ವೈದ್ಯಕೀಯ ಸೇವಾ ನ್ಯೂನತೆ ಎಸಗಿದ್ದಕ್ಕೆ ಪರಿಹಾರ ಕೊಡಲು ಕಾಯಂ ಜನತಾ ನ್ಯಾಯಾಲಯದ ಆದೇಶ
ಚಂದ್ರಕಾಂತ ಬಿ. ಮಟ್ಟಿ ಹಾಗೂ ಕವಿತಾ ಚಂದ್ರಕಾಂತ ಮಟ್ಟಿ ಇವರು ಎದರುದಾರರ ಆಸ್ಪತ್ರೆಯಲ್ಲಿ ಮಹಾತ್ಮ ಗಾಂಧಿ ಮಲ್ಟಿ ಸ್ಪೇಸಾಲಿಟಿ ಆಸ್ಪತ್ರೆ ಆ್ಯಂಡ್ ರಿಸರ್ಚ ಸೆಂಟರ್, ಗದಗದಲ್ಲಿ ತಮ್ಮ ಮಗ ಕುಮಾರ ಪ್ರಾಂಜಲ ಹಾಗೂ ಕುಮಾರಿ ವಚನ ರವರಿಗೆ ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ.
ಗದಗ: ಚಂದ್ರಕಾಂತ ಬಿ. ಮಟ್ಟಿ ಹಾಗೂ ಕವಿತಾ ಚಂದ್ರಕಾಂತ ಮಟ್ಟಿ ಇವರು ಎದರುದಾರರ ಆಸ್ಪತ್ರೆಯಲ್ಲಿ ಮಹಾತ್ಮ ಗಾಂಧಿ ಮಲ್ಟಿ ಸ್ಪೇಸಾಲಿಟಿ ಆಸ್ಪತ್ರೆ ಆ್ಯಂಡ್ ರಿಸರ್ಚ ಸೆಂಟರ್, ಗದಗದಲ್ಲಿ ತಮ್ಮ ಮಗ ಕುಮಾರ ಪ್ರಾಂಜಲ ಹಾಗೂ ಕುಮಾರಿ ವಚನ ರವರಿಗೆ ಚಿಕಿತ್ಸೆಗಾಗಿ ಒಳರೋಗಿಯಾಗಿ ದಾಖಲಿಸಿರುತ್ತಾರೆ.
ಇದನ್ನೂ ಓದಿ: ಕಾಂಗ್ರೆಸ್ ಒಂದೊಂದರಂತೆ ಜನವಿರೋಧಿ ಗ್ಯಾರಂಟಿಗಳನ್ನು ಜಾರಿಗೆ ತರುತ್ತಿದೆ: ಬಿಜೆಪಿ ಆರೋಪ
ಆದರೆ ಎದರುದಾರ ಆಸ್ಪತ್ರೆಯವರು ಕುಮಾರ ಪ್ರಾಂಜಲ ಇವನಿಗೆ ಪ್ರಥಮ ಹಂತದಲ್ಲಿಯೆ ಸರಿಯಾದ ಚಿಕಿತ್ಸೆ ಕೊಡದೇ ಇದ್ದುದರಿಂದ ಮತ್ತು ಸರಿಯಾಗಿ ಆರೈಕೆ ಮಾಡದೆ ನಿರ್ಲಕ್ಷ ತೋರಿದ್ದರಿಂದ ಹಾಗೂ ಬೇರೆ ಆಸ್ಪತ್ರೆಗೆ ಕಳುಹಿಸುವ ಪ್ರಕ್ರಿಯೆಯಲ್ಲಿ ಸರಿಯಾದ ಕ್ರಮ ಕೈಗೊಳ್ಳದೆ ಇದ್ದುದರಿಂದ ತಮ್ಮ ಮಗನ ಮರಣ ಸಂಭವಿಸಿರುತ್ತದೆ. ಆದ್ದರಿಂದ ಎದರುದಾರರು ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಮತ್ತು ಪರಿಹಾರ ಕೋರಿ ಧಾರವಾಡದ ಕಾಯಂ ಜನತಾ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿರುತ್ತಾರೆ.
ಇದನ್ನೂ ಓದಿ: ಮೊದಲ ಹಂತದಲ್ಲಿ 3 ಗ್ಯಾರಂಟಿ ಜಾರಿಗೆ ಚಿಂತನೆ
ಸದರಿ ಅರ್ಜಿ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಖಾಯಂ ಜನತಾ ನ್ಯಾಯಾಲಯದ ಪ್ರಭಾರ ಅಧ್ಯಕ್ಷರಾದ ಎನ್. ಸುಬ್ರಮಣ್ಯ, ಸದಸ್ಯರಾದ ಗೀತಾ ಎಮ್. ಯಾದಪ್ಪನವರ ಹಾಗೂ ವಿಜಯಲಕ್ಷ್ಮೀ ಎಮ್. ಇವರು ಅರ್ಜಿದಾರರ ಮತ್ತು ಎದರುದಾರರ ವಾದವನ್ನು ಕೇಳಿ ಎದರುದಾರ ವೈದ್ಯಕೀಯ ಸಂಸ್ಥೆಯು ಅರ್ಜಿದಾರರ ಮಗನಿಗೆ ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ವ್ಯವಸ್ಥೆ ಮಾಡದೇ ಸೇವಾ ನ್ಯೂನ್ಯತೆ ಎಸಗಿದ್ದಾರೆಂದು ಅಭಿಪ್ರಾಯ ಪಟ್ಟು ತೀರ್ಪು ನೀಡಿದೆ.
ಈ ಆದೇಶ ನೀಡಿದ 2 ತಿಂಗಳ ಒಳಗಾಗಿ ಎದುರುದಾರರು ರೂ.10,00,000/- ಪರಿಹಾರನ್ನು ಶೇ.6 ಬಡ್ಡಿಯಂತೆ ಅರ್ಜಿಯ ದಿನಾಂಕದಿಂದ ಪಾವತಿಸಬೇಕೆಂದು ನಿರ್ದೇಶನ ನೀಡಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.