ಬೆಂಗಳೂರು: ರಾಜ್ಯದ ಬಡಜನತೆಗೆ ರಾಜ್ಯ ಸರ್ಕಾರವು ಮತ್ತೊಂದು ಸಿಹಿಸುದ್ದಿ ನೀಡಿದ್ದು, ರಾಜ್ಯಾದ್ಯಂತ ಮನೆಬಾಗಿಲಿಗೆ ಪಿಂಚಣಿದಾರರಿಗೆ ಪಿಂಚಣಿ ನೀಡುವ ಸೇವೆಯನ್ನು ಆರಂಭಿಸಿದೆ.


COMMERCIAL BREAK
SCROLL TO CONTINUE READING

ವೃದ್ಧರು, ವಿಧವೆಯರು, ವಿಕಲಚೇತನರೂ ಸೇರಿದಂತೆ ಅರ್ಹರಿಗೆ ತೊಂದರೆಯಾಗದಂತೆ ರಾಜ್ಯ ಸರ್ಕಾರದಿಂದ ಪಿಂಚಣಿ(Pension) ಒದಗಿಸುವ ಉದ್ದೇಶದಿಂದ ಮನೆ ಬಾಗಿಲಿಗೆ ಪಿಂಚಣಿ ಸೇವೆಯನ್ನು ಆರಂಭಿಸಿದೆ. ಪ್ರಾಯೋಗಿಕವಾಗಿ ಉಡುಪಿ ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಮನೆ ಬಾಗಿಲಿಗೆ ಪಿಂಚಣಿ ಸೇವೆ ಪರಿಚಯಿಸಲಾಗಿದೆ. 2021 ರ ಜನವರಿ ಅಥವಾ ಫೆಬ್ರವರಿಯಲ್ಲಿ ಈ ಯೋಜನೆ ರಾಜ್ಯಾದ್ಯಂತ ಅನುಷ್ಠಾನಗೊಳ್ಳಲಿದೆ.


ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆಗೆ ಈಗಲೇ ಸಲ್ಲಿಸಿ ಅರ್ಜಿ...!


ಇದುವರೆಗೂ ಅರ್ಜಿ ಸಲ್ಲಿಸದೇ ಇದ್ದರೂ ಕೂಡ ಪಿಂಚಣಿ ಪಡೆಯಲು ಅರ್ಹರಾಗಿದ್ದಾರೆ. ಅಂತಹ ಪಿಂಚಣಿದಾರರಿಗೆ ಮನೆಬಾಗಿಲಿಗೆ ಸಿಬ್ಬಂದಿ ಆಗಮಿಸಿ ದಾಖಲೆ ಪಡೆಯಲಿದ್ದಾರೆ. ಆಧಾರ್ ಕಾರ್ಡ್ ಹಾಗೂ ಓವರ್ ದಿ ಕೌಂಟರ್ ಸರ್ವೀಸ್ ನಡಿ 60 ವರ್ಷ ತುಂಬಿದವರ ವಿವರ, ಪಿಂಚಣಿ ಪಡೆಯಲು ಮಾನದಂಡವಾಗಿರುವ ವಾರ್ಷಿಕ ವರಮಾನ, ಆಸ್ತಿಯ ವಿವರಗಳು ಲಭ್ಯವಾಗಿದ್ದು, ಅರ್ಹ ಕುಟುಂಬಗಳನ್ನು ಗುರುತಿಸಲಾಗುತ್ತದೆ.ಈ ಮಾಹಿತಿ ಆಧಾರದ ಮೇಲೆ ಗ್ರಾಮ ಲೆಕ್ಕಾಧಿಕಾರಿಗಳು ಫಲಾನುಭವಿಗಳ ಮನೆಗಳಿಗೆ ಭೇಟಿ ನೀಡಿ ಕುಟುಂಬದ ಆರ್ಥಿಕ ಪರಿಸ್ಥಿತಿ ಪರಿಶೀಲಿಸಿ ಪಿಂಚಣಿ ಮಂಜೂರಾತಿಗೆ ಕ್ರಮ ಕೈಗೊಳ್ಳಲಿದ್ದಾರೆ.


'ಬಿಜೆಪಿ ಸದಸ್ಯರಿಂದ ನಡೆದಿರುವ ಗೂಂಡಾಗಿರಿ ದೇಶದ ಪ್ರಜಾಪ್ರಭುತ್ವ ಇತಿಹಾಸದ ಕಪ್ಪು ಅಧ್ಯಾಯ'-ಸಿದ್ದರಾಮಯ್ಯ