Padma Sri-Padma Vibhushana Awardees: ಬೆಂಗಳೂರು/ನವದೆಹಲಿ: 74ನೇ ಗಣರಾಜ್ಯೋತ್ಸವ ಅಂಗವಾಗಿ ಕರ್ನಾಟಕದ ರಾಣಿ ಮಾಚಯ್ಯ (ಕೊಡವ ನೃತ್ಯ ) ಹಾಗೂ ಮುನಿವೆಂಕಟಪ್ಪ (ತಮಟೆ ವಾದನ ) ಅವರಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ ಆಗಿದೆ. ಇನ್ನು ರಾಜ್ಯದ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಗುತ್ತಿದೆ.


COMMERCIAL BREAK
SCROLL TO CONTINUE READING

ಕರ್ನಾಟಕದ ಕಲಾವಿದರಾದ ರಾಣಿ ಮಾಚಯ್ಯ ಮತ್ತು ಮುನಿವೆಂಕಟಪ್ಪ ಅವರು ಕಲಾದೇವಿಗೆ ತಮ್ಮದೇ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಭಾರತ ಸರ್ಕಾರ ಇವರ ಸೇವೆಯನ್ನು ಗುರುತಿಸಿ ಪದ್ಮಶ್ರೀ ಪ್ರಶಸ್ತಿಯನ್ನ ಘೋಷಣೆ ಮಾಡಿ ಗೌರವ ಸಲ್ಲಿಸಿದೆ.


ಇದನ್ನೂ ಓದಿ: ʼರಾಜ್ಯದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗೆ ರಾಷ್ಟ್ರಪತಿ ಪದಕʼ


ರಾಣಿ ಮಾಚಯ್ಯ ಪರಿಚಯ :


ರಾಣಿ ಮಾಚಯ್ಯ (79) ಕಲೆ ವಿಭಾಗದಲ್ಲಿ ಜಾನಪದ ಸೇವೆಗೆ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರಿಗೆ "ಉಮ್ಮತ್ತಾಟ್ ನ ರಾಣಿ " ಎಂದು ಕೊಡವ ಜನ ಈಗಾಗಲೇ ಬಿರುದು ನೀಡಿದ್ದಾರೆ. ಉಮ್ಮತ್ತಾಟ್ ನೃತ್ಯ ಕಲಾವಿದೆ ಆಗುವ ಜೊತೆಗೆ ಕೊಡವ ಸಂಸ್ಕೃತಿ ರಕ್ಷಣೆಯನ್ನು ಇವರು ಮಾಡುತ್ತಿದ್ದಾರೆ. ಈ ಹಿಂದೆ ಇವರು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಆಗಿ ಸೇವೆ ಸಲ್ಲಿಸಿದ್ದರು. ಇದಲ್ಲದೆ ಅನೇಕ ಮಹಿಳೆಯರಿಗೆ ಉಮ್ಮತ್ತಾಟ್ ನೃತ್ಯವನ್ನು ಹೇಳಿಕೊಡುತ್ತಿದ್ದಾರೆ ಕೊಡವಿನ ಉಮ್ಮತ್ತಾಟ್ ನ ರಾಣಿ.


ಮುನಿವೆಂಕಟಪ್ಪ :


ಚಿಕ್ಕಬಳ್ಳಾಪುರ ಮೂಲದ ಮುನಿವೆಂಕಟಪ್ಪ (72) "ತಮಟೆಯ ಪಿತಾಮಹ" ಎಂದು ಹೆಸರುವಾಸಿಯಾದವರು. ಇವರಿಗೆ ಸಹ ಕಲೆ  (ಜಾನಪದ ಸಂಗೀತ) ವಿಭಾಗದಲ್ಲಿ ಪದ್ಮಶ್ರೀ ಪ್ರಶಸ್ತಿ ಘೋಷಣೆ ಮಾಡಿದ್ದಾರೆ. ಜಾನಪದ ಸಂಗೀತದ ವಾದ್ಯವಾದ ತಮಟೆ ವಾದನವನ್ನ ಹಲವು ವರ್ಷಗಳಿಂದ ವಾದಿಸುವ ಜೊತೆಗೆ ಜಾನಪದ ಸಂಗೀತ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಹಳೆ ಮೈಸೂರು ಭಾಗದ "ತಮಟೆ" ಕೈ ಇಂದ ವಾದಿಸಲಾಗುತ್ತದೆ. ತಮಟೆ ರಾಜ್ಯದಲ್ಲಿ ಹೆಸರು ಮಾಡಿದ್ದು, ಸಮಾರಂಭಗಳಲ್ಲಿ ಇದನ್ನ ಬಳಕೆ ಮಾಡಲಾಗುತ್ತದೆ. 16ನೇ ವಯಸ್ಸಿನಿಂದ ತಮಟೆ ವಾದನ ಪ್ರಾರಂಭ ಮಾಡಿದ್ದ ಮುನಿವೆಂಕಟಪ್ಪ, ಯುವಕರಿಗೆ ಹಾಗೂ ಉದಯೋನ್ಮುಖ ಕಲಾವಿದರಿಗೆ ಇವರು ತಮಟೆ ತರಬೇತಿ ನೀಡುತ್ತಿದ್ದಾರೆ.


ಇದನ್ನೂ ಓದಿ: 59 ಯೋಜನೆಗಳ ರೂ. 3,455.39 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಏಕಗವಾಕ್ಷಿ ಸಮಿತಿ ಅನುಮೋದನೆ


ಉಭಯ ಕಲಾವಿದರನ್ನ ಸೇರಿಸಿ ಆಂಧ್ರಪ್ರದೇಶದಿಂದ  ಒಬ್ಬರು, ಅಂಡಮಾನ್ ದ್ವೀಪದಿಂದ ಒಬ್ಬರು, ಕೇರಳದಿಂದ ಒಬ್ಬರು, ತಮಿಳುನಾಡು ಒಬ್ಬರು, ತೆಲಂಗಾಣ ಒಬ್ಬರಿಗೆ ಪದ್ಮಶ್ರೀ ಪ್ರಶಸ್ತಿಯನ್ನ (ದಕ್ಷಿಣ ಭಾರತ )ಘೋಷಣೆ ಮಾಡಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.