ದೋಭಿಘಾಟ್‌ಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಗೆ ವಿಶೇಷ ಯೋಜನೆ: ಸಿಎಂ ಬೊಮ್ಮಾಯಿ

CM Basavaraj Bommai : ರಾಜ್ಯದ  ನಗರಗಳಲ್ಲಿರುವ  ದೋಭೀಘಾಟ್ ಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸರ್ಕಾರ ವಿಶೇಷವಾಗಿರುವ ಸಹಾಯಧನ, ಯೋಜನೆಯನ್ನು ಮುಂದಿನ ಬಜೆಟ್ ನಲ್ಲಿ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Written by - Prashobh Devanahalli | Edited by - Zee Kannada News Desk | Last Updated : Jan 5, 2023, 08:42 PM IST
  • ದೋಭಿಘಾಟ್‌ಗಳಲ್ಲಿ ಆಧುನಿಕ ತಂತ್ರಜ್ಞಾನ
  • ಆಧುನಿಕ ತಂತ್ರಜ್ಞಾನ ಬಳಕೆಗೆ ವಿಶೇಷ ಯೋಜನೆ
  • ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
ದೋಭಿಘಾಟ್‌ಗಳಲ್ಲಿ ಆಧುನಿಕ ತಂತ್ರಜ್ಞಾನ ಬಳಕೆಗೆ ವಿಶೇಷ ಯೋಜನೆ: ಸಿಎಂ ಬೊಮ್ಮಾಯಿ title=
ಬಸವರಾಜ ಬೊಮ್ಮಾಯಿ

ಚಿತ್ರದುರ್ಗ : ರಾಜ್ಯದ  ನಗರಗಳಲ್ಲಿರುವ  ದೋಭೀಘಾಟ್ ಗಳಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿ ದೊಡ್ಡ ಪ್ರಮಾಣದಲ್ಲಿ ಬೆಳೆಯಲು ಸರ್ಕಾರ ವಿಶೇಷವಾಗಿರುವ ಸಹಾಯಧನ, ಯೋಜನೆಯನ್ನು ಮುಂದಿನ ಬಜೆಟ್ ನಲ್ಲಿ ಘೋಷಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಚಿತ್ರದುರ್ಗದ ಮಾಚೀದೇವ ಮಹಾಸಂಸ್ಥಾನದ ವತಿಯಿಂದ ಆಯೋಜಿಸಿದ್ದ ಕಾಯಕ ಜನೋತ್ಸವ- 2023 ಮತ್ತು ಶ್ರೀ ಮಾಚೀದೇವ ಮಹಾದ್ವಾರ ಉದ್ಘಾಟಿಸಿ ಮಾತನಾಡಿದರು.

ಈಗಾಗಲೇ ಸುಮಾರು  8 ದೋಭಿಘಾಟ್ ನಲ್ಲಿ ಆಧುನಿಕ ಯಂತ್ರೋಪಕರಣಗಳನ್ನು  ಅಳವಡಿಸಲಾಗಿದೆ.  ಆದರೆ ಇಂದಿನ ಕಾಲದಲ್ಲಿ ಮಕ್ಕಳು ಕುಲಕಸುಬನ್ನೇ ಮಾಡಲು ಸಾಧ್ಯವಿಲ್ಲ. ಬೇರೆ ಬೇರೆ ವೃತ್ತಿಯಲ್ಲಿ ತೊಡಗಬೇಕು.  ಐ.ಎ.ಎಸ್., ಐ.ಪಿ.ಎಸ್ ಅಧಿಕಾರಿಯಾಗಬಹುದು, ವೈದ್ಯ, ಇಂಜಿನಿಯರ್ ಆಗಬೇಕು. ಪ್ರಗತಿಯಾಗಿ ಮುಂದುಹೋಗಬೇಕು. ಸಮಾಜವನ್ನು ಈ ರೀತಿ ತಯಾರು ಮಾಡಲು ಸ್ವಾಮೀಜಿಗಳು ಮುಂದಾಗಬೇಕು.  ಈ ರೀತಿ ಬದಲಾವಣೆಯಾದಾಗ ಸಮಾಜ, ದೇಶಕ್ಕೆ ಒಳ್ಳೆಯದಾಗುತ್ತದೆ. ಮಡಿವಾಳ  ಅಬಿವೃದ್ಧೀ ನಿಗಮಕ್ಕೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡಿ ಯುವಕರಿಗೆ ಸ್ವಯಂಉದ್ಯೋಗ ಮಾಡಲು, ವಿದ್ಯಾರ್ಥಿಗಳಿಗೆ ವಿಶೇಷ ಅನುದಾನ ಹಾಗೂ ಅವಕಾಶಗಳನ್ನು ಹೆಚ್ಚು ಮಾಡಲಾಗುವುದು ಎಂದರು.

ಇದನ್ನೂ ಓದಿ : 2D ಮೀಸಲಾತಿ ತಿರಸ್ಕಾರ: ಸಿಎಂ ಬೊಮ್ಮಾಯಿಗೆ 24 ಗಂಟೆಗಳ ಅಂತಿಮ ಗಡುವು ನೀಡಿದ ಯತ್ನಾಳ್

ಈ ಸಮಾಜವನ್ನು ಗುರುತಿಸಿದ್ದು ಬಿ.ಎಸ್.ಯಡಿಯೂರಪ್ಪನವರು.  ರಾಜಕೀಯವಾಗಿ ಈ ಸಮುದಾಯವನ್ನು ಗುರುತಿಸಿ,  ಸಮಾಜವನ್ನು  ಭೀಷ್ಮರಂತೆ ಮುನ್ನಡೆಸುತ್ತಿದ್ದಾರೆ.  ಸರ್ಕಾರಕ್ಕೆ ಕೂಡ  ಸಮುದಾಯದ ಬಗ್ಗೆ ಕಾಳಜಿ ಇದೆ. ಸಂವಿಧಾನದ ಚೌಕಟ್ಟಿನಲ್ಲಿ ಈ ಸಮುದಾಯದ ಬಹು ದಿನಗಳ ಬೇಡಿಕೆಯ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಯುತ್ತಿದೆ. ಏಳೆಂಟು ವರ್ಷ ಯಾರೂ ಏನೂ ಮಾಡಿಲ್ಲ. ಕಾನೂನಾತ್ಮಕವಾಗಿ ಸಂಪೂರ್ಣವಾಗಿ  ಪರಿಶೀಲಿಸಿ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲಾಗುವುದು. ಸಮುದಾಯದವರು ಸಂಘಟಿತರಾಗಿ ಸ್ವಚ್ಛತೆಯನ್ನು ಪಡೆದುಕೊಂಡು ಸ್ವಾಭಿಮಾನದ ಬದುಕು ಬದುಕಲು ಕ್ರಮ ಕೈಗೊಳ್ಳಾಗುವುದು. ಸರ್ಕಾರ ಈಗಾಗಲೇ ಕಾಯಕ ಯೋಜನೆಯನ್ನು ರೂಪಿಸಿದೆ. ಅನುದಾನವನ್ನು ಇದೇ ವರ್ಷ ಬಿಡುಗಡೆ ಮಾಡಲಾಗುವುದು. ಮಕ್ಕಳಿಗೆ ವಿದ್ಯಾಭ್ಯಾಕ್ಕೆ ಸ್ವಯಂ ಉದ್ಯೋಗಕ್ಕೆ ಅವಕಾಶಗಳನ್ನು ನೀಡಲಾಗಿದೆ. ಇದನ್ನು ಬಳಸಿಕೊಂಡು ಮುಂದೆ ಬರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು. 

ಮಾಚೀದೇವರ ಕಾಯಕನಿಷ್ಠೆ ಮತ್ತು ರಕ್ಷಣೆ ಮಾಡಲು ವೀರತ್ವ ಎರಡೂ ಗುಣಧರ್ಮಗಳನ್ನು ಸಮಾಜದಲ್ಲಿ ಅಳವಡಿಸಿ ಸಂಘಟಿತರಾದರೆ ನ್ಯಾಯ ದೊರಕುತ್ತದೆ ಎಂದರು. ನ್ಯಾಯ ನೀಡುವ ಸಂದರ್ಬದಲ್ಲಿ ಇತರರಿಗೆ ಅನ್ಯಾಯವಾಗದಂತೆ  ಎಚ್ಚರಿಕೆಯಿಂದ ಮಾಡುವ ಜವಾಬ್ದಾರಿಯನ್ನೂ ನಿಭಾಯಿಸಲಾಗುವುದು ಎಂದರು.

ಇದನ್ನೂ ಓದಿ : ಥಿಯೇಟರ್ & OTTಯಲ್ಲಿ ‘ಕಾಂತಾರ’ ಸೂಪರ್ ಹಿಟ್; ಸ್ಟಾರ್ ಸುವರ್ಣದಲ್ಲಿ ದೈವ ದರ್ಶನ!

ಮಡಿವಾಳ ಮಾಚಿದೇವರ ಅಭೂತಪೂರ್ವ ಇತಿಹಾಸ ಇದೆ. ಬಸವಣ್ಣನವರ ಕಾಲದಲ್ಲಿ ಇದ್ದ ಮಹತ್ವದ ಸ್ಥಾನ ಹೊಂದಿದ್ದರು.ಅವರ ಕಾಯಕನಿಷ್ಠೆ ಪ್ರತಿಪಾದಿಸಿದವರು. ಮಡಿವಾಳ ಮಾಚಿದೇವ ಅವರು _354 ವಚನಗಳನ್ನು ರಚನೆ ಮಾಡಿ, ಸಮಾಜದಲ್ಲಿ ಸ್ವಾಭಿಮಾನದ ಸ್ಥಾನ ಪಡೆದುಕೊಂಡಿದ್ದರು. ಅನುಭವ ಮಂಟಪ ಪ್ರವೇಶಿಸಲು ಪರೀಕ್ಷೆ ನಡೆಯುತ್ತಿತ್ತು. ಅದನ್ನು ಮಡಿವಾಳ ಮಾಚಿದೇವ ಅವರು ನಡೆಸುತ್ತಿದ್ದರು‌. ಕೀಳರಿಮೆಯಿಂದ ಹೊರಬಂದು ದಿಟ್ಟತನದಿಂದ ಸ್ವಾಭಿಮಾನದ ಸ್ಥಾನವನ್ನು ಪಡೆದುಕೊಂಡಿದ್ದರು. ಬಸವಣ್ಣನವರು ಕಾಯಕವೇ ಕೈಲಾಸ ಎಂದು ಹೇಳಿದರು.ಕಾಯಕದ ಮೂಲಕ ಸ್ವರ್ಗ ಕಾಣವುದು. ಎಲ್ಲ ಕಾಯಕ ಸಮುದಾಯಗಳನ್ನು ಒಗ್ಗೂಡಿಸಿ ಬಸವಣ್ಣನವರು ಅನುಭವ ಮಂಟಪ ರಚನೆ ಮಾಡಿದರು ಎಂದರು.

ಕಾಯಕ ಮಾಡುವ ಎಲ್ಲ ಸಮುದಾಯಗಳು ಒಟ್ಟಾದಾಗ ಸಾಮಾಜಿಕ ನ್ಯಾಯ ಸಿಗುತ್ತದೆ. ಕಲ್ಯಾಣದಲ್ಲಿ ಕ್ರಾಂತಿಯಾದಾಗ ವಚನ ಸಾಹಿತ್ಯ ರಕ್ಷಣೆ ಮಾಡುವಲ್ಲಿ ಮಡಿವಾಳ ಮಾಚಿದೇವ ಪ್ರಮುಖ ಪಾತ್ರ ವಹಿಸಿದರು. ಅದಕ್ಕೆ ಅವರನ್ನು ವೀರ ಮಡಿವಾಳ ಮಾಚಿದೇವ ಅಂತ ಕರೆಯುತ್ತಾರೆ‌ ಎಂದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News