ಬೆಂಗಳೂರು: ಕನ್ನಡಿಗರ ಹೆಮ್ಮೆಯ ಚಾನಲ್ ಜೀ ಕನ್ನಡ ನ್ಯೂಸ್ ವೀರ ಕನ್ನಡಿಗ ಪ್ರಶಸ್ತಿ ಪುರಸ್ಕಾರ ಸಮಾರಂಭ ನಿನ್ನೆ ಅದ್ಧೂರಿಯಾಗಿ ಬೆಂಗಳೂರು ನಗರದ ದಿ ಲಲಿತ್ ಅಶೋಕ್ ಹೋಟೆಲ್ ನಲ್ಲಿ ನೆರವೇರಿತು. ಸಮಾಜದಲ್ಲಿ ಸೋಲನ್ನೇ ಸೋಲಿಸಿ ಗೆಲುವು ಕಂಡ ಅಪ್ರತಿಮ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರತಿ ಕ್ಷೇತ್ರದಲ್ಲೂ ಸಾಧನೆ ಮಾಡಿದ ಹಾಗೂ ಪರ ಭಾಷೆಯವರಾಗಿದ್ದರೂ, ಕನ್ನಡಿಗರಿಗೆ ತಮ್ಮ ಸಂಸ್ಥೆಯಲ್ಲಿ ಕೆಲಸ ನೀಡಿದ ಸಾಧಕರಿಗೆ ಪುರಸ್ಕಾರ ನೀಡಲಾಯಿತು.
ಇದರಲ್ಲಿ ಪ್ರಮುಖವಾಗಿ ಕನ್ನಡಕ್ಕಾಗಿ ಹೋರಾಡಿದ ಹಿರಿಯ ನಾಯಕರು, ಹೋರಾಟದಗಾರರು, ಸಮಾಜ ಸೇವಕರು, ಯುವ ಮುಖಂಡರು, ಕನ್ನಡಿಗರ ಕೆಲಸ ನೀಡಿರೋ ಉದ್ಯಮಿಗಳಿಗೆ ಜೀ ಕನ್ನಡ ನ್ಯೂಸ್ ವೀರ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ: ಜೈಲಾಧಿಕಾರಿಗಳಿಗೆ ದರ್ಶನ್ ಪತ್ರ... ಅಸಲಿಗೆ ಇದರಲ್ಲಿ ಇರೋದೇನು?
ಜುಲೈ 30ರಂದು ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 27 ಸಾಧಕರಿಗೆ ಜೀ ಕನ್ನಡ ನ್ಯೂಸ್ ವತಿಯಿಂದ ʻವೀರ ಕನ್ನಡಿಗ ಅವಾರ್ಡ್- 2024ʼ ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ, ಸ್ಯಾಂಡಲ್‌ವುಡ್ ಸ್ಟಾರ್ ನಟರಾದ ಶ್ರೀಮುರಳಿ, ಖ್ಯಾತ ನಿರ್ದೇಶಕ ತರುಣ್ ಸುಧೀರ್, ನಟಿ ಮೇಘನಾ ರಾಜ್ ಭಾಗಿಯಾಗಿದ್ದರು. ಇದೇ ಭಾನುವಾರ (ಆಗಸ್ಟ್ 04 ರಂದು) ಸಂಜೆ 6.00 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಈ ಕಾರ್ಯಕ್ರಮ ಪ್ರಸಾರವಾಗಲಿದೆ.
ವೀರ ಕನ್ನಡಿಗ ಪ್ರಶಸ್ತಿ ಪಡೆದ ಸಾಧಕರು :
1. ಡಾ. ಅಶ್ವಿನಿ ಎಸ್ ಭೂಷಣ್, ಉದ್ಯಮಿ
2 ತನ್ವೀರ್ ಪಾಷಾ, ಓಲಾ, ಊಬರ್ ಡ್ರೈವರ್ ಮಾಲೀಕರ ಸಂಘದ ಅಧ್ಯಕ್ಷರು
3. ವಾಟಾಳ್ ನಾಗರಾಜ್, ಮಾಜಿ ಶಾಸಕರು, ವಾಟಾಳ್ ಪಕ್ಷದ ಅಧ್ಯಕ್ಷರು
4. ಡಾ.ತಲಕಾಡು ಚಿಕ್ಕರಂಗೇಗೌಡ, ಕನ್ನಡಪರ ಹೋರಾಟಗಾರರು
5. ಜಯಸಿಂಹ ಕೆ.ಎನ್, ಪತ್ರಕರ್ತರು, ಚಿಂತಕರು
6. ಸುರೇಶ್ ಕೆಎನ್ ಸಿ, ಸಮಾಜ ಸೇವಕರು
7. ಅರುಣ್ ಕುಮಾರ್ ಡಿ.ಟಿ, ಸಮಾಜ ಸೇವಕರು
8. ತಾಯ್ನಾಡು ರಾಘವೇಂದ್ರ, ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಸಂಸ್ಥಾಪಕ ಅಧ್ಯಕ್ಷರು
9. ಡಾ.ಎಸ್.ಪಿ.ದಯಾನಂದ್, ಡಿಎಸ್ ಮ್ಯಾಕ್ಸ್ ಪ್ರಾಪರ್ಟಿಸ್ ಎಂಡಿ
10. ಹನುಮಯ್ಯ ಗುತ್ತೇದಾರ್, ಸಮಾಜ ಸೇವಕರು
11. ಮಹಾಂತೇಶ್ ಛಲವಾದಿ, ಸಮಾಜ ಸೇವಕರು
12. ದೀಪಾ ರಾಣಿ ಸೇಕರ್, ಸಂಸ್ಥಾಪಕರು ಟ್ರಸ್ಟ್ ಟ್ರಾನ್ಫ್ರ್ಮ್ ಲೈಪ್ ಪ್ರೋಗ್ರಾಂ
13. ಕಲಾವತಿ ಕಂಬಳಿ, ಕೃಷಿ ವಿಜ್ಞಾನಿ
14. ನಾಗಭೂಷಣ್, ನಿವೃತ್ತ ಇಂಜಿನಿಯರ್ SAIL
15. ಜಯಪ್ರಕಾಶ್ ಸಾರಥಿ, ಯುವ ಮುಖಂಡರು, ಸಮಾಜ ಸೇವಕರು
16. ನಾಗರಾಜ್ ಸಾಲಗೇರಿ, ಸಮಾಜ ಸೇವಕರು
17. ಮಹೇಂದ್ರ ಸಿಂಗ್ ಕಾಳಪ್ಪ, ಸಮಾಜ ಸೇವಕರು
18. ಅನಂತ್ ವಿಶ್ವ ಆಚಾರ್ಯ, ಮನಿ ಇಸ್ ಹ್ಯಾಪಿನೆಸ್ ಸಂಸ್ಥಾಪಕರು
19. ಕೆ.ಎನ್ ಚಕ್ರಪಾಣಿ, ಸಮಾಜ ಸೇವಕರು
20. ಸಿ.ಎಸ್.ವೇಣುಗೋಪಾಲ್, ಡಿಸೈನ್ ಹೈಟ್ಸ್ ಸಂಸ್ಥೆ ಮುಖ್ಯಸ್ಥರು
21. ನಿರ್ಮಲಾ, ಪ್ಲೋಟಸ್ ಚಿಟ್ಸ್ ಎಂಡಿ
22. ರಾಜುಗೌಡ, ಎಕೋ ಪ್ಲಾಂಟ್ ಎಲಿಲೇಟರ್ ಎಂಡ್ ಎಸ್ಕಿಲೇಟರ್ಸ್ ಸಂಸ್ಥೆ ಮುಖ್ಯಸ್ಥರು
23. ಡಾ.ಅಬ್ದುಲ್ ಸುಬಾನ್, ಫಾಲ್ಕನ್ ಶಿಕ್ಷಣ ಸಂಸ್ಥೆ ಎಂಡಿ
24. ಮಲ್ಲಿಕಾರ್ಜುನ್ ಸರವಾಡ, ಕನ್ನಡ ಪರ ಹೋರಾಟಗಾರರು
25. ಭೂಪಾಲನ್ ಸುನೀಲ್, ಸಮಾಜ ಸೇವಕರು
26. ಡಾ.ಎಚ್.ಎಸ್.ರಾಘವೇಂದ್ರ ರಾವ್, ಉದ್ಯಮಿ
27. ರವಿ ಶೆಟ್ಟಿ ಬೈಂದೂರು, ಅಧ್ಯಕ್ಷರು, ಕರ್ನಾಟಕ ಕಾರ್ಮಿಕ ಪರಿಷತ್
ಇದನ್ನೂ ಓದಿ: ರೆಟ್ರೋ ಸ್ಟೈಲ್'ನಲ್ಲಿ ಮೂಡಿ ಬಂದ "ಹೇಳು ಗೆಳತಿ":ಚರಣ್‌ರಾಜ್ ಕಂಠಸಿರಿಗೆ ಕೇಳುಗರು ಫಿದಾ
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.