ಕಕ್ಷಿದಾರರು ಪಡೆದುಕೊಳ್ಳಬೇಕೆಂದು ತಿಳಿಸಿದರು.ಕಕ್ಷಿದಾರರು  ಈ ಸಂಬಂಧ ತಾಲ್ಲೂಕು ಕಾನೂನು ಸೇವಾ ಸಮಿತಿ‌ ಮತ್ತು ಜಿಲ್ಲಾ ಕಾನೂನು‌ ಸೇವೆಗಳ ಪ್ರಾಧಿಕಾರಗಳನ್ನು ಈ ಸಂಬಂಧ ಸಂಪರ್ಕಿಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಬಹುದಾಗಿದೆ  ಎಂದು ಅವರು ತಿಳಿಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.