ಹಾವೇರಿ: ಈ ಆಧುನಿಕ ಯುಗದಲ್ಲಿ ಪೋಷಕರಿಗೆ ಹಾಗೂ ವಿದ್ಯೆ ನೀಡಿದ ಗುರುವಿಗೆ ಗೌರವ ನೀಡುವ ಗುಣ ವಿದ್ಯಾರ್ಥಿಯಲ್ಲಿ ಕಡಿಮೆ ಯಾಗ್ತಿರೋದನ್ನ ನಾವು ನೋಡ್ತಿದ್ದೇವೆ. ಇನ್ನು ಎಷ್ಟೋ ಶಿಕ್ಷಕರ ಮೇಲೆ  ವಿದ್ಯಾರ್ಥಿಗಳು ಹಲ್ಲೆ ಮಾಡಿದ ಉದಾಹರಣೆಗಳು ಇವೆ.. ಆದ್ರೆ ಇಲ್ಲೊಂದು ಸರ್ಕಾರಿ ಶಾಲೆ ಭಾರತೀಯ ಸಂಸ್ಕಾರ ನೀಡುವ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ದೇಶದ ಸರ್ಕಾರಿ ಶಾಲೆಗೆ ಮಾದರಿಯಾಗಿದೆ. ಅದುವೇ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ.


COMMERCIAL BREAK
SCROLL TO CONTINUE READING

ಹೀಗೆ ಒಂದೆಡೆ ಶಾಲೆಯ ನೂರಾರು ಮಕ್ಕಳು ತಮ್ಮ ಪೋಷಕರನ್ನ ಕುಡಿಸಿಕೊಂಡು ಪಾದ ಪೂಜೆ ಮಾಡುತ್ತಿರುವ ದೃಶ್ಯ... ಮತ್ತೊಂದಡೆ ಮಕ್ಕಳ ಈ ಸಂಸ್ಕಾರ ಕಂಡು ಸಂತೋಷದಿಂದ ಬೆರಗಾದ ಹೆತ್ತಮ್ಮಂದಿರು.. ಈ ಎಲ್ಲಾ ದೃಶ್ಯಗಳು ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಕಂಡು ಬಂದ ದೃಶ್ಯಗಳು.. 


ಇದನ್ನೂ ಓದಿ- ಇತಿಹಾಸ ಪ್ರಸಿದ್ದ ದೇವಸ್ಥಾನವೇ ಟಾರ್ಗೆಟ್: ಶನಿ ಮಹಾತ್ಮನ ಪೂಜೆಗೆ ಮಾಂಸದ ಹಾರ ತಂದ ಖದೀಮರು


ಹೌದು, ಸರ್ಕಾರಿ ಶಾಲೆಯ ವಾರ್ಷಿಕೋತ್ಸವ ಹಾಗೂ ಬಿಳ್ಕೋಡುಗೆ ಸಮಾರಂಭದ ಕಾರ್ಯಕ್ರಮದಲ್ಲಿ ತಾಯಂದಿರ ಪಾದಪೂಜೆ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ವಿಶೇಷ ಶಿಕ್ಷಣ ನೀಡಲಾಗಿದೆ.  ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂತ್ರಜ್ಞಾನದ ಮೊರೆ ಹೋಗಿ ಭಾರತೀಯ ಸಂಸ್ಕಾರ ಮರೆಯುತ್ತಿದ್ದಾರೆ. ಇದನ್ನ ಮನಗಂಡ ಈ ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ಬೆಳೆಸುವ ಇಂತಹ ಕಾರ್ಯಕ್ರಮಗಳು ಪ್ರತಿವರ್ಷ ಇಲ್ಲಿ ಮಾಡುತ್ತಾ ಬಂದಿದ್ದಾರೆ.. ಇನ್ನೂ ಮಕ್ಕಳ ಈ ಸಂಸ್ಕಾರ ಕಂಡು ಪೋಷಕರು ಪುಳಕಿತರಾದರು. ಇತ್ತ ಶಾಲೆಯ ಶಿಕ್ಷಕರು ನಮ್ಮ ಶಾಲೆಯಲ್ಲಿ ಶಿಕ್ಷಣದ ಜೊತೆ ಜೊತೆಗೆ ಭಾರತೀಯ ಸಂಸ್ಕಾರ ಶಿಕ್ಷಣವೂ ನಾವು ಮಕ್ಕಳಿಗೆ ಪ್ರತಿ ವರ್ಷ ನೀಡುತ್ತೇವೆ ಎಂದರು.


ಇದನ್ನೂ ಓದಿ- ಬೆಂಗಳೂರಿನ 28 ಕ್ಷೇತ್ರಗಳಲ್ಲಿ 20 ಕ್ಷೇತ್ರ ಗೆಲ್ಲಲು ಬಿಜೆಪಿ ಭರ್ಜರಿ ಪ್ಲ್ಯಾನ್‌


ಇನ್ನು ಸಂಸ್ಕಾರಯುತ ಶಿಕ್ಷಣವೇ ಹೆಚ್ಚು ಅಂಕ ಗಳಿಸಲು ಪ್ರೇರಣೆ ನೀಡಬಲ್ಲದು. ಆಧುನಿಕ ತಂತ್ರಜ್ಞಾನದ ಪೈಪೋಟಿ ಯುಗದಲ್ಲಿ ಭಾರತೀಯ ಸಂಸ್ಕೃತಿ ಕಲಿಸುವುದು ಶಿಕ್ಷಣ ಸಂಸ್ಥೆಗಳ ಕರ್ತವ್ಯವಾಗಿದೆ. ಸಂಸ್ಕಾರ ವಿಲ್ಲದ ವಿದ್ಯೆ ಬದುಕಿಗೆ ಪ್ರಯೋಜನವಾಗದು. ಪ್ರಾಥಮಿಕ ಹಂತದಲ್ಲಿಯೇ ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ದೇಶದಲ್ಲಿ ಅನಾಥಾಶ್ರಮ, ವೃದ್ಧಾಶ್ರಮಗಳು ಹುಟ್ಟುವುದಿಲ್ಲ. ಹಿರಿಯರಿಗೆ ಗೌರವ ಕೊಡುವುದು, ಕಾಲಿಗೆ ನಮಸ್ಕರಿಸುವುದು ಭಾರತೀಯ ಸಂಸ್ಕೃತಿಯಲ್ಲಿ ಮಾತ್ರ  ಇದೆ. ಇಂತಹ ಸಂಸ್ಕಾರ, ಸೌಜನ್ಯತೆ ಇನ್ನಾವ ದೇಶದಲ್ಲೂ ಸಿಗುವುದಿಲ್ಲ. ಸಂಸ್ಕಾರದ ಜೊತೆ ಜೊತೆಗೆ ಅವರು ಪಡೆದ ವಿದ್ಯೆಯಿಂದ ಆ ಮಗುವಿನ ಜೀವನ ಉಜ್ವಲವಾಗುತ್ತದೆ ಎಂದು ಶಾಲೆಯ ಶಿಕ್ಷಕರು ಅಭಿಪ್ರಾಯ ಪಟ್ಟರು...


ಒಟ್ಟಿನಲ್ಲಿ ಆಧುನಿಕ ಜೀವನದ ಭರಾಟೆಯಲ್ಲಿ ಪೋಷಕರ ಮತ್ತು ಮಕ್ಕಳ ನಡುವಿನ ಸಂಬಂಧದ ಮೌಲ್ಯ ಕಡಿಮೆಯಾಗುತ್ತಿವೆ. ಹೀಗಾಗಿ ಸರ್ಕಾರಿ ಶಾಲೆಯ ಶಿಕ್ಷಕರು ಮಕ್ಕಳಲ್ಲಿ ತಮ್ಮ ತಂದೆ ತಾಯಿಗಳ ಮೇಲೆ ಗೌರವ ಹೆಚ್ಚಿಸುತ್ತಿರುವ ಕಾರ್ಯ ಶ್ಲಾಘನೀಯವಾಗಿದ್ದು. ಇಡೀ ದೇಶದ ಸರ್ಕಾರಿ ಶಾಲೆಗಳಿಗೆ ಇದೊಂದು ಮಾದರಿ ಶಾಲೆಯಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.