"ಎರಡು ತಿಂಗಳು ನನ್ನೊಂದಿಗಿದ್ದರೆ ನಾಯಕಿ ಅವಕಾಶ ನೀಡುತ್ತೇನೆ" ನಿರ್ದೇಶಕರ ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ!

Actress About Casting Couch: ಕಿರುತೆರೆಯಿಂದ ಬಾಲಿವುಡ್‌ ವರೆಗೆ ತನ್ನದೇ ಆದ ಛಾಪು ಮೂಡಿಸಿರುವ ಮಿತಾ ವಶಿಷ್ಟ್ ಸೂಪರ್‌ಹಿಟ್ ಧಾರಾವಾಹಿಗಳ ಹೊರತಾಗಿ ಅನೇಕ ಅತ್ಯುತ್ತಮ ಚಿತ್ರಗಳನ್ನು ನೀಡಿದ್ದಾರೆ. ಆದರೆ ಇಂಡಸ್ಟ್ರಿಯಲ್ಲಿ ಛಾಪು ಮೂಡಿಸುವ ಪಯಣ ಅವರಿಗೆ ತುಂಬಾ ಕಷ್ಟಕರವಾಗಿತ್ತು.  

Written by - Savita M B | Last Updated : Jun 4, 2024, 05:00 PM IST
  • ಮೀತಾ ವಶಿಷ್ಠ ಅವರು ಚಾಂದಿನಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು
  • ಒಂದು ಕಾಲದಲ್ಲಿ ಮೀತಾ ಅವರನ್ನು ನಾಯಕಿ ಪಾತ್ರಕ್ಕೆ ಹಾಕಬೇಕು ಎಂದಾಗ ನಿರ್ದೇಶಕರು ಷರತ್ತು ಹಾಕಿದ್ದರು.
 "ಎರಡು ತಿಂಗಳು ನನ್ನೊಂದಿಗಿದ್ದರೆ ನಾಯಕಿ ಅವಕಾಶ ನೀಡುತ್ತೇನೆ" ನಿರ್ದೇಶಕರ ಕರಾಳ ಮುಖ ಬಿಚ್ಚಿಟ್ಟ ಖ್ಯಾತ ನಟಿ! title=

Actress mita vashisht: ಮೀತಾ ವಶಿಷ್ಠ ಅವರು ಚಾಂದಿನಿ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದಲ್ಲದೆ, ಅವರು 'ದಿಲ್', 'ದ್ರೊಹ್ಕಾಲ್', 'ಗುಲಾಮ್', 'ತಾಲ್' ಮತ್ತು 'ಕುಚ್ ಖಟ್ಟಿ ಕುಚ್ ಮೀಥಿ' ನಂತಹ ಅನೇಕ ಸೂಪರ್ಹಿಟ್ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೆ ಒಂದು ಕಾಲದಲ್ಲಿ ಮೀತಾ ಅವರನ್ನು ನಾಯಕಿ ಪಾತ್ರಕ್ಕೆ ಹಾಕಬೇಕು ಎಂದಾಗ ನಿರ್ದೇಶಕರು ಷರತ್ತು ಹಾಕಿದ್ದರು. 

ಇದನ್ನೂ ಓದಿ-ವಸಿಷ್ಠ ಸಿಂಹ ಅಭಿನಯದ "Love ಲಿ" ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ ರಿಷಬ್ ಶೆಟ್ಟಿ : ಜೂನ್ 14 ರಂದು ಚಿತ್ರ ತೆರೆಗೆ

ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಮೀತಾ ವಶಿಷ್ಠ "ದಕ್ಷಿಣದ ನಿರ್ದೇಶಕರೊಬ್ಬರು ನನಗೆ ನಾಯಕಿ ಪಾತ್ರವನ್ನು ಆಫರ್ ಮಾಡಿದ್ದರು.. ಅವರನ್ನು ಭೇಟಿ ಮಾಡಲು ಹೋದೆ.. ಆಗ ಆ ನಿರ್ದೇಶಕ ನನಗೆ ಎರಡು ತಿಂಗಳು ನನ್ನ ಜೊತೆ ಇರಲೇಬೇಕು ಅಂದಾಗ ಮಾತ್ರ ನಾಯಕಿ ಪಾತ್ರ ನೀಡುತ್ತೇನೆ ಎಂದರು.. ಆಗ ನಾನು ರಾಜಿ ಮಾಡಿಕೊಳ್ಳದೇ ನಿಮ್ಮ ಆ ನಾಯಕಿ ಪಾತ್ರವನ್ನು ನಿಮ್ಮಲ್ಲೆ ಇಟ್ಟುಕೊಳ್ಳಿ ಎಂದು ತಿರಸ್ಕರಿಸಿದೆ.. ನಟನೆ ಒಂದು ಕಲೆ, ನಾನು ಹಲವು ಶ್ರೇಷ್ಠ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದೇನೆ ಆದರೆ ನನ್ನದೇ ಆದ ರೀತಿಯಲ್ಲಿ ಕೆಲಸ ಮಾಡಿದ್ದೇನೆ" ಎಂದು ನಟಿ ಕರಾಳ ಸತ್ಯವನ್ನು ಬಹಿರಂಗಪಡಿಸಿದ್ದಾರೆ..  

ಇದನ್ನೂ ಓದಿ-Lok Sabha Election: ಇಂದು ಕಂಗನಾ ಭವಿಷ್ಯ ನಿರ್ಧಾರ, ಚುನಾವಣೆಯಲ್ಲಿ ಗೆದ್ದರೆ ಚಿತ್ರರಂಗ ತೊರೆಯುತ್ತಾರಾ ಬಾಲಿವುಡ್ ಕ್ವೀನ್?

 ಇನ್ನು ಮಿತಾ ವಶಿಷ್ಠ ಅವರು ಹೆಚ್ಚಾಗಿ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡ ನಟಿ. ಅವರು ಕಹಾನಿ ಘರ್ ಘರ್ ಕಿ, ಕಾಲಾ ಟೀಕಾ, ಜೋಧಾ ಅಕ್ಬರ್, ಕ್ರಿಮಿನಲ್ ಜಸ್ಟೀಸ್‌ನಂತಹ ಅನೇಕ ಜನಪ್ರಿಯ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಇದರಿಂದ ಫೇಮಸ್ ಆದ ನಂತರ ನಟಿ ಬಾಲಿವುಡ್ ಕಡೆ ಮುಖ ಮಾಡಿದ್ದಾಳೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News