ಹೀಗೂ ಉಂಟಾ? ಪರೀಕ್ಷಾರ್ಥಿಗಳು ತೊಟ್ಟಿದ್ದ ಉದ್ದ ತೋಳಿನ ಬಟ್ಟೆಗಳನ್ನು ಅರ್ಧಕ್ಕೆ ಕತ್ತರಿಸಿ ಒಳಬಿಟ್ಟ ಸಿಬ್ಬಂದಿ: ಅವರು ಹೀಗೆ ಮಾಡಿದ್ದೇಕೆ?
PDO Exam: ಕಲಿಗಾಲ ಇದು; ಯಾವತ್ತು? ಯಾವ ವಿಷಯಕ್ಕೆ ಯಾವ ಕಾನೂನು ಬರುತ್ತದೆ ಎನ್ನುವುದನ್ನು ಊಹೆ ಮಾಡಲು ಸಾಧ್ಯವಿಲ್ಲ. PDO ಪರೀಕ್ಷೆ ವೇಳೆ ಪರೀಕ್ಷಾ ಕೇಂದ್ರದ ಸಿಬ್ಬಂದಿ ಪರೀಕ್ಷಾರ್ಥಿಗಳು ತೊಟ್ಟಿದ್ದ ಉದ್ದ ತೋಳಿನ ಬಟ್ಟೆಗಳನ್ನು ಅರ್ಧಕ್ಕೆ ಕತ್ತರಿಸಿ ಒಳಬಿಟ್ಟಿದ್ದಾರೆ.
PDO Exam: ನಿನ್ನೆ ಮೊನ್ನೆಯಷ್ಟೇ ರಾಜ್ಯಾದ್ಯಂತ ಪಂಚಾಯತ್ ಡೆವೆಲೆಪ್ಮೆಂಟ್ ಆಫೀಸರ್ (PDO) ಪರೀಕ್ಷೆ ನಡೆದಿದೆ. ಕೆಲವೇ ಕೆಲವು ಹುದ್ದೆಗಳಿಗಾಗಿ ಲಕ್ಷಾಂತರ ಪರೀಕ್ಷಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ ಹಾಸನದ ಎವಿಕೆ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಬಂದ ಅಭ್ಯರ್ಥಿಗಳು ತೊಟ್ಟಿದ್ದ ಉದ್ದ ತೋಳಿನ ಮೇಲಂಗಿಯಲ್ಲಿ ಅರ್ಧ ತೋಳನ್ನು ಕತ್ತರಿಸಿ ಅವರು ಪರೀಕ್ಷಾ ಕೇಂದ್ರ ಪ್ರವೇಶ ಮಾಡುವ ಮುನ್ನವೇ ಶಾಕ್ ಟ್ರೀಟ್ಮೆಂಟ್ ನೀಡಲಾಗಿದೆ.
ಸಾಮಾನ್ಯವಾಗಿ ಅಭ್ಯರ್ಥಿಗಳು ‘ಪ್ರಶ್ನೆಗಳನ್ನು ನೋಡಿ ಭಯಪಡುವುದು’ ಸಾಮಾನ್ಯ. ಆದರೆ ಹಾಸನದಲ್ಲಿ ಪರೀಕ್ಷಾರ್ಥಿಗಳು ಸಿಬ್ಬಂದಿಗಳ ವರ್ತನೆಯಿಂದ ಪರೀಕ್ಷಾ ಕೇಂದ್ರ ಪ್ರವೇಶ ಮಾಡುವ ಮುನ್ನವೇ ಗಾಬರಿಯಾಗಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ತೋಳನ್ನು ಕತ್ತರಿಸಲು ಬಂದ ಸಿಬ್ಬಂದಿಗಳ ಜೊತೆ ಪರೀಕ್ಷಾರ್ಥಿಗಳು ಜಗಳ ಮಾಡಿದ್ದಾರೆ. ಆದರೂ ಒಳಹೋಗಬೇಕಾದರೆ ಅರ್ಧ ತೋಳನ್ನು ಕಟ್ ಮಾಡಿಸಿಕೊಳ್ಳಲೇಬೇಕೆಂದು ಸಿಬ್ಬಂದಿ ಹಠ ಹಿಡಿದು ಕಟ್ ಮಾಡಿಯೇ ಒಳ ಕಳುಹಿಸಿದ್ದಾರೆ.
ಇದನ್ನೂ ಓದಿ- ರಾಜಧಾನಿಯಲ್ಲಿ ಹೆಚ್ಚುತ್ತಿದೆ ಮಂಗಳಮುಖಿಯರ ದೌರ್ಜನ್ಯ..!
ನಂತರ ಈ ಬಗ್ಗೆ ಸ್ಪಷ್ಟಿಕರಣ ನೀಡಿರುವ ಪರೀಕ್ಷಾ ಕೇಂದ್ರದ ಅಧಿಕಾರಿಗಳು ‘ಮುಂಚಿತವಾಗಿಯೇ ವಸ್ತ್ರ ಸಂಹಿತೆ ಬಗ್ಗೆ ಹೇಳಲಾಗಿತ್ತು. ಉದ್ದ ತೋಳಿನ ಅಂಗಿಗಳನ್ನು ತೊಡುವಂತಿಲ್ಲ ಎಂಬ ಮಾಹಿತಿ ನೀಡಲಾಗಿತ್ತು. ಆದರೂ ಕೆಲವು ಪರೀಕ್ಷಾರ್ಥಿಗಳು ಉದ್ದ ತೋಳಿನ ಅಂಗಿ ತೊಟ್ಟು ಬಂದಿದ್ದರು. ಇದರಲ್ಲಿ ವಿದ್ಯಾರ್ಥಿನಿಯರೂ ಇದ್ದರು. ನಾವು ನಮ್ಮ ಕರ್ತವ್ಯ ಪಾಲನೆ ಮಾಡಲೇ ಬೇಕಿದ್ದುದ್ದರಿಂದ ಉದ್ದ ತೋಳನ್ನು ಅರ್ಧಕ್ಕೆ ಕತ್ತರಿಸಿ ಒಳಬಿಟ್ಟಿದ್ದೇವೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ- ಅನ್ನಪೂರ್ಣ ಅವರ ಗೆಲುವು 2028ರ ಚುನಾವಣೆಗೆ ಮುನ್ನುಡಿ: ಡಿಸಿಎಂ ಡಿಕೆ ಶಿವಕುಮಾರ್
ಇದು ಸ್ವಲ್ಪ ವಿಲಕ್ಷಣ ಅಂತಾ ಅನಿಸಿದರೂ ಪರೀಕ್ಷಾ ಕೇಂದ್ರದಲ್ಲಿ ಸಿಬ್ಬಂದಿಗಳು ಅಸಹಾಯಕರಾಗಿದ್ದರು. ಅವರು ಕರ್ತವ್ಯ ಪಾಲನೆ ಮಾಡಲೇಬೇಕಿತ್ತು, ಮಾಡಿದರು. ಆದರೆ ಅಭ್ಯರ್ಥಿಗಳಿಗೆ ಪರೀಕ್ಷೆಗೆ ಹೋಗುವ ಆರಂಭದಲ್ಲೇ ಕಿರಿಕಿರಿಯಾದದ್ದು ಕೂಡ ಬೇಸರದ ವಿಷಯವಾಗಿದೆ. ಈ ಬಗ್ಗೆ ಮೇಲಿನ ಅಧಿಕಾರಿಗೆ ದೂರು ದಾಖಲಾಗಿದೆ. ಏನು ಕ್ರಮ ಆಗುತ್ತದೆ ಎನ್ನುವುದನ್ನು ಕಾದುನೋಡಬೇಕು.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.