ಬೆಂಗಳೂರು : ವಿವಿಧ ಕಾರ್ಯಕ್ರಮಗಳ  ಹಿನ್ನಲೆಯಲ್ಲಿ ನಾಳೆ ಬೆಂಗಳೂರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ   ಆಗಮಿಸುತ್ತಿದ್ದು, ಇದೇ ಸಂದರ್ಭದಲ್ಲಿ ಒಕ್ಕಲಿಗ, ವಾಲ್ಮೀಕಿ ಹಾಗೂ ಕುರುಬ ಸಮುದಾಯಗಳ ಓಲೈಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ರಾಜ್ಯಕ್ಕೆ ಮೋದಿ ಆಗಮನ: ಪ್ರಬಲ ಸಮುದಾಯಗಳ ಓಲೈಕೆಗೆ ಯತ್ನ ಸಾಧ್ಯತೆ:
‌ಚುನಾವಣೆ ಸಮೀಪಿಸುತ್ತಿರೋ ಹಿನ್ನಲೆ ಸಮುದಾಯಗಳತ್ತ ಬಿಜೆಪಿ ನಾಯಕರ ಕಣ್ಣು ಇಟ್ಟಿದ್ದಾರೆ. ಎಲೆಕ್ಷನ್ ಗೇಮ್ ಪ್ಲಾನ್ ರೂಪಿಸಿರೋ ಕೇಸರಿ ನಾಯಕರು ಸಮುದಾಯದ ಒಲೈಕೆಗೆ ಮುಂದಾಗಿದ್ದಾರೆ. ನಾಳೆ ಅಂದರೆ ನವಂಬರ್ 11 ರಂದು ಕೆಂಪೇಗೌಡ ಪ್ರತಿಮೆ ಉದ್ಘಾಟನೆನೆ ಪ್ರಧಾನಿ ಆಗಮನ ಜೊತೆಗೆ ಈ ಮೂಲಕ ಸಮುದಾಯದ ಜೊತೆ ನಾವೀದ್ದೇವೆ ಎನ್ನೋ ಮೆಸೇಜ್ ರವಾನೆ ಮಾಡುವ ಉದ್ದೇಶ ಕೂಡ ಇದೇ ಎಂದು ಹೇಳಲಾಗುತ್ತಿದೆ.


ಒಕ್ಕಲಿಗ ಸಮುದಾಯ :
ರಾಜ್ಯ ರಾಜಕೀಯದಲ್ಲಿ ತನ್ನದೆಯಾದ ಅಸ್ಥಿತ್ವ ಹೊಂದಿರೋ ಪ್ರಬಲ ಸಮುದಾಯದ ಒಕ್ಕಲಿಗ ಸಮುದಾಯ. ಆ ಸಮಯದಾಯ ಪಾತ್ರ ರಾಜ್ಯ ರಾಜಕೀಯದಲ್ಲಿ ನಿರ್ಣಾಯಕ ಆಗಿದೆ. ಹೀಗಾಗಿ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗಿಲ್ಲ ಗಟ್ಟಿ ನೆಲೆ ಮಾಡಿಕೊಳ್ಳಬೇಕು. ಸದ್ಯಕ್ಕೆ  ಜೆಡಿಎಸ್  ಮತ್ತು ಕಾಂಗ್ರೆಸ್ ನ ಒಕ್ಕಲಿಗ ನಾಯಕರು ಈ ಭಾಗದಲ್ಲಿ ಮುನ್ನಲೆಯಲ್ಲಿದ್ದಾರೆ.
ಇದನ್ನ ಚಿದ್ರಪಡಿಸಿ  ಬುಟ್ಟಿಗೆ ಹಾಕಿಕೋಳ್ಳಲು ಬಿಜೆಪಿ ಪ್ಲಾನ್ ರೂಪಿಸಿದೆ. ಮೋದಿ ಮೂಲಕ ಒಕ್ಕಲಿಗ ಮತಗಳನ್ನ ಸೆಳೆಯಲು ಕೆಂಪೇಗೌಡ ಪ್ರತಿಮೆ  ಉದ್ಘಾಟನೆ ಮಾಡಿದ ಸಂದರ್ಭದಲ್ಲಿ ಒಕ್ಕಲಿಗರ ಪರ 12% ಮೀಸಲಾತಿಗೆ ಬೇಡಿಕೆ ಇಡೋ ಸಾಧ್ಯತೆ ಕೂಡ ಇದೇ.


ಇದನ್ನೂ ಓದಿ- 7th Pay Commission: ದಿನ ಒಂದು ಗಂಟೆ ಹೆಚ್ಚು ಕೆಲಸ ಮಾಡುವಂತೆ ಸರ್ಕಾರಿ ನೌಕರರಿಗೆ ಸಿಎಂ ಕರೆ


ವಾಲ್ಮೀಕಿ ಹಾಗೂ ಕುರುಬ ಸಮುದಾಯ :
ಇನ್ನು ಲಿಂಗಾಯತ ಮತಗಳ ಸೆಳೆದಿರುವ ಬಿಜೆಪಿ, ಈಗ ವಾಲ್ಮೀಕಿ ಹಾಗೂ ಕುರುಬ ಸಮುದಾಯ ಮತಗಳನ್ನು ಸೆಳೆಯಬೇಕು ಎಂದು ಪಣ ತೊಟ್ಟಿದೆ. ನಾಳೆ ಪಿಎಂ ಮೋದಿ ವಿಧಾನಸೌಧದ ವಾಲ್ಮೀಕಿ ಪ್ರತಿಮೆಗೆ ಹಾಗೂ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಮತ ಸೇಯುವ ತಂತ್ರಕ್ಕೆ ಮೋದಿ ಅವರು ಪ್ರಾರಂಭ ಮಾಡಲಿದ್ದಾರೆ.


ವಾಲ್ಮೀಕಿ ಸಮುದಾಯ ಸದ್ಯ ಎಸ್ ಟಿ ಪಂಗಡಕ್ಕೆ ಸೇರಿದೆ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಅವರಿಗೆ ಮೀಸಲಾತಿಯನ್ನ ಹೆಚ್ಚಿಸಿದೆ. ಈ ಮೂಲಕ ವಾಲ್ಮೀಕಿ ಹಾಗೂ ಎಸ್ ಟಿ ಸಮುದಾಯ ಮತ ಗಟ್ಟಿ ಪಡೆಸಿಕೊಂಡಿದೆ. 


ಇನ್ನು ಕುರುಬ ಸಮುದಾಯಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಬ್ಬರೇ ನಾಯಕರು ಎಂಬ ಮಾತನ್ನ ಹೋಗಲಾಡಿಸಲು ಬಿಜೆಪಿ ರಣತಂತ್ರ ರೂಪಿಸಿದೆ, ಪ್ರಾದೇಶಿಕ ಮಟ್ಟದಲ್ಲಿ ನಾಯಕರನ್ನ ಬೆಳೆಸುವ ಜೊತೆಗೆ ಪಕ್ಷದಲ್ಲಿರುವ ಕುರುಬ ನಾಯಕರಿಗೆ ಹೆಚ್ಚಿನ ಜವಾಬ್ದಾರಿ ನೀಡುವ ತಂತ್ರ ಅನುಸರಿಸಲಿದೆ. ಹೀಗಾಗಿ ವಾಲ್ಮೀಕಿ ಹಾಗೂ ಕನಕದಾರ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ.


ಇದನ್ನೂ ಓದಿ- ಬೆಂಗಳೂರಿಗೆ ಮೋದಿ ಪ್ರವಾಸ : ಕಾರ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ


ಒಟ್ಟಾರೆ 2023 ಚುನಾವಣೆಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲು ಹರಸಾಹಾಸ ಪಡುತ್ತಿದೆ. ಮೋದಿ, ಶಾ ಹಾಗೂ ಯೋಗಿ ರಾಜ್ಯ ಪ್ರವಾಸ ಮಾಡಿ ರಾಜ್ಯ ಬಿಜೆಪಿಗೆ ಹೆಚ್ಚಿನ ಶಕ್ತಿ ತುಂಬಲಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.