ಬೆಂಗಳೂರು : ಗಣರಾಜ್ಯೋತ್ಸದ ಹಿನ್ನೆಲೆ ಪ್ರತಿ ವರ್ಷದಂತೆ ನೀಡುವ ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಹಾಗೂ ಪೊಲೀಸ್ ಶ್ಲಾಘನೀಯ ಸೇವಾ ಪದಕ ವಿಜೇತರ ಪಟ್ಟಿ ಬಿಡುಗಡೆಯಾಗಿದೆ. ಈ ಬಾರಿ ರಾಜ್ಯದ 20 ಜನ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜ್ಯದ ಓರ್ವ ಹಿರಿಯ ಐಪಿಎಸ್ ಅಧಿಕಾರಿಗೆ ರಾಷ್ಟ್ರಪತಿಯವರ ಸೇವಾ ಪದಕ ಹಾಗೂ 19 ಜನ ಅಧಿಕಾರಿ ಮತ್ತು ಸಿಬ್ಬಂದಿಗೆ ಪೊಲೀಸ್ ಶ್ಲಾಘನೀಯ ಸೇವಾ ಪದಕ ಒಲಿದಿದೆ.
ಸಿಐಡಿ ಎಡಿಜಿಪಿ ಕೆ.ವಿ ಶರತ್ ಚಂದ್ರ ರಾಷ್ಟ್ರಪತಿಯವರ ಸೇವಾ ಪದಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ರಾಜ್ಯ ಗುಪ್ತವಾರ್ತೆಯ ಹೆಚ್ಚುವರಿ ನಿರ್ದೇಶಕ ಲಾಭುರಾಮ್ ಅವರಿಗೆ ಪೊಲೀಸ್ ಶ್ಲಾಘನೀಯ ಸೇವಾ ಪದಕ ಒಲಿದಿದೆ. ಇನ್ನೂಳಿದಂತೆ ಪೊಲೀಸ್ ಪ್ರಧಾನ ಕಚೇರಿಯ ಡಿವೈಎಸ್ಪಿ ಎಸ್.ನಾಗರಾಜು, ಕರ್ನಾಟಕ ಕಾನೂನು ಪ್ರಾಧಿಕಾರದ ಡಿವೈಎಸ್ಪಿಗಳಾದ ಪಿ ವೀರೆಂದ್ರ ಕುಮಾರ್ ಹಾಗೂ ಪಿ.ಪ್ರಮೋದ್ ಕುಮಾರ್, ಕರ್ನಾಟಕ ಲೋಕಾಯುಕ್ತದ ಡಿವೈಎಸ್ಪಿ ಸಿದ್ದಲಿಂಗಪ್ಪ ಗೌಡ ಆರ್ ಪಾಟೀಲ್,
ಇದನ್ನೂ ಓದಿ: 59 ಯೋಜನೆಗಳ ರೂ. 3,455.39 ಕೋಟಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳಿಗೆ ಏಕಗವಾಕ್ಷಿ ಸಮಿತಿ ಅನುಮೋದನೆ
ಎಸ್.ಟಿ.ಎಫ್ ಎನ್‌ಕ್ರೋಚ್ಮೆಂಟ್ ಡಿವೈಎಸ್ಪಿ ದೀಪಕ್, ನಗರ ವಿಶೇಷ ವಿಭಾಗದ ಡಿವೈಎಸ್ಪಿ ವಿಜಯ್.ಎಚ್, ಮಾದನಾಯಕನಹಳ್ಳಿ ಪೊಲೀಸ್ ಠಾಣಾ ಇನ್ಸ್‌ಪೆಕ್ಟರ್ ಬಿ.ಎಸ್.ಮಂಜುನಾಥ್, ಅಶೋಕನಗರ ಸಂಚಾರಿ ಠಾಣಾ ಇನ್ಸ್‌ಪೆಕ್ಟರ್ ರಾವ್ ಗಣೇಶ್ ಜನಾರ್ಧನ್, ದಾವಣಗೆರೆ ಸಂಚಾರ ವಿಭಾಗದ ಸರ್ಕಲ್ ಇನ್ಸ್‌ಪೆಕ್ಟರ್ ಆರ್.ಪಿ.ಅನಿಲ್, ಬೆಂಗಳೂರು ನಗರ ಸಂಚಾರ ಮತ್ತು ಯೋಜನಾ ವಿಭಾಗದ ಇನ್ಸ್‌ಪೆಕ್ಟರ್ ಮನೋಜ್ ಹೋವಳೆ, ಬೆಂಗಳೂರು ಕೆಎಸ್ಆರ್‌ಪಿ ಇನ್ಸ್‌ಪೆಕ್ಟರ್ ಬಿ.ಟಿ.ವರದರಾಜು,
ಬೆಂಗಳೂರು ಕೆಎಸ್ಆರ್‌ಪಿ ಎಆರ್ಎಸ್ಐಗಳಾದ ಟಿ.ಎ.ನಾರಾಯಣ್ ರಾವ್, ಎಸ್.ಎಸ್.ವೆಂಕಟರಮಣ ಗೌಡ, ಎಸ್.ಎಂ.ಪಾಟೀಲ್, ಸಿಐಡಿಯ ಹೆಡ್ ಕಾನ್ಸ್‌ಟೇಬಲ್ ಪ್ರಸನ್ನ ಕುಮಾರ್, ತುಮಕೂರು ಸಂಚಾರ ಪಶ್ಚಿಮ ಪೊಲೀಸ್ ಠಾಣಾ ಹೆಡ್ ಕಾನ್ಸ್‌ಟೇಬಲ್ ಪ್ರಭಾಕರ್ ಎಚ್, ಬೆಂಗಳೂರು ಎಸ್.ಸಿ.ಆರ್.ಬಿಯ ಮಹಿಳಾ ಹೆಡ್ ಕಾನ್ಸ್‌ಟೇಬಲ್ ಡಿ.ಸುಧಾ, ಸಿಟಿ ಕಂಟ್ರೋಲ್ ರೂಮ್ ಹೆಡ್ ಕಾನ್ಸ್‌ಟೇಬಲ್ ಟಿ.ಆರ್.ರವೀಂದ್ರ ಕುಮಾರ್ ಪೊಲೀಸ್ ಶ್ಲಾಘನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.