ಬೆಂಗಳೂರು : ಎಲ್ಲಾ ಭಾಗ್ಯಗಳ ಜೊತೆಗೆ ಇದೀಗ ರಾಜ್ಯ ಸರ್ಕಾರ ಟೂರ್ ಭಾಗ್ಯವನ್ನು ಪರಿಚಯಿಸಿದೆ. ಹೊಸ ವರ್ಷಕ್ಕೆ ರಾಜ್ಯದ ಭಕ್ತಾದಿಗಳಿಗೆ ರಾಜ್ಯದ ಕಾಂಗ್ರೆಸ್ ಸರ್ಕಾರ ಶುಭಸುದ್ದಿ ನೀಡಿದೆ.  ರಾಜ್ಯದ ಜನರಿಗಾಗಿ ಸರ್ಕಾರದಿಂದ ಮೂರು ಟೂರ್ ಭಾಗ್ಯವನ್ನು ಘೋಷಿಸಲಾಗಿದೆ. 


COMMERCIAL BREAK
SCROLL TO CONTINUE READING

ಮೂರು ಟೂರ್ ಪ್ಯಾಕೇಜ್ ಗಳಿಗೆ ಸಬ್ಸಿಡಿ ಘೋಷಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇದೇ ಮೊದಲ ಬಾರಿಗೆ ಪುರಿ ಜಗನ್ನಾಥ್, ದ್ವಾರಕ, ದಕ್ಷಿಣ ಕ್ಷೇತ್ರಗಳ ಪ್ರವಾಸಕ್ಕೆ ಸಹಾಯಧನ ಘೋಷಣೆ ಮಾಡಿದೆ. ಈ ಮೂಲಕ ಧಾರ್ಮಿಕ ದತ್ತಿ ಇಲಾಖೆ ಪುಣ್ಯ ಕ್ಷೇತ್ರಗಳ ದರ್ಶನ ಭಾಗ್ಯ ಕರುಣಿಸಿದೆ. 


ಇದನ್ನೂ ಓದಿ : ಪ್ರಯಾಣಿಕರಿದ್ದ ದೋಣಿಗೆ ನೌಕಾಪಡೆ ಸ್ಪೀಡ್‌ಬೋಟ್ ಡಿಕ್ಕಿ


ಸರ್ಕಾರದಿಂದ ದಕ್ಷಿಣ‌ಕ್ಷೇತ್ರಗಳ ಯಾತ್ರಾ, ದ್ವಾರಕಾ ಯಾತ್ರ, ಪುರಿಜಗನ್ನಾಥ ದರ್ಶನವನ್ನು ಆಯೋಜಿಸಲಾಗಿದೆ. 


ದಕ್ಷಿಣ ಕ್ಷೇತ್ರಗಳ ತೀರ್ಥಯಾತ್ರ ಸ್ಥಳಗಳು :
ದಕ್ಷಿಣ ಕ್ಷೇತ್ರಗಳ ತೀರ್ಥಯಾತ್ರೆ ಭಾಗಾವಾಗಿ ರಾಮೇಶ್ವರ - ಕನ್ಯಾಕುಮಾರಿ- ಮಧುರೈ, ತಿರುವನಂತಪುರಂ  ಹೀಗೆ ಆರು ದಿನಗಳ ತೀರ್ಥಯಾತ್ರೆ ಪ್ಯಾಕೇಜ್ ಅನ್ನು ಘೋಷಿಸಲಾಗಿದೆ. ಇದಕ್ಕೆ ಒಟ್ಟು 25,000, ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಈ ಪೈಕಿ ಸರ್ಕಾರದಿಂದ ₹10,000ರೂಪಾಯಿ ಸಬ್ಸಿಡಿ ನೀಡಲಾಗುವುದು. ಜೊತೆಗೆ 5,000 ಸಹಾಯಧನ ಸೇರಿದಂತೆ ಒಟ್ಟು 15000 ಸಾವಿರ ರೂಪಾಯಿಯನ್ನು ಸರ್ಕಾರವೇ  ಭರಿಸುತ್ತದೆ. ಯಾತ್ರಾರ್ಥಿಗಳು ಕೇವಲ 10,000 ರೂಪಾಯಿ ಪಾವತಿಸಿದರೆ ಸಾಕಾಗುತ್ತದೆ. 


ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ. 


ದ್ವಾರಕ ಮತ್ತು ಪುರಿ ಜಗನ್ನಾಥ ತೀರ್ಥ ಯಾತ್ರೆ : 
ದ್ವಾರಕ ಮತ್ತು ಪುರಿ ಜಗನ್ನಾಥ ತೀರ್ಥ ಯಾತ್ರೆ ಗೆ ಒಟ್ಟು ತಗಲುವ ವೆಚ್ಚ 32,500  ರೂಪಾಯಿ. ಈ ಪೈಕಿ ಸರ್ಕಾರ 17,500 ರೂ.ಗಳ ಸಬ್ಸಿಡಿ ನೀಡುತ್ತದೆ. ಉಳಿದಂತೆ 15,000 ಭಕ್ತಾದಿಗಳು ಪಾವತಿಸುವಂತೆ ಸೂಚನೆ ನೀಡಲಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.