ಬೆಂಗಳೂರು: ಊಟದ ವಿರಾಮ ನಂತರ ವಿಧಾನಸಭೆ (Assembly Session) ಅಧಿವೇಶನ ಪ್ರಾರಂಭಿಕ ಸಂದರ್ಭದಲ್ಲಿ, ಮಾಜಿ ಸಿಎಂ ಬಂಗಾರಪ್ಪ, ಕಾಗೋಡು ತಿಮ್ಮಪ್ಪ, ಎಚ್.ಡಿ.ದೇವೇಗೌಡರು, ಶಾಂತವೇರಿ ಗೋಪಾಲಗೌಡ, ಜೆ.ಎಚ್.ಪಟೇಲ್ ಅವರನ್ನು ನೀವು ಸದನದಲ್ಲಿ ಮಾತನಾಡುವಾಗ ಕೋಟ್ ಮಾಡ್ತೀರಿ. ನಾನು ಕೂಡಾ ಕೆಲವರ ಚರ್ಚೆಯನ್ನು ನೋಡಿಕೊಂಡಿದ್ದೆ. ಅಂತವರ ಪಂಕ್ತಿಯಲ್ಲಿ ನೀವು ಬರಬೇಕು. ನಿಮ್ಮ ಚಿಂತನೆಗಳು ಇಂಥವರ ಪಂಕ್ತಿಗೆ ಹೋಗಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಸೋಮಣ್ಣ (Somanna) ಹೇಳಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: PUC Exam time table: ದ್ವಿತೀಯ ಪಿ.ಯು ಮುಖ್ಯ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಪ್ರಕಟ


ಇದಕ್ಕೆ ಸಿದ್ದರಾಮಯ್ಯ (Siddaramaiah) ಸಿಡಿಮಿಡಿಗೊಂಡು, ನಾನು ನನ್ನನ್ನು ಯಾರಿಗೂ ಹೋಲಿಕೆ ಮಾಡಲು ಹೋಗಲ್ಲ,ಸಿದ್ಧರಾಮಯ್ಯ ಸಿದ್ಧರಾಮಯ್ಯನೇ.ಗಾಂಧಿ ಅಂಬೇಡ್ಕರ್ ಗೆ ಹೋಲಿಕೆ ಮಾಡಲು‌ ಆಗುತ್ತಾ? ಜೆಪಿ, ಲೋಹಿಯಾಗೆ ಕಂಪೇರ್ ಮಾಡಲು ಆಗುತ್ತಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.


ಇದೆ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನೀವು ಹೇಳೋದು ಗೊತ್ತಾಯಿತು. ಅಂಥವರ ಮಟ್ಟಕ್ಕೆ ಬಂದಿಲ್ಲ. ಅವರ ಮಟ್ಟಕ್ಕೆ ಬರಬೇಕು ಎಂದು. ಇವೆಲ್ಲವೂ ನನಗೆ ಅರ್ಥ ಆಗಲ್ವಾ? ಎಂದ ಸಿದ್ದರಾಮಯ್ಯ, ಸೋಮಣ್ಣ ಸರ್ಟಿಫಿಕೇಟ್ ಕೊಡುವ ಆಗತ್ಯ ಇಲ್ಲ, ನಿಮ್ಮಿಂದ ಸರ್ಟಿಫಿಕೇಟ್ ಬೇಡ ನನಗೆ. ನಾನು ಸಿದ್ದರಾಮಯ್ಯ, ನೀವೇನು ಹೇಳೋದು. ಕೂತ್ಕೋ ಎಂದು ಗದರಿದರು.


ನಾನು ಗೋಪಾಲಗೌಡ, ದೇವರಾಜ ಅರಸ್ (Devaraj Aras) ಅಲ್ಲ, ಆ ಕಾಲ ಬೇರೆ ಈ ಕಾಲ ಬೇರೆ. ಇವತ್ತಿನ ಚುನಾವಣಾ ವ್ಯವಸ್ಥೆಗೆ ಅವತ್ತಿನ ವ್ಯವಸ್ಥೆಗೆ ಸಾಕಷ್ಟು ವ್ಯತ್ಯಾಸ ಇದೆ. ಆತ್ಮವಂಚನೆ ಮಾಡಿ ರಾಜಕೀಯ ಮಾಡಬಾರದು ಎಂದರು. 


ಸದನದಲ್ಲಿ ಹೇಗೆ ಮಾತನಾಡಬೇಕು ವರ್ತಿಸಬೇಕು ಎಂದು ಗೊತ್ತಿದೆ. ಇದು ಮೊದಲ ಬಾರಿಯಲ್ಲ‌ ಸೋಮಣ್ಣ ಈ‌ ರೀತಿ ಹೇಳುವುದು. ಚುನಾವಣೆಯನ್ನು ಪ್ರಾಮಾಣಿಕವಾಗಿ ಎದುರಿಸೋಕೆ ಆಗುತ್ತಾ? ಆತ್ಮವಂಚನೆ ಮಾಡ್ಕೋಬಾರದು ಎಂದು ಕೋಪದಿಂದಲೇ ಸೋಮಣ್ಣಗೆ ಸಿದ್ದರಾಮಯ್ಯ ಟಾಂಗ್ ನೀಡಿದರು.


ಇದನ್ನೂ ಓದಿ: ಆರ್‌ಸೆಟಿ: ಉಚಿತ ತರಬೇತಿಗೆ ಅರ್ಜಿ ಆಹ್ವಾನ


ಮಧ್ಯ ಪ್ರವೇಶ ಮಾಡಿದ ಸಚಿವ ಆರ್.ಅಶೋಕ್ (R Ashok) ಕೋಪ ಮಾಡಬೇಡಿ. ಬಿಟ್ಟು ಬಿಡಿ ಸರ್ ಎಂದು ಸಮಾಧಾನ ಮಾಡಿದರು. 


ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ಮಧ್ಯಪ್ರವೇಶಿಸಿ, ನೀವು ಹೇಳುವುದರಲ್ಲಿ ಸತ್ಯ ಇದೆ. ಚುನಾವಣೆ ಯಾವ ಮಟ್ಟದಲ್ಲಿ ಹೋಗಿದೆ ಎಂಬುದು ಶೋಭೆ ತರುವಂತಿಲ್ಲ. ಹಿಂದಿನ ನೆನಪುಗಳು ಮಾತ್ರ ಇದೆ. ಅವರು ಮಟ್ಟಕ್ಕೆ ಇದ್ದರು ಎಂದು. ಅವುಗಳನ್ನು ನೆನಪಿಸಿಕೊಳ್ಳದೆ ಇದ್ದರೆ ಏನಾಗಬಹುದು. ವ್ಯವಸ್ಥೆ ಪಾತಾಳಕ್ಕೆ ತಲುಪುವ ಮೊದಲು ಎಲ್ಲರೂ ಚಿಂತನೆ ಮಾಡಬೇಕಾಗುತ್ತದೆ. ಜಗತ್ತಿನ ಬದಲಾವಣೆ ಭ್ರಮೆ ಬೇಡ. ಸ್ಬಲ್ಪ ಮಟ್ಟಿಗೆ ಬದಲಾವಣೆ ಮಾಡುವ ಪ್ರಯತ್ನ ಮಾಡಬೇಕು ಎಂದರು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.