Chikkodi : ಕರ್ನಾಟಕದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ವಿಜಯೋತ್ಸವದ ಸಂದರ್ಭದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೇಳಿಬಂದಿದೆ. 


COMMERCIAL BREAK
SCROLL TO CONTINUE READING

ಕರ್ನಾಟಕದ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಮಧ್ಯಾಹ್ನ 1 ಗಂಟೆಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮುನ್ನಡೆ ಸಾಧಿಸಿದ್ದು, ಈ ಮೂಲಕ  ಪ್ರಸ್ತುತ ಭಾರತೀಯ ಜನತಾ ಪಕ್ಷದ (ಬಿಜೆಪಿ) ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರನ್ನು ಹಿಂದಿಕ್ಕಿದರು. 


ಇದನ್ನು ಓದಿ : ವಿರೋಚಿತ ಗೆಲುವು ಸಾಧಿಸಿದ ಪವನ್‌ಗೆ ತಿಲಕ ಇಟ್ಟ ಪತ್ನಿ, ತಂದೆಯ ಕಂಡು ಭಾವುಕನಾದ ಮಗ..!


ಲೋಕೋಪಯೋಗಿ ಇಲಾಖೆ (ಪಿಡಬ್ಲ್ಯುಡಿ) ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರಿ 27 ವರ್ಷದ ಪ್ರಿಯಾಂಕಾ ಮತ್ತು 60 ವರ್ಷದ ಅನುಭವಿ ಜೊಲ್ಲೆ ನಡುವಿನ ಪೈಪೋಟಿಗೆ ವೇದಿಕೆ ಸಿದ್ಧವಾಗಿದೆ. ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆ ಎಂದು ಪರಿಗಣಿಸಲಾಗಿದ್ದ ಈ ಕ್ಷೇತ್ರವು ಒಂದು ಕಾಲಘಟ್ಟದಲ್ಲಿ ಪಕ್ಷದ ಹಿಡಿತದಿಂದ ಕೈತಪ್ಪಿ 2004ರಿಂದ ಬಿಜೆಪಿಯಲ್ಲಿದೆ.


ಚುನಾವಣಾ ಹಣಾಹಣಿಯು ಜಿಲ್ಲೆಯ ಎರಡು ಪ್ರಭಾವಿ ರಾಜಕೀಯ ಕುಟುಂಬಗಳಾದ ಜಾರಕಿಹೊಳಿ ಮತ್ತು ಜೊಲ್ಲೆ ನಡುವಿನ ವಿಶಾಲವಾದ ಅಧಿಕಾರದ ಹೋರಾಟದ ಸಂಕೇತವಾಗಿತ್ತು. ಹಾಗೆಯೇ ಮುಂದುವರಿದ ಚುನಾವಣಾ ಕಾಳಗದಲ್ಲಿ ಚಿಕ್ಕೋಡಿಯಲ್ಲಿ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ ಸತೀಶ್‌ ಜಾರಕಿಹೊಳಿ ಪುತ್ರಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಗೆಲವು ದಾಖಲಿಸಿದರು.


ಇದನ್ನು ಓದಿ :"ಎರಡು ತಿಂಗಳು ನನ್ನೊಂದಿಗಿದ್ದರೆ ನಾಯಕಿ ಅವಕಾಶ ನೀಡುತ್ತೇನೆ" ನಿರ್ದೇಶಕರ ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ!


 ಇದೇ ವೇಳೆ ಆರ್‌.ಡಿ. ಕಾಲೇಜಿನ ಎದುರು ಮಂಗಳವಾರ ಕಾಂಗ್ರೆಸ್‌ ಕಾರ್ಯಕರ್ತರು ವಿಜಯೋತ್ಸವ ನಡೆಸುತ್ತಿದ್ದ ವೇಳೆ, ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂಬ ಘೋಷಣೆ ಕೂಗಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆಸಿದ್ದಾರೆ.‘ಪಾಕಿಸ್ತಾನ್‌ ಜಿಂದಾಬಾದ್‌’ ಎಂಬ ಘೋಷಣೆ ಕೂಗಿದ ಜಮೀರ್‌ ನಾಯ್ಕವಾಡಿ(26) ಎಂಬಾತನನ್ನು ವಶಕ್ಕೆ ಪಡೆದಿದ್ದೇವೆ. ಕಾನೂನು ಪ್ರಕಾರ ಕ್ರಮ ಜರುಗಿಸಿದ್ದೇವೆ’ ಎಂದು ಎಸ್ಪಿ ಭೀಮಾಶಂಕರ ಗುಳೇದ ತಿಳಿಸಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.