ತುಮಕೂರು : ಸಿದ್ದರಾಮಯ್ಯ ಅವರಿಗೆ ಇಷ್ಯುಗಳೇ ಇಲ್ಲಾ.. ಅವರ ಅನೇಕ ಮುಖಂಡರು ನನ್ನ ಹತ್ರ ಆ ವಿಡಿಯೋ ಇದೆ, ಈ ವಿಡಿಯೋ ಇದೆ ಅಂತಾ ಹೇಳಿದ್ರು. ಆದರೇ ಅವರು ಯಾರು ತನಿಖಾಧಿಕಾರಿಗಳಿಗೆ ಅದನ್ನ ಒಪ್ಪಿಸುತ್ತಿಲ್ಲ. ಅದರ ಬದಲಾಗಿ, ಯಾರ ಯಾರದ್ದೂ ಚಾರಿತ್ರ್ಯ ಹರಣ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಆರಗ ಜ್ಞಾನೇಂದ್ರ, ಇವರಿಗೆ ಪ್ರಾಮಾಣಿಕವಾದ ತನಿಖೆಯಲ್ಲಿ ನಂಬಿಕೆ ಇಲ್ಲಾ. ಇವರ ದೊಡ್ಡ ದೊಡ್ಡ ಮುಖಂಡರು ಅದರಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಅದರಲ್ಲಿ ಭಾಗಿಯಾಗಿದ್ದಾರೆ. ಪೂನಾದಲ್ಲಿ ದಿವ್ಯಾ ಹಾಗರಗಿ ಅವರಿಗೆ ಆಶ್ರಯ ಕೊಟ್ಟಿರೋದು ಕಾಂಗ್ರೆಸ್ ನವರೇ.ಇದರ ಹಿಂದೆ ಕಾಂಗ್ರೆಸ್ ನವರು ಇದ್ದಾರೆ. ನಾವು ಯಾವುದೇ ಪಕ್ಷ ಪಂಗಡ ನೋಡದೆಯೇ, ಮೂಗು ತೂರಿಸದೇನೆ ತನಿಖೆ ಮಾಡಲು ಫ್ರೀಯಾಗಿ ಬಿಟ್ಟಿದ್ದೇವೆ. ಯಾರ ದಾಖಲಾತಿ ಸಿಗುತ್ತೋ ಅಂತವರನ್ನ ಅರೆಸ್ಟ್ ಮಾಡ್ತಿದ್ದೇವೆ. ಸಿದ್ದರಾಮಯ್ಯ ನವರ ಕಾಲದ್ದೇ ಸಿಓಡಿ, ಈಗ ಅದರ ಮೇಲೆ ನಂಬಿಕೆ ಇಲ್ಲಾ ಅಂದರೆ ಹೇಗೆ? ನಂಬಿಕೆ ಇಲ್ಲಾ ಅಂದರೇ ಸಿಓಡಿನ ಆಗಲೇ ವಿಸರ್ಜನೆ ಮಾಡಬೇಕಿತ್ತು ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಅಮೃತ ನಗರೋತ್ಥಾನ : 15 ಜಿಲ್ಲೆಗಳ 1519.43 ಕೋಟಿ ರೂ.ಗಳ ಕ್ರಿಯಾ ಯೋಜನೆಗೆ ಅನುಮೋದನೆ
ಮುಂದುವರೆದು ಮಾತನಾಡಿದ ಅವರು, ಲೋಕಾಯುಕ್ತವನ್ನ ಕತ್ತು ಹಿಸುಕಿದವರು ಯಾರು? ಪ್ರಭಲವಾಗಿದ್ದ ಲೋಕಾಯುಕ್ತವನ್ನ ಕಾಂಗ್ರೆಸ್ ಕಾಲದಲ್ಲಿ ಕತ್ತುಹಿಸುಕಲಾಯಿತು. ಆಮೇಲೆ ಅವರೇ ಎಸಿಬಿ ಮಾಡಿದರು ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.