ಬೆಂಗಳೂರು:  ಕಳೆದ ಐದು ವರ್ಷಗಳ ಅವಧಿಯಲ್ಲಿ ತಮ್ಮ ಭಾಗ್ಯಗಳ ಮೂಲಕ ಗಮನ ಸೆಳೆದ ಸಿದ್ದರಾಮಯ್ಯನವರು 40 ವರ್ಷಗಳಲ್ಲಿ ಪೂರ್ಣ ಐದು ವರ್ಷಗಳ ಅಧಿಕಾರಾವಧಿ ಪೂರೈಸಿದ ಮೊದಲ ಮುಖ್ಯಮಂತ್ರಿ ಎನ್ನುವ ಖ್ಯಾತಿ ಪಡೆದಿದ್ದಾರೆ. ಈಗ ಅವರ ರಾಜಕೀಯ ಜೀವನವನ್ನು ಕುರಿತಾಗಿ ಸಂಶೋಧನಾ ಪ್ರಬಂಧವೊಂದು ಹೊರಬಂದಿದೆ. 


COMMERCIAL BREAK
SCROLL TO CONTINUE READING

ಹೌದು, ಸಿದ್ದರಾಮಯ್ಯ 80 ರ ಅವಧಿಯಲ್ಲಿನ ರೈತ ಚಳುವಳಿ ಹಾಗೂ ಲೋಹಿಯಾವಾದಿ ಸಿದ್ದಾಂತಗಳಿಗೆ ಮಾರುಹೋಗಿ ರಾಜಕಾರಣಕ್ಕೆ ಪ್ರವೇಶಿಸಿದವರು. ನಂತರ ಕಾಲಾಂತರದಲ್ಲಿ  ತಮ್ಮ ಅಹಿಂದ ರಾಜಕಾರಣದ ಮೂಲಕ ರಾಜ್ಯದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದವರು, ಈಗ ಇಂತಹ  ವಿಶಿಷ್ಟ ಬದುಕನ್ನು ಹೊಂದಿರುವ ಅವರ ರಾಜಕೀಯ ಪಯಣ ಈಗ ಸಂಶೋಧನಾ ಅಧ್ಯಯನವಾಗಿ ಮಾರ್ಪಟ್ಟಿದೆ


ಧಾರವಾಡದಲ್ಲಿನ ಕರ್ನಾಟಕ ವಿಶ್ವವಿದ್ಯಾನಿಲಯದ ರಾಜ್ಯಶಾಸ್ತ್ರದ ವಿಧ್ಯಾರ್ಥಿ ಮಂಜುನಾಥ ಹೊಸಗೂರು ಎನ್ನುವವರು 2013 ರಿಂದ ಸಂಶೋಧನೆ ನಡೆಸಿ 'ಕರ್ನಾಟಕ ರಾಜಕೀಯದಲ್ಲಿ ಸಿದ್ದರಾಮಯ್ಯನವರ ಪಾತ್ರ' ಒಂದು ಅಧ್ಯಯನ' ಎನ್ನುವ ಪ್ರಬಂಧವನ್ನು ಮಂಡಿಸಿದ್ದಾರೆ.ಇವರಿಗೆ ಧಾರವಾಡದಲ್ಲಿನ ಕರ್ನಾಟಕದ ಕಲಾ ಕಾಲೇಜ್ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿರುವ  ಡಾ.ಸುರೇಶ ಹುಲ್ಲಣ್ಣರವರು ಮಾರ್ಗದರ್ಶನ  ನೀಡಿದ್ದಾರೆ.


ಈ ಪ್ರಬಂಧದಲ್ಲಿ ಸಂಶೋಧಕರು ಸಿದ್ದರಾಮಯ್ಯನವರ ಕುರಿತಾಗಿ ಹಲವರ ಅಭಿಪ್ರಾಯಗಳನ್ನು ಕಲೆಹಾಕಿರುವುದಲ್ಲದೆ ಅವರ ಅಪರೂಪದ  ರಾಜಕೀಯ ಮಾಹಿತಿಗಳನ್ನೂ ಅವರು ಸಂಗ್ರಹಿಸಿದ್ದಾರೆ.