Culture: ‘ಸಮಷ್ಟಿ’ಯಿಂದ ರಂಗಶಂಕರದಲ್ಲಿ ‘ಮಿಸ್. ಸದಾರಮೆ’ ನಾಟಕದ 50ನೇ ಪ್ರಯೋಗ

‘ಮಿಸ್. ಸದಾರಮೆ’ ನಾಟಕವು ರಂಗಭೂಮಿಯ ಮಹಾನ್ ನಾಟಕ ರಚನೆಕಾರ ಬೆಳ್ಳಾವೆ ನರಹರಿ ಶಾಸ್ತ್ರಿ ವಿರಚಿತ ಮೂಲ ನಾಟಕ ‘ಸದಾರಮಾ ನಾಟಕಂ’ನ ಪರಿಷ್ಕೃತಿ ಆವೃತ್ತಿ.

Written by - Zee Kannada News Desk | Last Updated : Mar 10, 2022, 05:37 PM IST
  • ಬೆಂಗಳೂರಿನ ಸಮಿಷ್ಟಿ ರಂಗತಂಡದಿಂದ ‘ಮಿಸ್. ಸದರಾಮೆ’ ನಾಟಕದ 50ನೇ ಪ್ರಯೋಗ
  • ಮಾರ್ಚ್ 12ರಂದು ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ನಾಟಕ ಪ್ರದರ್ಶನ
  • ರಂಗಶಂಕರದಲ್ಲಿ ಪ್ರದರ್ಶಿತಗೊಳ್ಳಲಿರುವ ಮಂಜುನಾಥ್ ಎಲ್. ಬಡಿಗೇರ್ ನಿರ್ದೇಶನದ ನಾಟಕ
Culture: ‘ಸಮಷ್ಟಿ’ಯಿಂದ ರಂಗಶಂಕರದಲ್ಲಿ ‘ಮಿಸ್. ಸದಾರಮೆ’ ನಾಟಕದ 50ನೇ ಪ್ರಯೋಗ title=
‘ಮಿಸ್. ಸದರಾಮೆ’ ನಾಟಕದ 50ನೇ ಪ್ರಯೋಗ

ಬೆಂಗಳೂರು: ‘ಮಿಸ್. ಸದಾರಮೆ’ ನಾಟಕ(Miss. Sadaarame Play)ವು ರಂಗಭೂಮಿಯ ಮಹಾನ್ ನಾಟಕ ರಚನೆಕಾರ ಬೆಳ್ಳಾವೆ ನರಹರಿ ಶಾಸ್ತ್ರಿ ವಿರಚಿತ ಮೂಲ ನಾಟಕ ‘ಸದಾರಮಾ ನಾಟಕಂ’ನ ಪರಿಷ್ಕೃತಿ ಆವೃತ್ತಿ. ಬೆಂಗಳೂರಿನ ಸಮಷ್ಠಿ ರಂಗತಂಡದಿಂದ ಇದೇ ಮಾರ್ಚ್ 12 ರಂದು ರಂಗಶಂಕರ(RangaShankara)ದಲ್ಲಿ ಈ ನಾಟಕದ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ರಂಗನಟ, ನಿರ್ದೇಶಕ ಮತ್ತು ರಂಗಭೂಮಿ ಶಿಕ್ಷಕ ಮಂಜುನಾಥ್ ಎಲ್. ಬಡಿಗೇರ್(Manjunath L Badiger) ನಿರ್ದೇಶನದಲ್ಲಿ 49 ಮತ್ತು 50ನೇ ಪ್ರಯೋಗಗಳು ಶನಿವಾರ ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿವೆ. ಈ ನಾಟಕ ವೀಕ್ಷಿಸಲು ರಂಗಾಸಕ್ತರಿಗೆ ಸುವರ್ಣಾವಕಾಶವಿರುತ್ತದೆ.

‘ಮಿಸ್. ಸದಾರಮೆ’ ನಾಟಕದ ಕುರಿತು

‘ಮಿಸ್. ಸದಾರಮೆ’ ನಾಟಕವು ಬೆಳ್ಳಾವೆ ನರಹರಿ ಶಾಸ್ತ್ರಿ(Bellave Narahari Shastry) ವಿರಚಿತ ಮೂಲ ‘ಸದಾರಮಾ ನಾಟಕಂ’ನ ಪರಿಷ್ಕೃತ ಆವೃತ್ತಿ. ಈ ನಾಟಕವು ಗುಬ್ಬಿ ಕಂಪನಿಯಲ್ಲಿ ಸಾವಿರಾರು ಪ್ರಯೋಗಗಳನ್ನು ಕಂಡು ನಂತರ ಹಿರಣ್ಣಯ್ಯನವರಿಂದ ಮತ್ತೆ ಹಲವಾರು ಪ್ರಯೋಗಗಳನ್ನು ಕಂಡು ಪ್ರಸಿದ್ಧವಾಗಿದೆ. ನಂತರ ಇದನ್ನು ಕೆ.ವಿ.ಸುಬ್ಬಣ್ಣ(KV Subbanna)ನವರು ಪ್ರಸ್ತುತ ಸನ್ನಿವೇಶಕ್ಕೆ ಬದಲಾಯಿಸಿ ‘ಮಿಸ್. ಸದಾರಮೆ’ ಎಂದು ಹೆಸರಿಸಿ ಬಿ.ವಿ.ಕಾರಂತರ ನಿರ್ದೇಶನದಲ್ಲಿ ನೀನಾಸಂ ತಿರುಗಾಟದಲ್ಲಿ ನೂರಾರು ಪ್ರದರ್ಶನಗಳನ್ನು ಮಾಡಿಸಿದರು. ಈ ನಾಟಕವು ಕನ್ನಡದಲ್ಲಿ ಮಾತ್ರವಲ್ಲದೆ ದಕ್ಷಿಣ ಭಾರತದ ಇತರ ಕೆಲವು ಭಾಷೆಗಳಲ್ಲೂ ಪ್ರಯೋಗವಾಗಿ ದಾಖಲೆ ಬರೆದಿದೆ.

ಇದನ್ನೂ ಓದಿ: ಸಂಚಲನ ಮೈಸೂರು ರಂಗತಂಡದಿಂದ ಮಾರ್ಚ್ 11ಕ್ಕೆ ‘ಹಯವದನ’ ನಾಟಕ ಪ್ರದರ್ಶನ

ವರ್ತಕ ಬಂಗಾರ ಸೆಟ್ಟಿಯ ಮಗಳಾದ ಸದಾರಮೆ(Sadaarame)ಯಿಂದ ಆಕರ್ಷಿತನಾದ ರಾಜಕುಮಾರ, ರಾಜ್ಯ-ಕೋಶಾದಿಗಳನ್ನು ಬಿಟ್ಟು ಮದುವೆಯಾಗಿ ಅವಳೊಂದಿಗೆ ದೇಶಾಂತರ ಹೊರಟು ಹೋಗುತ್ತಾನೆ. ವಿಧಿಯ ವೈಪರೀತ್ಯದಿಂದ ಗಂಡ-ಹೆಂಡತಿಯರು ಒಬ್ಬರಿಂದೊಬ್ಬರು ಅಗಲಿ, ಮುಗ್ದೆಯಾದ ಸದಾರಮೆ ಹಲವಾರು ಕಷ್ಟ-ಕಾರ್ಪಣ್ಯಗಳಿಗೆ ಸಿಲುಕಿಕೊಳ್ಳುತ್ತಾಳೆ. ಇವನ್ನೆಲ್ಲಾ ಯಶಸ್ವಿಯಾಗಿ ಎದುರಿಸಿ ಕೊನೆಗೆ ಅವರು ಮತ್ತೆ ಒಂದಾಗುತ್ತಾರೆ. ಈ ಇಡೀ ನಾಟಕವು ಹಾಸ್ಯ ಸನ್ನಿವೇಶಗಳಿಂದ ಕೂಡಿದ್ದು, ಕಂಪನಿ ನಾಟಕ ಶೈಲಿಯ ಹಾಡುಗಳಿಂದ ವೈಭವೀಕರಿಸಲ್ಪಟ್ಟಿದೆ. ನಿರ್ದೇಶಕರು ನಾಟಕದ ಮೂಲ ಕಥೆಗೆ ಹೊಸ ವ್ಯಾಖ್ಯಾನ ನಿಡುವ ಪ್ರಯತ್ನ ಮಾಡಿದ್ದಾರೆ.

ನಿರ್ದೇಶಕರ ಬಗ್ಗೆ:

‘ಮಿಸ್. ಸದಾರಮೆ’ ನಾಟಕದ ನಿರ್ದೇಶಕ ಮಂಜುನಾಥ್ ಎಲ್. ಬಡಿಗೇರ್(Manjunath L Badiger) ಅವರು ನೀನಾಸಂ ರಂಗಶಿಕ್ಷಣ ಕೇಂದ್ರದ ಪದವೀಧರರು. ಪ್ರಸ್ತುತ ಇವರು ಬೆಂಗಳೂರಿನ ‘ಸಮಷ್ಟಿ’ ತಂಡದಲ್ಲಿ ನಟರಾಗಿ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದುವರೆಗೆ ‘ಹರಿಣಾಭಿಸರಣ’, ‘ಬೊಮ್ಮನಹಳ್ಳಿಯ ಕಿಂದರಿ ಜೋಗಿ’, ‘ಪ್ರಮೀಳಾರ್ಜುನೀಯಂ’, ‘ಚಿತ್ರಪಟ ರಾಮಾಯಣ’, ‘ಸಂಗ್ಯಾಬಾಳ್ಯಾ’ ಮುಂತಾದ ನಾಟಕಗಳನ್ನು ನಿರ್ದೇಶಿಸಿದ್ದಾರೆ. ನಟರಾಗಿಯೂ ಅನೇಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ.  

‘ಸಮಷ್ಟಿ’ ತಂಡದ ಬಗ್ಗೆ:

‘ಸಮಷ್ಟಿ’ ತಂಡವು(Samashti Theatre Group) 2000ರಲ್ಲಿ ಹುಟ್ಟಿಕೊಂಡ ರಂಗತಂಡ. ಹೊಸ ಪ್ರತಿಭೆಗಳನ್ನು ಹುಡುಕಿ ಅವರಲ್ಲಿ ರಂಗಾಸಕ್ತಿಯನ್ನು ಬೆಳೆಸುವುದು ಇದರ ಉದ್ದೇಶ. ಇದಕ್ಕಾಗಿ ಹಲವಾರು ಉಚಿತ ರಂಗಶಿಬಿರಗಳನ್ನು ಇದುವರೆಗೆ ನಡೆಸಿದೆ. ಸಾಹಿತ್ಯಾಸಕ್ತಿ ಬೆಳೆಸುವ ಉದ್ದೇಶದಿಂದ ಆರಂಭಿಸಿದ ‘ಸಮಷ್ಟಿ ಸಾಹಿತ್ಯ ಸಂಜೆ’ಯು ಇದುವರೆಗೆ 50ಕ್ಕೂ ಹೆಚ್ಚಿನ ಕಾರ್ಯಕ್ರಮಗಳನ್ನು ನೀಡಿದೆ.

ಇದನ್ನೂ ಓದಿ: ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ ಧಾರವಾಡ ಯುವಕನಿಗೆ ಅಭಿನಂದನೆಗಳ ಮಹಾಪೂರ

ನಾಟಕ: ಮಿಸ್. ಸದಾರಮೆ

ತಂಡ: ಬೆಂಗಳೂರಿನ ಸಮಷ್ಟಿ ರಂಗತಂಡ

ನಿರ್ದೇಶನ: ಮಂಜುನಾಥ್ ಎಲ್. ಬಡಿಗೇರ್

ಪ್ರದರ್ಶನದ ದಿನಾಂಕ: ಮಾರ್ಚ್ 12

ಸ್ಥಳ: ರಂಗಶಂಕರ, ಜೆಪಿ ನಗರ, ಬೆಂಗಳೂರು

ಸಮಯ: ಮಧ್ಯಾಹ್ನ 3.30 ಮತ್ತು ಸಂಜೆ 7.30ಕ್ಕೆ

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: 9845163380

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News