ಭದ್ರಾವತಿಯಲ್ಲಿ ಭದ್ರೆಯ ರೌದ್ರಾವತಾರ : ಪ್ರವಾಹ ಸೃಷ್ಟಿ, ಮನೆಗಳಿಗೆ ನುಗ್ಗಿದ ನೀರು
ಭದ್ರೆಯ ಒಡಲು ತುಂಬಿದ್ದು, ಇದೀಗ ಡ್ಯಾಂ ನಿಂದ ಭದ್ರಾ ನದಿಗೆ ನೀರು ಹರಿಸಲಾಗಿದೆ. ಆದರೆ ನೀರು ಹರಿಸಿದ ೨೪ ಗಂಟೆಗಳ ಒಳಗಾಗಿ ಭದ್ರೆ ಪ್ರವಾಹ ಪರಿಸ್ಥಿತಿಯನ್ನೇ ಸೃಷ್ಟಿಸಿದ್ದಾಳೆ.
ಶಿವಮೊಗ್ಗ : ಭದ್ರಾ ಡ್ಯಾಂ ನಿಂದ ನೀರು ಹಾಯಿಸಿ ಇಪ್ಪತ್ತು ನಾಲ್ಕು ಗಂಟೆ ಕಳೆದಿಲ್ಲ, ಆಗಲೇ ಭದ್ರಾ ನದಿ ಭದ್ರಾವತಿ ನಗರದಲ್ಲಿ ತನ್ನ ರೌದ್ರಾವತಾರ ತೋರಿದೆ.ಭದ್ರಾವತಿ ನಗರದ ಹೃದಯ ಭಾಗದಲ್ಲಿ ಹರಿಯುವ ಭದ್ರಾ ನದಿ ಪ್ರವಾಹವನ್ನೇ ಸೃಷ್ಟಿಸಿದೆ. ನದಿ ನೀರು ಅಚ್ಚುಕಟ್ಟು ಪ್ರದೇಶದ ಮನೆಗಳಿಗೆ ನುಗ್ಗಿದ್ದು ಜನರು ಅತಂಕ ಗೊಂಡಿದ್ದಾರೆ. ಭದ್ರಾ ಸೇತುವೆ ಮೇಲೆ ಭದ್ರಾ ನದಿ ಹರಿಯುತ್ತಿದ್ದು,ಸಂಚಾರ ಸ್ಥಗಿತಗೊಳಿಸಲಾಗಿದೆ.
ತುಂಬಿದ ಭದ್ರೆಯ ಒಡಲು ಭರ್ತಿ ಡ್ಯಾಂ ನಿಂದ ಭದ್ರಾ ನದಿಗೆ ನೀರು :
ಈ ಬಾರಿ ಸುರಿದ ಧಾರಾಕಾರ ಮಳೆಗೆ ಭದ್ರಾ ಡ್ಯಾಂ ಬಹುಬೇಗನೇ ಭರ್ತಿಯಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.ಭದ್ರಾ ಜಲಾನಯನ ಪ್ರದೇಶದಲ್ಲಿ ಸೂಸಿದ ಮಳೆಗೆ ಭದ್ರಾ ಡ್ಯಾಂ ಭರ್ತಿಯಾಗಿದೆ.ಈ ಹಿನ್ನೆಲೆಯಲ್ಲಿ ನಿನ್ನೆ ಭದ್ರಾ ಡ್ಯಾಂ ನಿಂದ ಭದ್ರಾ ನದಿಗೆ 55 ಸಾವಿರ ಕ್ಯೂಸೆಕ್ಸ್ ನೀರು ಬಿಡುತ್ತಿದ್ದಂತೆ ಭದ್ರಾವತಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ.ನದಿ ಅಚ್ಚುಕಟ್ಟು ಪ್ರದೇಶದಲ್ಲಿ ವಾಸವಿರುವ ಮನೆಗಳಿಗೆ ನೀರು ನುಗ್ಗಿದ್ದು ಜನರು ಕಂಗಾಲಾಗಿದ್ದಾರೆ.ಅಂಬೇಡ್ಕರ್ ನಗರದ ಎಪ್ಪತ್ತಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು,ವಸ್ತುಗಳೆಲ್ಲಾ ಹಾಳಾಗಿದೆ.
ಇದನ್ನೂ ಓದಿ : ಕೇರಳದ ವಯನಾಡಿನಲ್ಲಿ ಸರಣಿ ಭೂಕುಸಿತ :ಮಂಡ್ಯ ಮೂಲದ ಅಜ್ಜಿ ಮೊಮ್ಮಗನ ಮೃತ ದೇಹ ಪತ್ತೆ
ಇನ್ನು ಭದ್ರಾ ಹೊಸ ಸೇತುವೆ ಮೇಲೆ ನೀರು ನಿಂತಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ. ಭದ್ರಾ ನದಿ ತೀರದ ಪ್ರದೇಶಗಳಿಗೆ ನೀರು ನುಗ್ಗುತ್ತಿರುವುದರಿಂದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.ಅಂಗಡಿ ಮುಂಗಟ್ಟುಗಳಿಗೂ ನೀರು ನುಗ್ಗಿದ್ದರಿಂದ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಭದ್ರಾ ನದಿ ಅಪಾಯಮಟ್ಟದಲ್ಲಿ ಹರಿಯುತ್ತಿದ್ದು,ತೀರ ಪ್ರದೇಶಗಳಿಗೆ ಜನರು ತೆರಳದಂತೆ ಎಚ್ಚರಿಕೆ ನೀಡಲಾಗಿದೆ.
ಒಟ್ಟಿನಲ್ಲಿ ಭದ್ರಾ ನದಿ ಭದ್ರಾವತಿ ನಗರದಲ್ಲಿ ನೆರೆಯನ್ನುಸೃಷ್ಟಿಸಿದ್ದು ಬಡ ಜನರ ಬದುಕಿನ ಮೇಲೆ ಗಾಯದ ಬರೆ ಎಳೆದಿದೆ.
ಇದನ್ನೂ ಓದಿ : ಅದ್ಧೂರಿಯಾಗಿ ನಡೆದ ʻಜೀ ಕನ್ನಡ ನ್ಯೂಸ್ ವೀರ ಕನ್ನಡಿಗ ಪ್ರಶಸ್ತಿʼ ಪುರಸ್ಕಾರ ಸಮಾರಂಭ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.