ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮಹಿಳೆ
ಮೆದುಳಿನ ರಕ್ತಸ್ರಾವದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ ಸವಿತಾ ಅವರ ಅಂಗಾಂಗಗಳನ್ನು ಕುಟುಂಬವರ್ಗದವರು ದಾನ ಮಾಡಿದ್ದಾರೆ.
ಮೈಸೂರು : ಮೆದುಳಿನ ರಕ್ತಸ್ರಾವದಿಂದ ಮೆದುಳು ನಿಷ್ಕ್ರಿಯಗೊಂಡಿದ್ದ ಮಹಿಳೆ ಸವಿತಾ (Savitha) ಅವರ ಅಂಗಾಂಗಗಳನ್ನು ಕುಟುಂಬವರ್ಗದವರು ದಾನ ಮಾಡಿದ್ದಾರೆ. ಈ ಮೂಲಕ ಸಾವಿನ ನಂತರವೂ ಈ ಮಹಿಳೆ ನಾಲ್ಕು ಜೀವಗಳಿಗೆ ಸವಿತಾ ಆಸರೆಯಾಗಿದ್ದಾರೆ.
ನಂಜನಗೂಡು ತಾಲೂಕು ಆಲಂಬೂರು ಗ್ರಾಮದ ನಂಜುಂಡಸ್ವಾಮಿ ಅವರ ಪತ್ನಿ ಸವಿತಾ (Savitha). ೪೦ ವರ್ಷದ ಸವಿತಾ ಸಾವಿನಲ್ಲೂ ಸಾರ್ಥಕತೆಯನ್ನು ಮೆರೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಸವಿತಾ ಫೆ.೧೮ರಂದು ಆಪೋಲೋ ಆಸ್ಪತ್ರೆಯಲ್ಲಿ (Apolo Hospital) ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವಾಗಲೇ ಮತ್ತೆ ಆನಾರೋಗ್ಯಕ್ಕೆ ಒಳಗಾಗಿದ್ದರು. ಇದಾದ ಬಳಿಕ ಎರಡು ದಿನಗಳ ಕಾಲ ಅವರನ್ನು ವೆಂಟಿಲೇಟರ್‌ನಲ್ಲಿಡಲಾಗಿತ್ತು. ಮಾರ್ಚ್ ೦೯ ರಂದು ಸವಿತಾ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ (Brain dead)ವೈದ್ಯರು ಘೋಷಣೆ ಮಾಡಿದ್ದಾರೆ.
ಇದನ್ನೂ ಓದಿ : 'ಕೋಮು ಆಧಾರದ ಧ್ರುವೀಕರಣ ಬಿಜೆಪಿ ಗೆಲ್ಲಲು ಮುಖ್ಯ ಕಾರಣ'
ನಿಗದಿತ ಶಿಷ್ಟಾಚಾರ ನಿಯಮಗಳ ಪ್ರಕಾರ ಅಂಗಾಂಗ ದಾನಕ್ಕಾಗಿ ಅವರ ಕುಟುಂಬದವರಿಗೆ ಸಲಹೆ ನೀಡಲಾಯಿತು (Organ donation). ಸಲಹೆಯಂತೆ ಸವಿತಾ ಪತಿ ಅಂಗಾಂಗ ದಾನ ಮಾಡುವುದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿನ್ನೆಲ್ಲೆಯಲ್ಲಿ ಕುಟುಂಬದವರ ಒಪ್ಪಿಗೆ ಮೇರೆಗೆ ಸವಿತಾ ಅಂಗಾಂಗಗಳನ್ನು ಪಡೆಯಲಾಯಿತು ಎಂದು ಅಪೋಲೋ ಬಿಜಿಎಸ್ ಆಸ್ಪತ್ರೆ ಉಪಾಧ್ಯಕ್ಷ (ಆಡಳಿತ ವಿಭಾಗ) ಎ.ಜಿ.ಭರತೀಶ ರೆಡ್ಡಿ (Bharatheesh Reddy) ತಿಳಿಸಿದ್ದಾರೆ.
ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯಿಂದ (Apolo BGS Hospital)ಬುಧವಾರ ಸಂಜೆ ಜೀವಂತ ಹೃದಯವನ್ನು ಗ್ರೀನ್ ಕಾರಿಡಾರ್ ವ್ಯವಸ್ಥೆ ಮೂಲಕ ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಗೆ (Narayana Hrudayalaya) ಸಾಗಿಸಲಾಯಿತು. ಮತ್ತೊಂದು ಆಂಬ್ಯುಲೆನ್ಸ್‌ನಲ್ಲಿ ೧ ಕಿಡ್ನಿಯನ್ನು ಯಶವಂತ ಪುರದಲ್ಲಿರುವ ಸ್ಪರ್ಶ ಆಸ್ಪತ್ರೆಗೆ ರವಾನಿಸಲಾಯಿತು. ೧ ಕಿಡ್ನಿ, ೧ ಯಕೃತ್ತನ್ನು ಅಪೋಲೋ ಬಿಜಿಎಸ್ ಆಸ್ಪತ್ರೆಯಲ್ಲೇ ರೋಗಿಗಳಿಗೆ ಕಸಿ ಮಾಡಲಾಗಿದೆ. ಕಾರ್ನಿಯಾಗಳನ್ನು ಮೈಸೂರಿನ ಕಣ್ಣಿನ ಬ್ಯಾಂಕ್‌ಗೆ ರವಾನಿಸಲಾಗಿದೆ.
ಇದನ್ನೂ ಓದಿ : ತೋಟಗಾರಿಕೆ ಇಲಾಖೆ: ತರಬೇತಿಗಾಗಿ ಅರ್ಜಿ ಆಹ್ವಾನ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ