Siddaramaiah : `PSI 5ನೇ ರ‍್ಯಾಂಕ್ ದರ್ಶನ್, ನಾಗೇಶ್ ಗೌಡ ಅಶ್ವತ್ಥ ನಾರಾಯಣ್ ಸಂಬಂಧಿಕರು`
ದರ್ಶನ್ ಗೌಡ ಮೊದಲ ಪೇಪರ್ ನಲ್ಲಿ 50 ಕ್ಕೆ 19 ಅಂಕಗಳು ಬಂದಿದೆ. ಎರಡನೆ ಪೇಪರ್ ನಲ್ಲಿ 150 ಕ್ಕೆ 141 ಅಂಕಗಳು ಬಂದಿವೆ. ಬರೆಯುವುದರಲ್ಲಿ ದಡ್ಡ, ಬಹು ಆಯ್ಕೆಯಲ್ಲಿ ಜಾಣ ಆಗಿದ್ದೇಗೆ? ನಾಗೇಶ್ ಗೌಡ 150 ಅಂಕಕ್ಕೆ 137.87 ಗಳಿಸಿದ್ದಾನೆ ಎಂದು ತಿಳಿಸಿದರು.
ಬೆಂಗಳೂರು : ದರ್ಶನ್ ಗೌಡ 5ನೇ ರ‍್ಯಾಂಕ್ ಮತ್ತು ನಾಗೇಶ್ ಗೌಡ ಇಬ್ಬರು ಸಚಿವ ಅಶ್ವತ್ಥ ನಾರಾಯಣ್ ಅವರ ಸಂಬಂಧಿಕರು ಎಂದು ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ದರ್ಶನ್ ಗೌಡ ಮೊದಲ ಪೇಪರ್ ನಲ್ಲಿ 50 ಕ್ಕೆ 19 ಅಂಕಗಳು ಬಂದಿದೆ. ಎರಡನೆ ಪೇಪರ್ ನಲ್ಲಿ 150 ಕ್ಕೆ 141 ಅಂಕಗಳು ಬಂದಿವೆ. ಬರೆಯುವುದರಲ್ಲಿ ದಡ್ಡ, ಬಹು ಆಯ್ಕೆಯಲ್ಲಿ ಜಾಣ ಆಗಿದ್ದೇಗೆ? ನಾಗೇಶ್ ಗೌಡ 150 ಅಂಕಕ್ಕೆ 137.87 ಗಳಿಸಿದ್ದಾನೆ ಎಂದು ತಿಳಿಸಿದರು.
ಇದನ್ನೂ ಓದಿ : 'ಪೂನಾದಲ್ಲಿ ದಿವ್ಯಾ ಹಾಗರಗಿಗೆ ಆಶ್ರಯ ಕೊಟ್ಟಿರೋದು ಕಾಂಗ್ರೆಸ್ ನವರೇ'
ದರ್ಶನ್ ಗೌಡ, ನಾಗೇಶ್ ಗೌಡರನ್ನು ವಿಚಾರಣೆಗೆ ಕರೆದು ಬಿಟ್ಟು ಕಳುಹಿಸಿದ್ದಾರೆ.ಏಕೆ ಅವರ ಹೇಳಿಕೆ ಏಕೆ ಪಡೆದಿಲ್ಲ.ಉಳಿದವರನ್ನು ಅರೆಸ್ಟ್ ಮಾಡಿದ್ದಾರೆ.ಇವರನ್ನು ಏಕೆ ಬಿಟ್ಟು ಕಳುಹಿಸಿದ್ದೇಕೆ? ಎಂದು ಪ್ರಶ್ನಿಸಿದ್ದಾರೆ.
ಪಿಎಸ್ಐ ಪ್ರಕರಣದಲ್ಲಿ 300 ಕೋಟಿ ರೂ. ಅಕ್ರಮ ನಡೆದಿದೆ ಎಂಬ ಮಾಹಿತಿ ಇದೆ. ಇದನ್ನು ಸಿಐಡಿಯಿಂದ ತನಿಖೆ ನಡೆಸುತ್ತಿದ್ದಾರೆ. ಸಿಐಡಿಯಿಂದ ನ್ಯಾಯ ಸಿಗುವುದಿಲ್ಲ. ನ್ಯಾಯಾಂಗ ತನಿಖೆಗೆ ಒಪ್ಪಿಸಿಬೇಕು. ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಿ ಎಂದು ಒತ್ತಾಯಿಸಿದ್ದಾರೆ.
ಜನ ಸಾಮಾನ್ಯರ ಪೀಡಕ ಸರ್ಕಾರ, ಜನರ ಸುಲಿಗೆ ಸರ್ಕಾರ ಎಂದು ಕರೆಯಬೇಕು. ನರೇಂದ್ರ ಮೋದಿ ನಾಟಕವಾಡುವುದನ್ನು ಬಿಟ್ಟು ಕೂಡಲೆ ತನಿಖೆ ನಡೆಸಬೇಕು. ಜನರು ಚಿ ಥೂ ಅಂತ ಉಗಿಯುತ್ತಿದ್ದಾರೆ. ಜನಸಾಮಾನ್ಯರ ಪೀಡಕ ಸರ್ಕಾರ ಇದು. ಮೋದಿ ಇನ್ನೂ ಮುಂದೆ ನಾಟಕ ಮಾಡಬಾರದು. ಕೂಡಲೆ ಈ ಪ್ರಕರಣದ ತನಿಖೆ ಆಗಬೇಕು ಎಡನು ಪಿಎಂ ಮೋದಿಗೆ ಒತ್ತಾಯಿಸಿದರು.
ಇದನ್ನೂ ಓದಿ : 'ಸರ್ಕಾರದ ಪ್ರತಿಯೊಂದು ಯೋಜನೆಯಲ್ಲಿ ಬಿಜೆಪಿ ಮಂತ್ರಿಗಳಿಗೆ ಕಮಿಷನ್ ಹೋಗ್ತಾ ಇದೆ'
ಏನಾದರೂ ಇದ್ದರೆ ತಾನೇ ನೊಟೀಸ್ ಕೊಡೋದು. ಏನೂ ಇಲ್ಲದಿದ್ದರೆ ನೊಟೀಸ್ ಕೊಡಲು ಬರಲ್ಲ. ಕೊಟ್ಟ ಮೇಲೆ ಅವರನ್ನ ವಿಚಾರಣೆ ಮಾಡಲಿಲ್ಲವೇಕೆ? ಅವರನ್ನ ಬಿಟ್ಟುಕಳಿಸಿದ್ದು ಏಕೆ 300 ಕೋಟಿ ಅವ್ಯವಹಾರ ನಡೆದಿದೆ ಎಂಬ ಮಾತಿದೆ. ಇದಷ್ಟೇ ಅಲ್ಲ ಬೇರೆ ನೇಮಕಾತಿಯಲ್ಲೂ ಹಗರಣವಾಗಿದೆ. ಇದನ್ನ ಸಿಐಡಿಯಿಂದ ತನಿಖೆ ಮಾಡಿಸ್ತಿದ್ದಾರೆ. ಸರ್ಕಾರ, ಮಂತ್ರಿಗಳು, ಅಧಿಕಾರಿಗಳುಶಾಮೀಲಾಗಿದ್ದಾರೆ. ಹಾಗಾಗಿ ನ್ಯಾಯಯುತ ತನಿಖೆ ಸಾಧ್ಯವಿಲ್ಲ.ಇದಕ್ಕಾಗಿ, ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ತನಿಖೆಯಾಗಬೇಕು.
ಆಗ ಮಾತ್ರ ನ್ಯಾಯ ಸಿಗಲು ಸಾಧ್ಯ ಎಂದು ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.