ರಾಜವಂಶಸ್ಥೆ ಪ್ರಮೋದಾದೇವಿ ಮಾತೃವಿಯೋಗದಿಂದ ರದ್ದಾದ ಕಾರ್ಯಕ್ರಮಗಳು
ಜಟ್ಟಿ ಕಾಳಗ ಸೇರಿ ಅರಮನೆಯ ಧಾರ್ಮಿಕ ಕಾರ್ಯಗಳು ಮುಂದೂಡಿಕೆ…
ಮೈಸೂರು: ರಾಜವಂಶಸ್ಥೆ ಪ್ರಮೋದಾದೇವಿ ಮಾತೃವಿಯೋಗದಿಂದ ಮೈಸೂರು ಅರಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಅರಮನೆಯಲ್ಲಿ ನಡೆಯಬೇಕಿದ್ದ ವಿಜಯದಶಮಿ ಕಾರ್ಯಕ್ರಮಗಳನ್ನು ಮುಂದೂಡಿಕೆ ಮಾಡಲಾಗಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರ ತಾಯಿ ಪುಟ್ಟ ಚಿನ್ನಮ್ಮಣ್ಣಿ(98) ಇಂದು ಬೆಳಿಗ್ಗೆ ನಿಧನರಾಗಿದ್ದು, ಮೂರುದಿನ ಅರಮನೆಯಲ್ಲಿ ಸೂತಕದ ವಾತಾವರಣವಿದ್ದು, ಜಟ್ಟಿ ಕಾಳಗವೂ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ಇಂದು ರದ್ದುಗೊಳಿಸಲಾಗಿದೆ. ಅಕ್ಟೋಬರ 22ಕ್ಕೆ ಅರಮನೆಯಲ್ಲಿ ದಶಮಿಯಂದು ನಡೆಯಬೇಕಿದ್ದ ಕಾರ್ಯಕ್ರಮಗಳು ನಡೆಯಲಿವೆ.
ರದ್ದಾದ ಕಾರ್ಯಕ್ರಮಗಳ ಪಟ್ಟಿ:
ಬೆಳಗ್ಗೆ 9.25ರಿಂದ 9.35ರೊಳಗೆ ನಡೆಯಬೇಕಿದ್ದ ಉತ್ತರ ಪೂಜೆ
ರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧಗಳಿಗೆ ನಡೆಯಬೇಕಿದ್ದ ಪೂಜೆ
ಶ್ರೀ ಭುವನೇಶ್ವರಿ ದೇವಾಲಯದಲ್ಲಿ ಪೂಜೆ
ವಜ್ರಮುಷ್ಠಿ ಕಾಳಗ
ಎಲ್ಲಾ ಕಾರ್ಯಕ್ರಮಗಳೂ ಅಕ್ಟೋಬರ್ 22ಕ್ಕೆ ಮುಂದೂಡಿಕೆಯಾಗಿವೆ.