ಸ್ವಾಮೀಜಿಗಳು24 ಗಂಟೆಗಳ ಗಡುವು ನೀಡಿದ್ದು ಸರಿಯಲ್ಲ!
ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಗಳು 24 ಗಂಟೆಗಳ ಗಡುವು ನೀಡಿರುವುದಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿಂದು ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್, ಹಿಂದುಳಿದ ಉಪಜಾತಿಗೆ ಅನ್ಯಾಯ ಆಗದಂತೆ ನೋಡಬೇಕು ಎಂಬುವುದು ಸಿಎಂಗೆ ಇರುವ ಅಭಿಪ್ರಾಯ.
ಬೆಂಗಳೂರು : ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಜಯ ಮೃತ್ಯುಂಜಯ ಸ್ವಾಮೀಜಿಗಳು 24 ಗಂಟೆಗಳ ಗಡುವು ನೀಡಿರುವುದು ಸರಿಯಲ್ಲ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಹೇಳಿದ್ದಾರೆ.
ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಸ್ವಾಮೀಜಿಗಳು 24 ಗಂಟೆಗಳ ಗಡುವು ನೀಡಿರುವುದಕ್ಕೆ ಸಂಬಂಧಿಸಿದಂತೆ ವಿಧಾನಸೌಧದಲ್ಲಿಂದು ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್, ಹಿಂದುಳಿದ ಉಪಜಾತಿಗೆ ಅನ್ಯಾಯ ಆಗದಂತೆ ನೋಡಬೇಕು ಎಂಬುವುದು ಸಿಎಂಗೆ ಇರುವ ಅಭಿಪ್ರಾಯ. ಈಗಾಗಲೇ ಸಿಎಂ ಹಾಗೂ ನಾನು ಹೋರಾಟ ಮಾಡುವವರ ಜೊತೆಗೆ ಮಾತನಾಡುತ್ತಿದ್ದೇವೆ. ಬನ್ನಿ ಮಾತಾಡೋಣ, 24 ಗಂಟೆಯಲ್ಲಿ ಮೀಸಲಾತಿ ನಿರ್ಧಾರ ಮಾಡೋಕೆ ಆಗಲ್ಲ, ಎಂದು ಸ್ವಾಮೀಜಿಗಳಿಗೆ ಮಾತುಕತೆಗೆ ಆಹ್ವಾನ ನೀಡಿದರು.
ಇದನ್ನೂ ಓದಿ- ನಾನು ಬಿಜೆಪಿ ಸೇರ್ಪಡೆ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ: ಸಂಸದೆ ಸುಮಲತಾ ಅಂಬರೀಶ್
ಜಯಮೃತ್ಯಂಜಯ ಸ್ವಾಮೀಜಿ 24 ಗಂಟೆಗಳ ಒಳಗೆ ಪಂಚಮಸಾಲಿ ಸಮುದಾಯದಕ್ಕೆ 2ಎ ಮೀಸಲಾತಿ ನೀಡಬೇಕು ಎಂದಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಸಿಸಿ ಪಾಟೀಲ್, ಅವರ ಹೋರಾಟವನ್ನು ಸಮುದಾಯದ ನಾಯಕನಾಗಿ ನಾನು ಅಭಿನಂದಿಸುತ್ತೇನೆ. ಹಿಂದೊಮ್ಮೆ ಪಾದಯಾತ್ರೆ ಮಾಡುವಾಗ ನಾವು ಸಾಕಷ್ಟು ಸಹಕಾರ ಕೊಟ್ಟಿದ್ದೆವು. .ಅಂದು ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ ಸಂಪೂರ್ಣ ಸಹಕಾರ ನೀಡಿದ್ದರು. 750 ಕಿಮೀ ಪಾದಯಾತ್ರೆಗೆ ನಾನು ಕೂಡ ಸಹಾಯ ಮಾಡಿದ್ದೆ, ಸಮಾವೇಶದಲ್ಲಿ ಸಚಿವರಾಗಿದ್ದರೂ ಸಮಾಜದ ಏಳಿಗೆಗಾಗಿ ನಾನು ಭಾಗಿಯಾಗಿದ್ದೆ. ಇದರಿಂದಲೇ ಸಿಎಂ ಬಸವರಾಜ ಬೊಮ್ಮಾಯಿ ಹಿಂದುಳಿದ ವರ್ಗಗಳ ಆಯೋಗ ರಚನೆ ಮಾಡುತ್ತಾರೆ. ಯಾವುದೇ ಒತ್ತಡಕ್ಕೆ ಮಣಿಯದೇ ಹಿಂದುಳಿದ ಆಯೋಗ ರಚನೆ ಮಾಡಿ,ಪ್ರತಿಯೊಂದು ಜಿಲ್ಲೆಗೆ ಹೋಗಿ ಜಯಪ್ರಕಾಶ್ ನಾರಾಯಣ್ ಅವರು ಕುಲಶಾಸ್ತ್ರದ ಅಧ್ಯಯನ ಮಾಡಿದ್ರು. ಕೋವಿಡ್ ಹಿನ್ನಲೆಯಲ್ಲಿ ಕೆಲವೊಂದು ಹಿನ್ನಡೆ ಆಯ್ತು. ಯತ್ನಾಳ್, ಕಾಶಪ್ಪನವರ್, ಲಕ್ಮಿ ಹೆಬ್ಬಾಳ್ಕರ್ ಹೇಳಿದ ನಂತರ, ಸಿಎಂ ಬಸವರಾಜ ಬೊಮ್ಮಾಯಿ ತಮ್ಮಷ್ಟಕ್ಕೆ ತಾವೇ ಗಡುವು ಹಾಕಿಕೊಂಡ್ರು. ಒತ್ತಡದಲ್ಲಿ ಸಿಎಂ ಮಧ್ಯಂತರ ವರದಿಯನ್ನು ತರಿಸಿಕೊಂಡರು. ಮಧ್ಯಂತರ ವರದಿಯಲ್ಲಿ ಪೂರಕವಾದ ಮಾಹಿತಿ ಇದೆ ಅನ್ಸುತ್ತೆ. ಪಂಚಮಸಾಲಿಗೆ ಯಾವುದೇ ಅನ್ಯಾಯ ಆಗಲ್ಲ, ಸ್ವಾಮೀಜಿಗೆ ಅವರಿಗೆ ಚುನಾವಣೆ ನೀತಿ ಸಂಹಿತೆ ಎದುರಾಗುವ ಭಯ ಇದೆ ಅನ್ಸುತ್ತೆ, ಎಂದರು.
ಸರ್ಕಾರ ಸರಿಯಾದ ಮಾರ್ಗದಲ್ಲಿ ಸಾಗುತ್ತಿದೆ, ಮೀಸಲಾತಿ ವಿಚಾರದಲ್ಲಿ ಸರಿಯಾದ ಮಾರ್ಗದಲ್ಲಿ ಸರ್ಕಾರ ಸಾಗ್ತಿದೆ. ಯಾರ ಪಿತೂರಿ ಇದರಲ್ಲಿ ಇಲ್ಲ. ಮೀಸಲಾತಿ ಬೇಡಿಕೆ ಈಡೇರಿಸುವ ಬಗ್ಗೆ ಸಿಎಂ ಭಾವನಾತ್ಮಕವಾಗಿ ಮಾತಾಡಿದ್ರು, ನಂತರ ಹೋರಾಟಗಾರರ ಭೇಟಿ ಮಾಡಿ ಸಂಪುಟದ ನಿರ್ಧಾರ ತಿಳಿಸಲಾಯ್ತು. ಸಮುದಾಯಕ್ಕೆ ಕಾನೂನಾತ್ಮಕ ಮೀಸಲಾತಿ ಕೊಡೋದು ಸಿಎಂ ಉದ್ದೇಶ. 2ಎಗೆ ಸೇರಿಸಬಾರದು ಅನ್ನುವ ಉದ್ದೇಶ ಇರಲಿಲ್ಲ, ಎಂದು ಸ್ಪಷ್ಟಿಕರಣ ನೀಡಿದರು.
ಇದನ್ನೂ ಓದಿ- ಆಟೋ ಚಾಲಕರ ಸುಲಿಗೆಗೆ ಲಗಾಮು ಹಾಕಲು ಮುಂದಾದ ಸಂಚಾರಿ ಪೊಲೀಸರು, BMRCL
ಪ್ರಭಾವಿ ರಾಜಕಾರಣಿಗಳ ಜೊತೆ ಸ್ಯಾಂಟ್ರೋ ರವಿ ಫೋಟೋ ವಿವಾದ:
ಲೋಕೋಪಯೋಗಿ ಅಧೀನದಲ್ಲಿ ಇರುವ ಕಾವೇರಿ ಗೆಸ್ಟ್‌ಹೌಸ್,ಕೆ.ಕೆ ಗೆಸ್ಟ್ ಹೌಸ್ ನಲ್ಲಿ ಉಳಿದುಕೊಂಡಿದ್ದ ಸ್ಯಾಂಟ್ರೋ ರವಿ ಹಿನ್ನಲೆ ಕಾವೇರಿ ಗೆಸ್ಟ್‌ಹೌಸ್ ಯಾರೆಲ್ಲ ಇದ್ದರು ಲೋಕೋಪಯೋಗಿ ಇಲಾಖೆ ವರದಿ ಕೇಳಿದೆ.ಗೆಸ್ಟ್ ಹೌಸ್ ನಲ್ಲಿ ಯಾರು ಇದ್ದಾರೆ..? ಎಷ್ಟು ಸಮಯದಿಂದ ಇದ್ದಾರೆ ಎಂಬ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ.
ಇದೇ ಸಂದರ್ಭದಲ್ಲಿ ಮಾತಾನ್ನಾಡಿದ ಸಿಸಿ ಪಾಟೀಲ್,ಸ್ಯಾಂಟ್ರೋ ರವಿ ಯಾರು ಎಂದು ಗೊತ್ತಿಲ್ಲ.ನಿನ್ನಯೇ ಅವರ ಹೆಸರು ಗೊತ್ತಾಗಿರೋದು.ಕೆಕೆ ಗೆಸ್ಟ್ ಹೌಸ್ ನನ್ನ ಅಂಡರ್ ಗೆ ಬರುವುದಿಲ್ಲ.ನಮ್ಮ ಕ್ಷೇತ್ರದಿಂದ ಯಾರಾದ್ರೂ ಬಂದ್ರೆ ರೂಮ್ ವ್ಯವಸ್ಥೆ ಮಾಡುತ್ತಿದ್ದೆ ಅಷ್ಟೇ.ಕೆಕೆ ಗೆಸ್ಟ್ ಹೌಸ್ DPR ಅಂಡರ್ ಗೆ ಬರುತ್ತದೆ, ಎಂದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.